Koppala News: ಅರಣ್ಯ ಇಲಾಖೆ ಪೊಲೀಸ್ ಎಂದು ಹೇಳಿಕೊಂಡು ಹಣ ವಸೂಲಿ; ಆರೋಪಿ ಬಂಧನ

|

Updated on: Jun 18, 2023 | 2:50 PM

ಅರಣ್ಯ ಇಲಾಖೆ ಪೊಲೀಸ್​ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನ ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯ್ ಬಂಧಿತ ಆರೋಪಿ.

Koppala News: ಅರಣ್ಯ ಇಲಾಖೆ ಪೊಲೀಸ್ ಎಂದು ಹೇಳಿಕೊಂಡು ಹಣ ವಸೂಲಿ; ಆರೋಪಿ ಬಂಧನ
ಆರೋಪಿ
Follow us on

ಕೊಪ್ಪಳ: ಅರಣ್ಯ ಇಲಾಖೆ ಪೊಲೀಸ್(Police)​ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯನ್ನ ಕೊಪ್ಪಳ(Koppala) ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯ್ ಬಂಧಿತ ಆರೋಪಿ. ಗದಗ ಜಿಲ್ಲೆಯ ಗಂಗಾಪುರಪೇಟೆಯ ನಿವಾಸಿಯಾದ ಆರೋಪಿ ಸಂಜಯ್ ಮೇ 25ರಂದು ಕೊಪ್ಪಳದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬೈಕ್ ಸವಾರ ಬೊಚನಹಳ್ಳಿಯ ಹನುಮೇಶ್ ಬಳಿ ಹಣ ವಸೂಲಿ ಮಾಡಿದ್ದ. ಗಂಧದ ಕಟ್ಟಿಗೆ ಕಳವುವಾಗಿದೆ, ನಿಮ್ಮ ಮೇಲೆ ಅನುಮಾನವಿದೆ ಎಂದಿದ್ದ ಸಂಜಯ್​ ಹನುಮೇಶ್​ ಬಳಿ 49,000 ನಗದು, 2 ಚಿನ್ನದ ಉಂಗುರ ದೋಚಿದ್ದನು. ಈ ಕುರಿತು ಹನುಮೇಶ್ ಅನುಮಾನ ಬಂದು ಗ್ರಾಮೀಣ ಠಾಣೆಗೆ ದೂರು ನೀಡಿದ್ದನು. ಇದೀಗ ಬೈಕ್ ಸವಾರ ಹನುಮೇಶ್ ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ.

ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡ್ತಿವಿ ಎಂದು ನಂಬಿಸಿ ಚಿನ್ನ ವಸೂಲಿ; ನಂಬಿದವರಿಗೆ ಪಂಗನಾಮ ಹಾಕಿದ ಸಹಕಾರ ಸಂಘ

ಚಾಮರಾಜನಗರ: ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ ಎಂದು ನಂಬಿದವರಿಗೆ ಪಂಗನಾಮ ಹಾಕಿದ ಘಟನೆ ಚಾಮರಾಜನಗರ ತಾಲೂಕಿನ ಮಲೆಯೂರಿನಲ್ಲಿ ನಡೆದಿದೆ. ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೊಸೈಟಿ ಆಡಳಿತ ಮಂಡಳಿಯವರು ರೈತರು ಅಡವಿಟ್ಟಿದ್ದ ಚಿನ್ನಾಭರಣವನ್ನ ಖಾಸಗಿ ಫೈನಾನ್ಸ್ ಗಳಲ್ಲಿ ಅಡವಿಟ್ಡು ದೋಖಾ ಮಾಡಿರುವ ಆರೋಪ ಕೇಳಿಬಂದಿದೆ. ಅಂದಾಜು 3.20 ಕೋಟಿ ರೂಪಾಯಿ ದೋಖಾ ಮಾಡಲಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡ್ತಿವಿ ಎಂದು ಚಿನ್ನ ಇಟ್ಟುಕೊಂಡಿದ್ದಾರೆ. ಈಗ ಚಿನ್ನ ಕೇಳಿದ್ರೆ, ಏನೇನೋ ಕಥೆ ಹೇಳುತ್ತಿದ್ದಾರೆ. ನೆಮ್ಮದಿಯಿಂದ ಊಟ ಮಾಡೋಕೆ ಆಗ್ತಿಲ್ಲ. ಪಡೆದಿದ್ದ ಸಾಲ ವಾಪಸ್ ಕಟ್ಟುತ್ತಿವಿ ಅಂದ್ರು ತಗೊಳ್ತಿಲ್ಲ. ಈ ವಿಚಾರವಾಗಿ ಮನೆಯಲ್ಲಿ ನೆಮ್ಮದಿ ಹಾಳಾಗಿದೆ. ನಮಗೆ ನ್ಯಾಯ ಕೊಡಿಸಿ ಎಂದು ರೈತರು ಅಂಗಲಾಚುತ್ತಿದ್ದಾರೆ.

ಇದನ್ನೂ ಓದಿ:ನಟಿಯ ತಾಯಿ ಬಳಿ ಹೋಂಗಾರ್ಡ್ ಹಣ ವಸೂಲಿ ಮಾಡಿದ ಪ್ರಕರಣ, ಹೊರಬಿತ್ತು ತಾಯಿಯ ಮಸಾಜ್ ಪಾರ್ಲರ್​​ನ ಚಿನ್ನದ ಕಥೆ!

ಚಲಿಸುತ್ತಿದ್ದ ಬಸ್‌ನಿಂದ ಆಯ ತಪ್ಪಿ ಬಿದ್ದ ಬಾಲಕಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಬೆಳಗಾವಿ: ಚಲಿಸುತ್ತಿದ್ದ ಬಸ್‌ನಿಂದ ಆಯ ತಪ್ಪಿ ಬಾಲಕಿಯೊಬ್ಬಳು ಬಸ್​ನಿಂದ ಬಿದ್ದ ಘಟನೆ ಜಿಲ್ಲೆಯ ರಾಮದುರ್ಗ ಬಸ್ ನಿಲ್ದಾಣದಲ್ಲಿ ನಡೆದಿದೆ. ಇಂದು(ಜೂ.18) ವೀಕೆಂಡ್ ಜೊತೆ ಆಷಾಡ ಅಮಾವಾಸ್ಯೆಯಿದ್ದು, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಸರ್ಕಾರಿ ಬಸ್‌ಗಳು ಫುಲ್‌ ಆಗಿ ಹೋಗುತ್ತಿವೆ. ಇದರಿಂದ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣ ಮಾಡುತ್ತಿದ್ದಾರೆ. ಈ ವೇಳೆ ಬಸ್‌ನ ಫುಟ್ ಬೋರ್ಡ್‌‌ ಮೇಲೆ ನಿಂತಿದ್ದ ಬಾಲಕಿ ಏಕಾಎಕಿ ಬಸ್‌ ಚಲಿಸುತ್ತಿದ್ದಂತೆ ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:50 pm, Sun, 18 June 23