ಹಾಲಪ್ಪ ಆಚಾರ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಬಸವರಾಜ ರಾಯರೆಡ್ಡಿ ವಿರುದ್ಧ ತೀವ್ರ ಆಕ್ರೋಶ
ಪರೋಕ್ಷವಾಗಿ ಹಾಲಪ್ಪ ಆಚಾರ್ಗೆ ಮಕ್ಕಳು ಇಲ್ಲ ಅಂತ ರಾಯರೆಡ್ಡಿ ವ್ಯಂಗ್ಯವಾಗಿ ಮಾತನಾಡಿದ್ದರು. ರಾಯರೆಡ್ಡಿ ಮಾತಿಗೆ ಸಚಿವ ಹಾಲಪ್ಪ ಆಚಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ: ಸಚಿವ ಹಾಲಪ್ಪ ಆಚಾರ್ರವರ (Halappa Achar) ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ (Basavaraj Rayareddy) ನಡೆಗೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿದೆ. ಹಾಲಪ್ಪ ಆಚಾರ್ ವೈಯಕ್ತಿಕ ಬದುಕಿನ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬಸವರಾಜ ರಾಯರೆಡ್ಡಿ, ‘6 ಹಡೆದಾಕೆ ಮುಂದೆ 3 ಹಡೆದಾಕೆ ಏನು ಮಾಡುತ್ತಾಳೆ’ ಎಂದಿದ್ದರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಬಸವರಾಜ ರಾಯರೆಡ್ಡಿ ಮಾತನಾಡಿದ್ದರು. ಮಾತಿನ ಭರದಲ್ಲಿ ಸಚಿವ ಹಾಲಪ್ಪ ಆಚಾರ್ ವೈಯಕ್ತಿಕ ಜೀವನವನ್ನ ರಾಯರೆಡ್ಡಿ ಟೀಕಿಸಿದ್ದರು.
ಪರೋಕ್ಷವಾಗಿ ಹಾಲಪ್ಪ ಆಚಾರ್ಗೆ ಮಕ್ಕಳು ಇಲ್ಲ ಅಂತ ರಾಯರೆಡ್ಡಿ ವ್ಯಂಗ್ಯವಾಗಿ ಮಾತನಾಡಿದ್ದರು. ರಾಯರೆಡ್ಡಿ ಮಾತಿಗೆ ಸಚಿವ ಹಾಲಪ್ಪ ಆಚಾರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲಪ್ಪ ಆಚಾರ್ ಬೆಂಬಲಿಗರಾದ ವೀರಣ್ಣ ಹುಬ್ಬಳ್ಳಿ ಎಂಬುವವರು, ಹಾಲಪ್ಪ ಆಚಾರ್ ವೈಯಕ್ತಿಕ ಬದುಕಿನ ಬಗ್ಗೆ ಮಾತಾನಡಿದ್ದಕ್ಕೆ ನಿನಗೆ ನಾಚಿಕೆಯಾಗಬೇಕು. ನಿನ್ನ ಮಾತಿನಿಂದ ಹಾಲಪ್ಪ ಆಚಾರ್ ಮಡದಿಗೆ ಎಷ್ಟು ನೋವಾಗಿದೆ. ನನ್ನ ಮಾತನಿಂದ ನಿನ್ನ ಮಡದಿಗೂ ನೋವಾಗಬೇಕು ಅಂತ ಆಕ್ರೋಶ ಹೊರಹಾಕಿದ್ದಾರೆ.
ಆರ ಹಡದಾಕೆ ಮುಂದೆ ಮೂರ ಹಡದಾಕೆ ಏನ್ ಮಾಡ್ತಾಳೆ ಅಂತೀಯಾ? ನಿನಗೆ ಇರೋದು ಒಂದೇ ಹೆಣ್ಣು ಮಗು. ಉಳಿದ ಐದು ಮಕ್ಕಳನ್ನ ಬೀದಿಗೆ ಬಿಟ್ಟಿದ್ದೀಯಾ. ನಿನ್ನ ಮಕ್ಕಳು ಎಲ್ಲಿದ್ದಾವೆ? ಈ ಹೆಣ್ಣು ಮಗು ನಿನಗೆ ಹುಟ್ಟಿದೆ ಅನ್ನೋದಕ್ಕೆ ಆಧಾರ ಏನಿದೆ ಅಂತ ಹಾಲಪ್ಪ ಆಚಾರ್ ಬೆಂಬಲಿಗರು ಕೇಳಿದ್ದಾರೆ. ನೀರಿನಿಂದ ಮೀನು ಹೊರಗೆ ತಗೆದಂತೆ ರಾಯರೆಡ್ಡಿ ವಿಲ ವಿಲ ಅಂತ ಒದ್ದಾಡುತ್ತಿದ್ದಾರೆಂದು ಬೆಂಬಲಿಗರು ಹೇಳಿದ್ದಾರೆ.
ಇದನ್ನೂ ಓದಿ
ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ನಂದಿ ಬೆಟ್ಟದಲ್ಲಿ ಗುಡ್ಡ ಕುಸಿತ: ಪ್ರವಾಸಿಗರನ್ನು ವಾಪಸ್ ಕಳಿಸುತ್ತಿರುವ ಪೊಲೀಸರು
(Halappa Achar supporters express outrage against former minister Basavaraj Rayareddy in koppal)