Love Jihad ಇನ್ಸ್ಟಾಗ್ರಾಂ ಮೂಲಕ‌ ಇನ್ಸ್​ಟೆಂಟ್ ಲವ್ ಜಿಹಾದ್? ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುವ ಹಿಂದೂ ಯುವತಿ

ಬಲವಂತದ ಮತಾಂತರದ ಕುರಿತು ಸಹ ಪೊಲೀಸರು ತನಿಖೆ ನಡೆಸಿದ್ದಾರೆ. ಮನಃಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ‌ ನೀಡಿದ್ದಾರೆ.

Love Jihad ಇನ್ಸ್ಟಾಗ್ರಾಂ ಮೂಲಕ‌ ಇನ್ಸ್​ಟೆಂಟ್ ಲವ್ ಜಿಹಾದ್? ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿರುವ ಹಿಂದೂ ಯುವತಿ
ಇನ್ಸ್ಟಾಗ್ರಾಂ ಮೂಲಕ‌ ಇನ್ಸ್​ಟೆಂಟ್ ಲವ್ ಜಿಹಾದ್?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 24, 2022 | 4:14 PM

ಕೊಪ್ಪಳ: ಇಂದಿನ ಸಾಮಾಜಿಕ ಜಾಲತಾಣ ಜಮಾನಾಗೆ ತಕ್ಕಂತೆ ಇನ್ಸ್ಟಾಗ್ರಾಂ (Love Marriage) ಮೂಲಕ‌ ನಡೆಯಿತಾ ಲವ್ ಜಿಹಾದ್ ಎಂಬ ಶಂಕೆ ವ್ಯಕ್ತವಾಗಿದೆ. ಇನ್ಸ್ಟಾಗ್ರಾಂನಲ್ಲಿ ಹಿಂದೂ (Hindu) ಯುವತಿ ಮುಸ್ಲಿಂ (Muslim) ಯುವಕ ನಡುವೆ ಪ್ರೀತಿ ಮೊಳಕೆಯೊಡೆದಿದೆ (Love Marriage). ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಈ ಇನ್ಸ್​ಟೆಂಟ್​​ ಇನ್ಸ್ಟಾಗ್ರಾಂ ಲವ್ ಪ್ರಕರಣ ವರದಿಯಾಗಿದೆ. ಹೈದ್ರಾಬಾದ್ ಮೂಲದ ಯುವಕ ಶೇಕ್ ವಹಿದ್ ಹಾಗೂ ಕೊಪ್ಪಳ ಜಿಲ್ಲೆಯ ಕುಷ್ಟಗಿ (Kushtagi) ಪಟ್ಟಣದ ಇಂದಿರಾನಗರದ ಯುವತಿ ಮದುವೆಯಾದ ಜೋಡಿ ಎಂದು ತಿಳಿದುಬಂದಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಇನ್ಸ್ಟಾಗ್ರಾಂ ನಲ್ಲಿ ಈ ಜೋಡಿ ಪರಿಚಯವಾಗಿದೆ. ಮೊದಲು ಸ್ನೇಹ ಬೆಳೆದು, ಬಳಿಕ‌ ಪ್ರೀತಿಗೆ ತಿರುಗಿದೆ ಆ ಸ್ನೇಹ. ಸದ್ಯ ಪ್ರೇಮ ವಿವಾಹವಾಗಿರುವ ಜೋಡಿ. ಮುಸ್ಲಿಂ ಸಾಂಪ್ರದಾಯದಂತೆ ಯುವತಿ ಮದುವೆಯಾಗಿದ್ದಾರೆ. ಯವತಿ, ಮನೆ ಬಿಟ್ಟು ಹೋಗಿ ಮದುವೆಯಾಗಿದ್ದಾರೆ. ಕುಷ್ಟಗಿ ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣ (Love Jihad) ನಡೆದಿದೆ ಎನ್ನೋ ಆರೋಪ ಎದುರಾಗುತ್ತಿದ್ದಂತೆ ಇಬ್ಬರೂ ಪ್ರೇಮಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ: ಸಿನಿಮಾ ವೀಕ್ಷಿಸಿಲು ಬಂದಿದ್ದ ಅನ್ಯಕೋಮಿನ ಜೋಡಿಗೆ ಎದುರಾದ ಬಜರಂಗದಳ

ಬಲವಂತದ ಮತಾಂತರದ ಕುರಿತು ಸಹ ಪೊಲೀಸರು ತನಿಖೆ ನಡೆಸಿದ್ದಾರೆ. ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ‌ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:11 pm, Sat, 24 December 22