Crime News: ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟವನನ್ನೇ ಚಾಕು ಇರಿದು ಪರಾರಿಯಾದ ಸುಪಾರಿ ಕಿಲ್ಲರ್, ಕಾರಣವೇನು ಗೊತ್ತಾ?
ಹಣಕಾಸಿನ ವಿಚಾರಕ್ಕೆ ಕಿಲ್ಲರ್ ಮತ್ತು ಯೋಗೇಶ ನಡುವೆ ಗಲಾಟೆಯಾಗಿದೆ. ಈ ವೇಳೆ ತಂದೆ-ತಾಯಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಯೋಗೇಶ್ ದೇಸಾಯಿಗೆ ಚಾಕು ಇರಿದು ಕಿಲ್ಲರ್ಗಳು ಪರಾರಿಯಾಗಿದ್ದಾರೆ.
ಕೊಪ್ಪಳ: ಸುಪಾರಿ ಪಡೆದವರೇ ಸುಪಾರಿ ಕೊಟ್ಟವನಿಗೆ ಚಾಕು ಇರಿದಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯ ಜಯ ನಗರದಲ್ಲಿ ನಡೆದಿದೆ. ಸುಪಾರಿ ಕಿಲ್ಲರ್ ಯೋಗೇಶ್ ದೇಸಾಯಿ ಎಂಬುವವರಿಗೆ ಚಾಕು ಇರಿದು ಪರಾರಿಯಾಗಿದ್ದಾನೆ. ಯೋಗೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ವೃತ್ತಿಯಲ್ಲಿ ವಕೀಲನಾಗಿರುವ ಯೋಗೇಶ್ ದೇಸಾಯಿ, ತಮ್ಮ ತಂದೆ ಕೊಲೆಗೆ ಸುಪಾರಿ ನೀಡಿದ್ದ ಎಂಬ ಸ್ಪೋಟಕ ವಿಚಾರ ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆಸ್ತಿ ವಿಚಾರಕ್ಕೆ ಮಲತಾಯಿ ಹಾಗೂ ತಂದೆ ಕೊಲೆ ಮಾಡಲು ಯೋಗೇಶ್ ಬೆಂಗಳೂರಿನಿಂದ ಇಬ್ಬರನ್ನು ಕರೆ ತಂದಿದ್ದ. ಆದ್ರೆ ಹಣಕಾಸಿನ ವಿಚಾರಕ್ಕೆ ಕಿಲ್ಲರ್ ಮತ್ತು ಯೋಗೇಶ ನಡುವೆ ಗಲಾಟೆಯಾಗಿದೆ. ಈ ವೇಳೆ ತಂದೆ-ತಾಯಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟ ಯೋಗೇಶ್ ದೇಸಾಯಿಗೆ ಚಾಕು ಇರಿದು ಕಿಲ್ಲರ್ಗಳು ಪರಾರಿಯಾಗಿದ್ದಾರೆ. ಯೋಗೇಶ್ನ ಈ ಪ್ಲಾನ್ಗೆ ತಂಗಿ ರೂಪ ಮತ್ತು ಅಳಿಯ ಆನಂದ ಕೈ ಜೋಡಿಸಿದ್ದರು ಎಂದು ತಿಳಿದು ಬಂದಿದೆ. ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ ಪ್ರಕರಣ: ಬೆಂಗಳೂರು ಪೊಲೀಸರಿಂದ ತೀವ್ರಗೊಂಡ ವಿಚಾರಣೆ
ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ, ಕೊಲೆಯಲ್ಲಿ ಅಂತ್ಯ
ಹಾಸನ ಜಿಲ್ಲೆ ಬೇಲೂರು ತಾ. ತಿರುಮನಹಳ್ಳಿ ಗ್ರಾಮದಲ್ಲಿ ಇಬ್ಬರು ಯೋಧರ ಕುಟುಂಬದ ನಡುವೆ ಮಾರಾಮಾರಿಯಾಗಿದೆ. ಜಗಳದ ಮಧ್ಯೆ ಯೋಧನ ತಮ್ಮನನ್ನು ಮತ್ತೊಂದು ಕುಟುಂಬದ ಯೋಧ ಚಂದನ್ ಕೊಚ್ಚಿ ಕೊಲೆ ಮಾಡಿದ್ದಾನೆ.
ಗ್ರಾ.ಪಂ ಅಧಿಕಾರಿಗಳ ಸಮ್ಮುಖದಲ್ಲಿ ಜಾಗದ ಸರ್ವೆ ಕಾರ್ಯ ನಡೆಯುವ ವೇಳೆ ಯೋಧರ ಎರಡು ಕುಟುಂಬಗಳ ನಡುವೆ ಜಗಳ ಶುರುವಾಗಿದೆ. ಈ ವೇಳೆ ಯೋಧ ಚಂದನ್ ಆತನ ತಮ್ಮ ಅಶ್ವಥ್ ಮತ್ತು ಯೋಧ ಯತೀಶ್ ಆತನ ತಮ್ಮ ಯಶ್ವಂತ್ ನಡುವೆ ಮಾರಾಮಾರಿಯಾಗಿದ್ದು ಜಗಳದ ಮಧ್ಯೆ ನೋಡ ನೋಡುತ್ತಲೆ ಕುಡುಗೋಲಿನಿಂದ ಯೋಧ ಚಂದನ್, ಯಶ್ವಂತ್ನ ಕೈ ಕೊಚ್ಚಿ ಹಾಕಿದ್ದಾನೆ. ಗಲಾಟೆ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ. ತೀವ್ರ ರಕ್ತ ಸ್ರಾವದಿಂದ ಆಸ್ಪತ್ರೆಯಲ್ಲಿ ಯಶ್ವಂತ್ ಸಾವನ್ನಪ್ಪಿದ್ದಾನೆ. ಇನ್ನು ಯಶ್ವಂತ್ ಅಣ್ಣ ಯೋಧ ಯತೀಶ್ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. ಆಸ್ಪತ್ರೆಯಲ್ಲಿ ಯೋಧ ಯತೀಶ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹಳೇಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Published On - 3:06 pm, Sun, 20 November 22