AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ ಪ್ರಕರಣ: ಬೆಂಗಳೂರು ಪೊಲೀಸರಿಂದ ತೀವ್ರಗೊಂಡ ವಿಚಾರಣೆ

ಪಾಕ್ ಪರ ಘೋಷಣೆಯ ಹಿಂದೆ ಯಾವುದಾದರೂ ಸಂಘಟನೆಗಳು ಇವೆಯೇ? ಈ ವಿದ್ಯಾರ್ಥಿಗಳು ಯಾವುದಾದರೂ ಉಗ್ರಗಾಮಿ ಸಂಘಟನೆಯನ್ನು ಸಂಪರ್ಕಿಸಿದ್ದರೇ ಎನ್ನುವ ವಿಚಾರದ ಬಗ್ಗೆಯೂ ಪೊಲೀಸರು ಗಮನ ಹರಿಸಿದ್ದಾರೆ.

ವಿದ್ಯಾರ್ಥಿಗಳಿಂದ ಪಾಕ್ ಪರ ಘೋಷಣೆ ಪ್ರಕರಣ: ಬೆಂಗಳೂರು ಪೊಲೀಸರಿಂದ ತೀವ್ರಗೊಂಡ ವಿಚಾರಣೆ
ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ವಿದ್ಯಾರ್ಥಿಗಳು
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Nov 20, 2022 | 2:10 PM

Share

ಬೆಂಗಳೂರು: ನ್ಯೂ ಹೊರೈಜಾನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣದ ವಿಚಾರಣೆಯನ್ನು ಬೆಂಗಳೂರು ಪೊಲೀಸರು ತೀವ್ರಗೊಳಿಸಿದ್ದಾರೆ. ವಿದ್ಯಾರ್ಥಿಗಳು ತಮಾಷೆಗೆ ಘೋಷಣೆ ಕೂಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಾರತ್ತಹಳ್ಳಿ‌ ಪೊಲೀಸರು ವಿಚಾರಣೆ ಮುಂದುವರಿಸಲು ನಿರ್ಧರಿಸಿದ್ದಾರೆ. ಮತ್ತೊಮ್ಮೆ ನಾಳೆ (ನ 21) ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗಬೇಕೆಂದು ಮೂವರೂ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.

ಮೂವರ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ವಿಧಿವಿಜ್ಞಾನ (ಎಫ್​ಎಸ್ಎಲ್) ಪ್ರಯೋಗಶಾಲೆಗೆ ತಪಾಸಣೆಗೆ ಕಳುಹಿಸಲಾಗಿದೆ. ಪಾಕ್ ಪರ ಘೋಷಣೆಯ ಹಿಂದೆ ಯಾವುದಾದರೂ ಸಂಘಟನೆಗಳು ಇವೆಯೇ? ಈ ವಿದ್ಯಾರ್ಥಿಗಳು ಯಾವುದಾದರೂ ಉಗ್ರಗಾಮಿ ಸಂಘಟನೆಯನ್ನು ಸಂಪರ್ಕಿಸಿದ್ದರೇ? ವಿದ್ಯಾರ್ಥಿಗಳಿಗೆ ಪಾಕಿಸ್ತಾನ ಮೂಲದ ವ್ಯಕ್ತಿಗಳ ಸಂಪರ್ಕವಿದೆಯೇ ಎಂಬ ಸಂಗತಿ ತಿಳಿಯಲು ಪೊಲೀಸರು ಯತ್ನಿಸುತ್ತಿದ್ದಾರೆ. ಇದೀಗ ಮೊಬೈಲ್​ನ ದತ್ತಾಂಶವನ್ನು ರಿಟ್ರೀವ್ ಮಾಡಲು ಎಫ್​ಎಸ್ಎಲ್​ಗೆ ಕಳಿಸಲಾಗಿದೆ.

ಮೂವರು ವಿದ್ಯಾರ್ಥಿಗಳ ನಂಬರ್​ಗಳಿಂದ ಹೋಗಿರುವ ಮತ್ತು ಅವರ ಮೊಬೈಲ್​ಗೆ ಬಂದಿರುವ ಕರೆಗಳ ವಿವರವನ್ನೂ ಪರಿಶೀಲಿಸಲಾಗುತ್ತಿದೆ. ಮೂವರು ವಿದ್ಯಾರ್ಥಿಗಳು ವಾಸಿಸುತ್ತಿರುವ ಮನೆ ಹಾಗೂ ಕೊಠಡಿಗಳನ್ನೂ ಪೊಲೀಸರು ಪರಿಶೀಲಿಸಿದ್ದಾರೆ. ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎನ್​ಐ ಜೊತೆಗೆ ಹಂಚಿಕೊಳ್ಳಲಾಗಿದೆ. ದೇಶದ‌ ಭದ್ರತೆಗೆ ಸಮಬಂಧಿಸಿದ ವಿಷಯವಾಗಿರುವುದರಿಂದ ಪೊಲೀಸರು ಈ ಪ್ರಕರಣವನ್ನು ಸಂಪೂರ್ಣವಾಗಿ ಪರಿಶೀಲಿಸಲು ಮುಂದಾಗಿದ್ದಾರೆ.

ಮೊದಲ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಆರ್ಯನ್, ದಿನಕರ್‌, ರಿಯಾ ರವಿಚಂದ್ರ ಕಾಮೇಡ್ಕರ್‌ ಘೋಷಣೆ ಕೂಗಿದ ವಿದ್ಯಾರ್ಥಿಗಳು. ಇವರನ್ನು ಇತರ ವಿದ್ಯಾರ್ಥಿಗಳು ಥಳಿಸಲು ಮುಂದಾಗಿದ್ದರು. ಇವರು ನಂತರ ಉಳಿದ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಿದರು. ‘ತಮಾಷೆಗೆಂದು ಹೀಗೆ ಮಾಡಿದೆವು’ ಎಂದು ವಿದ್ಯಾರ್ಥಿಗಳು ನಂತರ ಸ್ಪಷ್ಟನೆ ನೀಡಿದರು. ಮಾರತ್ತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.