ಕಸದ ವಿಚಾರಕ್ಕೆ ಪೊಲೀಸ್ ಕುಟುಂಬಗಳ ನಡುವೆ ಗಲಾಟೆ: ಪೇದೆಯಿಂದ ವೃದ್ಧೆ ಮೇಲೆ ಹಲ್ಲೆ ಆರೋಪ
ಕಸದ ವಿಚಾರಕ್ಕೆ ಪೊಲೀಸ್ ಕುಟುಂಬಗಳ ನಡುವೆ ಗಲಾಟೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು: ಕಸದ ವಿಚಾರಕ್ಕೆ ಪೊಲೀಸ್ ಕುಟುಂಬಗಳ (Polices Families) ನಡುವೆ ಗಲಾಟೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆಯಲ್ಲಿ ಪೊಲೀಸ್ ಸಿಬ್ಬಂದಿ ತಾಯಿ ನರಸಮ್ಮ (70)ಗೆ ಗಾಯವಾಗಿದೆ. ಮಡಿವಾಳದ ಕೆಎಎಸ್ಆರ್ಪಿ ಪೊಲೀಸ್ ಕ್ವಾಟರ್ಸ್ನಲ್ಲಿ, ಕೆಎಸ್ಆರ್ಪಿಯ 4ನೇ ಬೆಟಾಲಿಯನ್ನ ಅಸಿಸ್ಟೆಂಟ್ ಡಿಸರ್ವ್ ಸಬ್ಇನ್ಸ್ಪೆಕ್ಟರ್ ನಾಗರಾಜು ಮತ್ತು ಕೆಎಸ್ಆರ್ಪಿ 3ನೇ ಬೆಟಾಲಿಯನ್ನ ಮುಖ್ಯಪೇದೆ ವೆಂಕಟಾಚಲಪತಿ ಕುಟುಂಬ ವಾಸಿಸುತ್ತವೆ. ಇಬ್ಬರದು ಅಕ್ಕ-ಪಕ್ಕದ ಮನೆಯಾಗಿದೆ.
ನಾಗರಾಜು ಕುಟುಂಬದವರು ನವೆಂಬರ್ 15ರ ಸಂಜೆ 7:30ರ ಸುಮಾರಿಗೆ ಮನೆ ಹೊರಗೆ ಕಸ ಹಾಕಿದ್ದರು. ಕಸ ನಮ್ಮ ಮನೆ ಬಳಿ ಬಂದಿದೆ ಅಂತ ವೆಂಕಟಾಚಲಪತಿ ಕುಟುಂಬ ಜಗಳ ಮಾಡಿದೆ. ಈ ವೇಳೆ ವೆಂಕಟಾಚಲಪತಿ ದೊಣ್ಣೆ ತಂದು, ನಾಗರಾಜು ತಾಯಿ ನರಸಮ್ಮ, ನಾಗರಾಜು ಸಹೋದರ ರವಿ ಮೇಲೂ ಸಹ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಗಾಯಗೊಂಡ ವೃದ್ಧೆ ನರಸಮ್ಮರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Sun, 20 November 22