ಅಂಜನಾದ್ರಿ ಪರ್ವತ(Anjanadri Hill). ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದೆ ಪ್ರದೇಶದಲ್ಲಿರೋ ಈ ಪರ್ವತ, ಆಂಜನೇಯ ಹುಟ್ಟಿದ ಸ್ಥಳ(Birth Place Of Hanuman) ಎಂದು ಹೆಸರಾದ ಪ್ರದೇಶ. ದೇಶ ವಿದೇಶಗಳಿಂದಲೂ ಭಕ್ತರು ಆಂಜನೇಯನ ದರ್ಶನಕ್ಕೆ ಆಗಮಿಸುತ್ತಾರೆ. ಆದ್ರೆ ಹನುಮ ಹುಟ್ಟಿದ ಸ್ಥಳದ ಬಗ್ಗೆ ಟಿಟಿಡಿ(TTD) ಖ್ಯಾತೆ ಹೆಚ್ಚಾಗುತ್ತಿದ್ದಂತೆ ಅಲರ್ಟ ಆಗಿರುವ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವೊಂದಕ್ಕೆ ಬಂದಿದೆ.
ಅಂಜನಾದ್ರಿ ಪರ್ವತ ಹನುಮ ಹುಟ್ಟಿದ್ದ ಸ್ಥಳವೆಂದೆ ಖ್ಯಾತಿಯಾಗಿದೆ. ರಾಮಾಯಣದಲ್ಲೂ ಇದರ ಬಗ್ಗೆ ಉಲ್ಲೇಖಗಳಿವೆ. ಆದ್ರೆ ಟಿಟಿಡಿ ಮಾತ್ರ ಹನುಮ ಹುಟ್ಟಿದ್ದು ತಿರುಪತಿಯ ಆಕಾಶಗಂಗೆ ಪ್ರದೇಶದಲ್ಲಿ ಅಂತಾ ಆ ಸ್ಥಳದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಂದಾಗಿತ್ತು. ಆದ್ರೆ ಟಿಟಿಡಿ ಕಾರ್ಯಕ್ಕೆ ಆಂಧ್ರ ಹೈಕೋರ್ಟ್ ತಡೆಯಾಜ್ಞೆ ನೀಡ್ತಿದ್ದಂತೆ ರಾಜ್ಯ ಸರ್ಕಾರ ಅಲರ್ಟ್ ಆಗಿದೆ.
ಇನ್ನು ಟಿಟಿಡಿ ಕ್ಯಾತೆಗೆ ಕಿಡಿಕಾರಿರುವ ಸಚಿವ ಆನಂದ್ ಸಿಂಗ್, ಅವರು ಆಧಾರರಹಿತವಾಗಿ ಹೇಳ್ತಿದ್ದಾರೆ. ಆದ್ರೆ ನಮ್ಮ ಪೂರ್ವಿಕರು ಅಂಜನಾದ್ರಿಯಲ್ಲೆ ಆಂಜನೇಯ ಹುಟ್ಟಿದ ಸ್ಥಳವೆಂದು ಹೇಳ್ತಿದ್ರು. ಇನ್ನು ರಾಮ ಸೀತೆ ಇರೋ ಸೀತೆ ಸೆರಗು, ಮಾಲ್ಯವಂತ ಅನ್ನೋ ಸ್ಥಳ ಈಗಲೂ ಹಂಪಿಯಲ್ಲಿದೆ. ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.
ಅಂಜನಾದ್ರಿಯಲ್ಲೆ ಆಂಜನೇಯ ಹುಟ್ಟಿದ್ದು ಘೋಷಿಸಲು ಚಿಂತನೆ
ಹೌದು ರಾಜ್ಯ ಸರ್ಕಾರ, ಅಂಜನಾದ್ರಿಯಲ್ಲೆ ಆಂಜನೇಯ ಹುಟ್ಟಿದ್ದು ಎಂದು ಘೋಷಣೆ ಮಾಡಲು ಮುಂದಾಗಿದೆ. ಅಷ್ಟೇ ಅಲ್ಲ ಬಜೆಟ್‌ನಲ್ಲಿ ರಾಮಮಂದಿರದ ಮಾದರಿಯಲ್ಲೇ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಹಣ ಮೀಸಲಿಡಲು ಮುಂದಾಗಿದೆ. ಅದಕ್ಕಾಗಿ ವಕ್ಫ್ ಹಾಗೂ ಮುಜರಾಯಿ ಇಲಾಖೆ ಆಗಮ ಪಂಡಿತರಿಂದಲೂ ಮಾಹಿತಿ ಸಂಗ್ರಹ ಮಾಡುತ್ತಿದೆ. ಮುಂಬರುವ ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ, 13 ಎಕರೆ ಪ್ರದೇಶದಲ್ಲಿ ಅಂಜನಾದ್ರಿ ಪರ್ವತವನ್ನ ಅಭಿವೃದ್ದಿ ಮಾಡಲು ಅನುದಾನ ಘೋಷಿಸುವ ಸಾಧ್ಯತೆಗಳಿವೆ. ಒಟ್ನಲ್ಲಿ ರಾಜ್ಯ ಸರ್ಕಾರ ಅಂಜನಾದ್ರಿಯಲ್ಲೆ ಆಂಜನೇಯ ಹುಟ್ಟಿದ್ದು ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ರೆ ಹನುಮನ ಭಕ್ತರು ಹರ್ಷಗೊಳ್ಳಲಿದ್ದಾರೆ. ಆದ್ರೆ ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಟಿಟಿಡಿ ಯಾವ ರೀತಿ ಕಿತಾಪತಿ ಶುರು ಮಾಡುತ್ತೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಅಂಜನಾದ್ರಿಯೇ ಹನುಮನ ಜನ್ಮಸ್ಥಳ, ವಿವಾದದ ಬಗ್ಗೆ ರಾಜ್ಯ ಸರ್ಕಾರದಿಂದ ಆದೇಶ ಸಾಧ್ಯತೆ: ಸಚಿವೆ ಶಶಿಕಲಾ ಜೊಲ್ಲೆ
ಅಂಜನಾದ್ರಿ ಪರ್ವತದಲ್ಲಿ ಅನ್ಯ ಧರ್ಮಿಯರ ಅಂಗಡಿಗಳು ಇರಬಾರದು ಎಂದಿದ್ದ ಮಧುಗಿರಿ ಮೋದಿ ವಿರುದ್ಧ ಕೇಸ್ ದಾಖಲು
Published On - 7:22 am, Mon, 21 February 22