ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ
ಭಾರಿ ಮಳೆಗೆ ಮಾರ್ಕಂಡೇಯ ಅಣೆಕಟ್ಟು ಕೋಡಿ ಹರಿದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿ ಇರುವ ಮಾರ್ಕಂಡೇಯ ಅಣೆಕಟ್ಟು ಹದಿನೇಳು ವರ್ಷಗಳ ನಂತರ ಕೋಡಿ ಹರಿದಿದೆ.
ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಒಳಹರಿವು ಹೆಚ್ಚಳ ಹಿನ್ನೆಲೆ ಜಲಾಶಯದಿಂದ ನೀರು ರಿಲೀಸ್ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ಟಿಬಿ ಡ್ಯಾಂನ ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ಕೊಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ರಿಂದ ಮಾಹಿತಿ ಲಭ್ಯವಾಗಿದೆ.
ನಿರಂತರ ಮಳೆಯಿಂದಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಬಸವನದುರ್ಗ ಗ್ರಾಮದಲ್ಲಿ ಮನೆಗಳು ಶಿಥಿಲಗೊಂಡಿದೆ. ಮಳೆಯಿಂದ 10ಕ್ಕೂ ಹೆಚ್ಚು ಮನೆಗಳು ಶಿಥಿಲಗೊಂಡಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಭಾರಿ ಮಳೆಗೆ ಮಾರ್ಕಂಡೇಯ ಅಣೆಕಟ್ಟು ಕೋಡಿ ಹರಿದಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಬಳಿ ಇರುವ ಮಾರ್ಕಂಡೇಯ ಅಣೆಕಟ್ಟು ಹದಿನೇಳು ವರ್ಷಗಳ ನಂತರ ಕೋಡಿ ಹರಿದಿದೆ.
ಧಾರಾಕಾರ ಮಳೆಯಿಂದ ಮಾರ್ಕೋನಹಳ್ಳಿ ಡ್ಯಾಂ ಭರ್ತಿ ಆಗಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಹೇಮಾವತಿ ಡ್ಯಾಂ, ಮೇಲ್ಭಾಗದ ಕೆರೆಗಳಿಂದ ಡ್ಯಾಂಗೆ ನೀರು ಬಿಡಲಾಗಿದೆ. ಕೋಡಿ ಬಿದ್ದು ಶಿಂಷಾ ನದಿಯತ್ತ ನೀರು ಹರಿಯುತ್ತಿದೆ. ಮಾರ್ಕೋನಹಳ್ಳಿ ಡ್ಯಾಂನ ಗೇಟ್ ತೆಗೆದು ನೀರು ಹೊರಕ್ಕೆ ಬಿಡಲಾಗಿದೆ.
ನಲ್ಲೂರಿನ ಹಳ್ಳದಲ್ಲಿ ಕೊಚ್ಚಿಹೋಗಿ ವೃದ್ಧ ಮೃತಪಟ್ಟ ವಿಚಾರವಾಗಿ ಘಟನಾ ಸ್ಥಳಕ್ಕೆ ದಾವಣಗೆರೆ ಜಿಲ್ಲಾಧಿಕಾರಿ ಬೀಳಗಿ ಭೇಟಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮ ಹಳ್ಳದಲ್ಲಿ 60 ವರ್ಷದ ಕೆಂಚಪ್ಪ ಕೊಚ್ಚಿಹೋಗಿ ಮೃತಪಟ್ಟಿದ್ದರು. ಈ ಬಗ್ಗೆ ಮಹಾಂತೇಶ್ ಬೀಳಗಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ. ನೀರು ನುಗ್ಗಿ ಜಲಾವೃತವಾದ ಜಮೀನುಗಳಿಗೆ ಡಿಸಿ ಭೇಟಿ ನೀಡಿದ್ದಾರೆ.
ರಾಜ್ಯದಲ್ಲಿ ಭಾರಿ ಮಳೆಯಿಂದ ಬೆಳೆಹಾನಿ; ಕೇಂದ್ರ ತಂಡದಿಂದ ವರದಿ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತೇನೆ ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಅಪಾರ ಬೆಳೆ ಹಾನಿ ಆಗಿದೆ. ಈ ಬಗ್ಗೆ ವಾಸ್ತವ ವರದಿ ನೀಡಬೇಕೆಂದು ಮನವಿ ಮಾಡುತ್ತೇನೆ. ಕೇಂದ್ರ ತಂಡದಿಂದ ವರದಿ ಮಾಡಿಸಲು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಗ್ರಾ.ಪಂ. ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಹಿಂಜರಿಕೆ ಮಾಡುವ ಈ ಕಾಲದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಕೂರಲ್ಲ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಸಂಘಟಿಸುತ್ತೇನೆ. 2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ವಿಜಯಪುರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ,
ಇದನ್ನೂ ಓದಿ: ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆ; ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಇದನ್ನೂ ಓದಿ: ಎಡಬಿಡದ ಮಳೆ ಮತ್ತು ಪ್ರವಾಹಗಳಿಗೆ ತುತ್ತಾಗಿರುವ ಆಂಧ್ರಪದ್ರದೇಶದಲ್ಲಿ ಹೃದಯ ವಿದ್ರಾವಕ ದೃಶ್ಯಗಳು ಕಾಣುತ್ತಿವೆ
Published On - 8:21 pm, Sat, 20 November 21