ಕೊಪ್ಪಳ: ಕೆಲ ದಿನಗಳ ಹಿಂದೆ ಬೇವೂರು ಠಾಣೆಯ ಪೊಲೀಸರು (Police) ಕೊಪ್ಪಳ (Koppal) ಏತ ನೀರಾವರಿ ಯೋಜನೆ ಏರಡನೇ ಹಂತದ ವಸ್ತುಗಳನ್ನು ಕಳತನ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಬಂಧಿಸಿದ್ದರು. ಇದಾದ ಬೆನ್ನಲ್ಲೇ ಪೊಲೀಸರು ಇದೇ ಕಾರ್ಯದಲ್ಲಿ ತೊಡಗಿಕೊಂಡಿದ್ದ ಮತ್ತೊಂದು ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ದೇವಪ್ಪ ಭಜಂತ್ರಿ, ಯಮನೂರಪ್ಪ ಭಜಂತ್ರಿ, ಸುರೇಶ್ ಭಜಂತ್ರಿ, ತಾಯಪ್ಪ ಭಜಂತ್ರಿ, ಜಗದೀಶ್ ಕೊರವರ್ ಬಂಧಿತ ಆರೋಪಿಗಳು. ಆರೋಪಿಗಳಿಂದ 3.5 ಲಕ್ಷ ರೂ. ನಗದು ಜೊತೆಗೆ 6.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಆರೋಪಿಗಳು ಎರಡು ಪ್ರತ್ಯೇಕ ಸ್ಥಳದಲ್ಲಿ ಏತ ನೀರಾವರಿ ಯೋಜನೆಗೆ ಸಂಗ್ರಹಿಸಿಟ್ಟಿದ್ದ ಬ್ರಿಡ್ಜ್ ಕಂ ಬ್ಯಾರೇಜ್ನ ಗೇಟ್ಗಳನ್ನು ಕದ್ದು ಮಾರಾಟ ಮಾಡಿದ್ದರು. ಈ ಬಗ್ಗೆ ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ
ಕಳೆದ ಕೆಲ ದಿನಗಳ ಹಿಂದೆ ಕೊಪ್ಪಳ ಪೊಲೀಸರು ಮೊದಲನೇ ಗ್ಯಾಂಗ್ ಅನ್ನು ಬಂಧಿಸಿದ್ದರು. ಈ ಗ್ಯಾಂಗ್ ಸರ್ಕಾರಿ ಯೋಜನೆಗಳಿಗೆ ಬಳಕೆಯಾಗುವ ವಸ್ತುಗಳನ್ನೇ ಕಳವು ಮಾಡುತ್ತಿತ್ತು. ಈಗ ಕೊಪ್ಪಳ ಏತ ನೀರಾವರಿಯ ಏರಡನೇ ಹಂತದ ಯೋಜನೆಗೆ ತಂದ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಟಾರ್ಗೆ ಮಾಡಿದ್ದರು. ನಂತರ ಪ್ಲಾನ್ ಮಾಡಿ ಇರಕಲ್ಗಡ ಬಳಿಯಿರುವ ಪವರ್ ಸಬ್ ಸ್ಟೇಷನ್ಲ್ಲಿ ಸಂಗ್ರಹಿಸಿಟ್ಟಿದ್ದ ಬೆಲೆ ಬಾಳುವ 9 ಟನ್ ಕಾಪರ್ ಪೈಪ್, 30 ಸಾವಿರ ಲೀಟರ್ ಟ್ರಾನ್ಸಫಾರ್ಮರ್ ಇನ್ಸುಲೇಟೆಡ್ ಆಯಿಲ್, ಸೇರಿದಂತೆ ವಿವಿಧ ವಸ್ತಗಳನ್ನು ಕದ್ದು ಎಸ್ಕೇಪ್ ಆಗಿದ್ದರು.
ಇದನ್ನೂ ಓದಿ: ಜೂಜಾಟದಿಂದ ಬೂದಗುಂಪಾ ಗ್ರಾಮದಲ್ಲಿ ದೊಡ್ಡ ಗಲಾಟೆ: ಇಬ್ಬರು ಕಾನ್ಸ್‌ಟೇಬಲ್ ಸಸ್ಪೆಂಡ್
ಅಲ್ಲದೇ ತಾವು ಕದ್ದ ಮೇಲೆ ಯಾರಿಗೂ ಗೊತ್ತಾಗಬಾರದು ಎಂದು ಟ್ರಾನ್ಸ್ಫಾರ್ಮರ್ಗಳನ್ನು ರೀಫಿಟ್ ಮಾಡುತ್ತಿದ್ದರು. ಇದರಿಂದ ಕಳ್ಳತನ ಮಾಡಿದ್ದು ಗೊತ್ತಾಗಿರಲಿಲ್ಲ. ಆದರೆ ಪ್ರಾಜೆಕ್ಟ್ ಮುಗಿಯುವುದಕ್ಕೆ ಬಂದಾಗ ಕಳ್ಳತನ ಬಯಲಾಗಿತ್ತು. ಪ್ರಕರಣದ ಕುರಿತು ಬೇವೂರು ಠಾಣೆಗೆ ದೂರು ದಾಖಲಾಗಿತ್ತು. ಆರೋಪಿಗಳನ್ನು ಸೆರೆ ಹಿಡಿಯಲು ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಮತ್ತು ಡಿವೈಎಸ್ಪಿ ಅವರ ನೇತೃತ್ವದಲ್ಲಿ ಟೀಂ ರಚನೆಯಾಗಿತ್ತು.
ಖದೀಮರು ಕದ್ದ ವಸ್ತುಗಳನ್ನು ಹೊರ ರಾಜ್ಯಗಳಲ್ಲಿ ಮಾರಾಟ ಮಾಡಿದ್ದರು. ಬಂದ ಹಣದಲ್ಲಿ ಆಂಧ್ರಪ್ರದೇಶದ ಗಡಿಯಲ್ಲಿ ವಾಸವಾಗಿದ್ದರು. ಇದನ್ನು ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಹೋಗಿ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 8 ಲಕ್ಷ ನಗದು ಹಣ ಸೇರಿದಂತೆ ಒಟ್ಟು 46 ಲಕ್ಷ ಮೌಲ್ಯದ ವಸ್ತುಗಳನ್ನ ಜಪ್ತಿ ಮಾಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Fri, 25 August 23