AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಯಾಲಿಸಿಸ್ ರೋಗಿಗಳ ವಿಷಯದಲ್ಲಿ ಸಿಬ್ಬಂದಿ ಕಳ್ಳಾಟ – ಚಿನ್ನಾಭರಣ ಮಾರಿ ಡಯಾಲಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಸಿಸ್ ಗೋಲ್ಮಾಲ್. ಆಸ್ಪತ್ರೆಯಲ್ಲಿರೋ ಡಯಾಲಸಿಸ್ ಕೇಂದ್ರದಲ್ಲಿ ಡಯಾಲಸಿಸ್ ಗಾಗಿ ಬಡ ರೋಗಿಗಳು ಪರದಾಡುತ್ತಿದ್ದಾರೆ. ಈ ಬಗ್ಗೆ ಕೊಪ್ಪಳ ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ್ ಇಟಗಿ, ಕೇಳಿದ್ರೆ ಸಮಸ್ಯೆ ಆಗಿರೋದು ನಿಜ. ಅದನ್ನು ಸರಿಪಡಿಸುತ್ತಿದ್ದೇವೆ ಅಂತ ಹೇಳ್ತಿದ್ದಾರೆ.

ಡಯಾಲಿಸಿಸ್ ರೋಗಿಗಳ ವಿಷಯದಲ್ಲಿ ಸಿಬ್ಬಂದಿ ಕಳ್ಳಾಟ - ಚಿನ್ನಾಭರಣ ಮಾರಿ ಡಯಾಲಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು
ಚಿನ್ನಾಭರಣ ಮಾರಿ ಡಯಾಲಸಿಸ್ ಮಾಡಿಸಿಕೊಳ್ಳುತ್ತಿರುವ ರೋಗಿಗಳು
ಸಂಜಯ್ಯಾ ಚಿಕ್ಕಮಠ
| Updated By: ಸಾಧು ಶ್ರೀನಾಥ್​|

Updated on:Dec 04, 2023 | 12:32 PM

Share

ಕೊಪ್ಪಳ: ಸರ್ ದಯವಿಟ್ಟು ನಮಗೆ ಆತ್ಮಹತ್ಯೆ ದಾರಿಯೊಂದೆ ಉಳದಿದೆ. ಇರೋ ಮನೆ, ಆಸ್ತಿ ಎಲ್ಲಾ ಮಾರಾಟ ಮಾಡಿದ್ದೇವೆ, ಚಿನ್ನಾಭರಣಗಳನ್ನು ಒತ್ತೆ ಇಟ್ಟಿದ್ದೇವೆ. ಇರೋ ದುಡ್ಡೆಲ್ಲಾ ಖಾಲಿಯಾಗಿದೆ. ಸಾವು ಒಂದೇ ಉಳದಿರೋದು ಅಂತ ಅವರೆಲ್ಲಾ ಗೋಳಾಡುತ್ತಿದ್ದಾರೆ. ಅವರ ಗೋಳಾಟಕ್ಕೆ ಕಾರಣವಾಗಿದ್ದು ಡಯಾಲಿಸಿಸ್ ಗೋಲ್ಮಾಲ್. ಕೊಪ್ಪಳ (Koppal) ಜಿಲ್ಲಾ ಆಸ್ಪತ್ರೆ, ಇಡೀ ಜಿಲ್ಲೆಗೆ ದೊಡ್ಡ ಆಸ್ಪತ್ರೆ (district hospital) ಅನ್ನೋ ಹೆಗ್ಗಳಿಕೆಯನ್ನು ಹೊಂದಿದೆ. ಆದ್ರೆ ಇದೇ ಆಸ್ಪತ್ರೆಯಲ್ಲಿ ಡಯಾಲಸಿಸ್ ರೋಗಿಗಳು (dialysis patients) ಪರದಾಡುತ್ತಿದ್ದಾರೆ. ಒಂದಡೆ ಡಯಾಲಿಸಿಸ್ ಸಿಬ್ಬಂದಿ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿ ಮೂರು ತಿಂಗಳಿಂದ ಸೂಕ್ತ ಡಯಾಲಸಿಸ್ ಆಗದೇ ಇರೋದರಿಂದ ಡಯಾಲಸಿಸ್ ರೋಗಿಗಳು ಪರದಾಡುತ್ತಿದ್ದಾರೆ. ಡಯಾಲಿಸಿಸ್ ರೋಗಿಗೆ ವಾರದಲ್ಲಿ ಮೂರು ಸಲ ಡಯಾಲಸಿಸ್ ಮಾಡಿಸಬೇಕು. ದುಡ್ಡಿದ್ದವರು ಖಾಸಗಿ ಡಯಾಲಸಿಸ್ ಕೇಂದ್ರದಲ್ಲಿ ಹಣ ಕೊಟ್ಟು ಡಯಾಲಿಸಿಸ್ ಮಾಡಿಸಿಕೊಂಡರೆ ಬಡ ಡಯಾಲಸಿಸ್ ರೋಗಿಗಳು ನೆಚ್ಚಿಕೊಂಡಿರೋದು ಜಿಲ್ಲಾ ಆಸ್ಪತ್ರೆಯಲ್ಲಿರೋ ಸರ್ಕಾರದ ಡಯಾಲಿಸಿಸ್ ಕೇಂದ್ರವನ್ನು. ಆದ್ರೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿರೋ ಡಯಾಲಸಿಸ್ ಕೇಂದ್ರದಲ್ಲಿರೋ ಸಿಬ್ಬಂದಿ ಡಯಾಲಿಸಿಸ್ ಸರಿಯಾಗಿ ಮಾಡ್ತಿಲ್ಲಾ ಅಂತ ಡಯಾಲಸಿಸ್ ರೋಗಿಗಳು ಮತ್ತು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ತಿಂಗಳಿಂದ ಡಯಾಲಿಸಿಸ್ ಮಾಡದೇ ಇದ್ದಿದ್ದರಿಂದ ಖಾಸಗಿ ಯಾಗಿ ಡಯಾಲಿಸಿಸ್ ಮಾಡಿಸಿಕೊಂಡಿದ್ದೇವೆ. ಅದಕ್ಕಾಗಿ ಮನೆ, ಆಸ್ತಿ, ಚಿನ್ನಾಭರಣ ಎಲ್ಲಾ ಮಾರಾಟ ಮಾಡಿಕೊಂಡಿದ್ದೇವೆ. ಇದೀಗ ಖಾಸಗಿಯಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಲು ದುಡ್ಡಿಲ್ಲಾ. ಜಿಲ್ಲಾ ಆಸ್ಪತ್ರೆಯಲ್ಲಿ ಸರಿಯಾಗಿ ಡಯಾಲಿಸಿಸ್ ಮಾಡ್ತಿಲ್ಲಾ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಿನಿಸುತ್ತಿದೆ ಅಂತ ರೋಗಿಗಳು ಕಣ್ಣಿರಿಡುತ್ತಿದ್ದಾರೆ.

ಇನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿನ ಸಿಬ್ಬಂದಿ ಡಯಾಲಿಸಿಸ್ ಹೆಸರಲ್ಲಿ ಕೂಡಾ ಗೋಲ್ಮಾಲ್ ಮಾಡ್ತಿದ್ದಾರೆ ಅಂತ ರೋಗಿಗಳು ಆರೋಪಿಸುತ್ತಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ‌ ಇಬ್ಬರಿಗೂ ಕೂಡಾ ಡಯಾಲಸಿಸ್ ಮಾಡಿಲ್ಲಾ.ಆದ್ರೆ ‌ತೊಂಬತ್ತೆಂಟು‌ ಜನರಿಗೆ ಡಯಾಲಿಸಿಸ್ ಮಾಡಲಾಗಿದೆ ಅಂತ ಸರ್ಕಾರಕ್ಕೆ ರಿಪೋರ್ಟ್ ನೀಡಿದ್ದಾರೆ. ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ಸರ್ಕಾರಕ್ಕೆ ವರದಿ ನೀಡುತ್ತಿದ್ದು, ತಮ್ಮ ಹೆಸರಲ್ಲಿ ಸರ್ಕಾರಕ್ಕೆ ವಂಚನೆ ನಡೆಸುತ್ತಿದ್ದಾರೆ ಅಂತ ಆರೋಪಿಸುತ್ತಿದ್ದಾರೆ ಡಯಾಲಸಿಸ್ ರೋಗಿಗಳು.

ಇನ್ನು ಕೊಪ್ಪಳ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ನೊಂದಾಯಿತ ಹತ್ತು ಜನ ಡಯಾಲಸಿಸ್ ರೋಗಿಗಳು ಇದ್ದೇವೆ. ಆದ್ರೆ ಹತ್ತರಿಂದ ಹನ್ನೆರಡು ಜನರಿಗೆ ಪ್ರತಿನಿತ್ಯ ಡಯಾಲಸಿಸ್ ಮಾಡಿದ್ದೇವೆ ಅಂತ ಸುಳ್ಳು ವರದಿ ನೀಡ್ತಿದ್ದಾರೆ. ವಾರಕ್ಕೆ ಒಬ್ಬರಿಗೆ ಮೂರು ಡಯಾಲಸಿಸ್ ಬೇಕು. ಆದ್ರೆ ಒಂದು ಕೂಡಾ ಡಯಾಲಸಿಸ್ ಸಿಗ್ತಿಲ್ಲಾ. ನಮಗೆ ಮಷಿನ್ ರಿಪೇರಿ ಅಂತ ಹೇಳಿ ಕಳಿಸ್ತಾರೆ.ಆದ್ರೆ ಸರ್ಕಾರಕ್ಕೆ ಮಾತ್ರ ಸುಳ್ಳು ವರದಿ ನೀಡ್ತಿದ್ದಾರೆ ಅಂತ ಡಯಾಲಸಿಸ್ ರೋಗಿಗಳು ಪರದಾಡುತ್ತಿದ್ದಾರೆ.

ಇನ್ನು ಐದು ಡಯಾಲಸಿಸ್ ಮಷಿನ್ ಗಳಿದ್ದರು, ವರ್ಕ್ ಆಗ್ತಾಯಿರೋದು ಒಂದೇ ಮಷಿನ್. ಅಲ್ಲಿ ಕೂಡಾ ಸರಿಯಾಗಿ ಡಯಾಲಸಿಸ್ ಮಾಡ್ತಿಲ್ಲಾ. ನಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹೇಳಿದ್ರು ಯಾವುದೇ ಪ್ರಯೋಜನವಾಗಿಲ್ಲಾ ಅಂತಿದ್ದಾರೆ ಡಯಾಲಸಿಸ್ ರೋಗಿಗಳು. ಈ ಬಗ್ಗೆ ಮಾತನಾಡಿರೋ ಹಣಮಂತಪ್ಪ ಅನ್ನೋ ಡಯಾಲಸಿಸ್ ರೋಗಿ, ಕಳೆದ ಮೂರು ತಿಂಗಳಿಂದ ಡಯಾಲಸಿಸ್ ಗಾಗಿ ತೊಂದರೆ ಅನುಭವಿಸುತ್ತಿದ್ದೇವೆ.ಆದ್ರೆ ಸಿಬ್ಬಂದಿ ಅನೇಕರಿಗೆ ಪ್ರತಿನಿತ್ಯ ಡಯಾಲಸಿಸ್ ಮಾಡಿದ್ದೇವೆ ಅಂತ ಸರ್ಕಾರಕ್ಕೆ ರಿಪೋರ್ಟ್ ಕೊಟ್ಟಿದ್ದಾರೆ. ಈಗಾಗಲೇ ಚಿನ್ನಾಭರಣ, ಆಸ್ತಿ ಮಾರಾಟ ಮಾಡಿದ್ದೇವೆ.ಇದೀಗ ಸಾವು ಒಂದೇ ನಮ್ಮ ಮುಂದಿರೋ ದಾರಿ ಅಂತಿದ್ದಾರೆ.

Also Read: ನವೆಂಬರ್​ 30 ರಿಂದ ರಾಜ್ಯಾದ್ಯಂತ ಡಯಾಲಿಸಿಸ್ ಕೇಂದ್ರಗಳು ಬಂದ್​, ಸರ್ಕಾರದ ವಿರುದ್ಧ ಸಿಬ್ಬಂದಿ ಧರಣಿ​​​

ಈ ಬಗ್ಗೆ ಕೊಪ್ಪಳ ಕಿಮ್ಸ್ ನಿರ್ದೇಶಕ ಡಾ.ವಿಜಯನಾಥ್ ಇಟಗಿ, ಕೇಳಿದ್ರೆ ಸಮಸ್ಯೆ ಆಗಿರೋದು ನಿಜ.ಅದನ್ನು ಸರಿಪಡಿಸುತ್ತಿದ್ದೇವೆ ಅಂತ ಹೇಳ್ತಿದ್ದಾರೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿರೋ ಡಯಾಲಸಿಸ್ ಕೇಂದ್ರದಲ್ಲಿ ಡಯಾಲಿಸಿಸ್ ಗಾಗಿ ಬಡ ರೋಗಿಗಳು ಪರದಾಡುತ್ತಿದ್ದಾರೆ. ಹೀಗಾಗಿ ಆಗಿರೋ ಸಮಸ್ಯೆಗಳನ್ನು ಮೇಲಾಧಿಕಾರಿಗಳು ಬಗೆಹರಿಸಿ, ಬಡ ರೋಗಿಗಳಿಗೆ ಸರಿಯಾಗಿ ಡಯಾಲಿಸಿಸ್ ಸಿಗುವಂತಹ ವ್ಯವಸ್ಥೆ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:12 pm, Mon, 4 December 23

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!