
ಕೊಪ್ಪಳ, ಆಗಸ್ಟ್ 05: ರವಿವಾರ (ಆ.03) ರಾತ್ರಿ ಕೊಪ್ಪಳದ (Koppal) ವಾರ್ಡ್ ನಂಬರ್ 3ರಲ್ಲಿನ ಮಸೀದಿ ಮುಂಭಾಗ ಗವಿಸಿದ್ದಪ್ಪ (27)ನ (Gavisiddappa) ಕೊಲೆಯಾಗಿತ್ತು. ಯುವಕ ಸಾಧಿಕ್ ಕೊಲೆ ಮಾಡಿದ ಆರೋಪಿ. ಆರೋಪಿ ಸಾಧಿಕ್ ಮಚ್ಚಿನಿಂದ ಕೊಚ್ಚಿ ಕೊಲೆ ಗವಿಸಿದ್ದಪ್ಪನನ್ನು ಕೊಲೆ ಮಾಡಿ ಪೊಲೀಸರ (Police) ಎದುರು ಶರಣಾಗಿದ್ದನು. ಗವಿಸಿದ್ದಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಧಿಕ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಾಧಿಕ್, ಗೇಸುದರಾಜ್, ನಿಜಾಮುದ್ದೀನ್ ಹಾಗೂ ಮೆಹಬೂಬ್ ಅಲಿಯಾಸ್ ಗಿಡ್ಡ ಬಂಧಿತರು.
ಕೊಲೆಯಾದ ಗವಿಸಿದ್ದಪ್ಪ ಕೊಪ್ಪಳದ ಕುರಬರ ಓಣಿ ನಿವಾಸಿಯಾಗಿದ್ದಾನೆ. ತಂದೆ-ತಾಯಿಗೆ ಒಬ್ಬನೇ ಮಗ, ಮೂವರು ಸಹೋದರಿಯರು ಇದ್ದಾರೆ. ಕಾರು ಚಾಲಕನಾಗಿದ್ದ ಗವಿಸಿದ್ದಪ್ಪ ಪಕ್ಕಾ ಹಿಂದೂತ್ವವಾದಿಯಾಗಿದ್ದನು. ಗವಿಸಿದ್ದಪ್ಪನು ಕಳೆದ 2-3 ವರ್ಷಗಳ ಹಿಂದೆ ಕೊಪ್ಪಳದ ಶಾಂತಿ ಆಗ್ರೋದಲ್ಲಿ ಕೆಲಸ ಮಾಡುತ್ತಿದ್ದನು. ಇದೇ ಶಾಂತಿ ಆಗ್ರೋದಲ್ಲಿ ಕೆಲಸ ಮಾಡತಿದ್ದ ಓರ್ವ ಮುಸ್ಲಿಂ ಯುವತಿ ಸ್ನೇಹ ಬೆಳಸಿದ್ದಾನೆ. ಸ್ನೇಹ ಪ್ರೇಮಕ್ಕೆ ತಿರುಗಿದೆ.
ಕಳೆದ ಐದು ತಿಂಗಳ ಹಿಂದೆ ಇಬ್ಬರು ಮದುವೆಯಾಗಬೇಕೆಂದು ಓಡಿ ಹೋಗಿದ್ದರು. ಆದರೆ, ಈ ಸಂದರ್ಭದಲ್ಲಿ ಯುವತಿ ಅಪ್ರಾಪ್ತೆಯಾಗಿದ್ದಳು. ಕೊನೆಗೆ ಮನೆಯವರು ಜಾತಿ ಬೇರೆ ಬೇರೆಯಾಗತ್ತದೆ ಅಂತ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಮನೆಯವರು ಬುದ್ದಿವಾದ ಹೇಳಿದ ಬಳಿಕ ಗವಿಸಿದ್ದಪ್ಪ ಸೈಲೆಂಟ್ ಆಗಿದ್ದನು.
ಮುಸ್ಲಿಂ ಯುವತಿ ಗವಿಸಿದ್ದಪ್ಪನಕ್ಕಿಂತ ಮೊದಲು ಆರೋಪಿ ಸಾಧಿಕ್ನನ್ನು ಪ್ರೀತಿಸುತ್ತಿದ್ದಳಂತೆ. ಸಾಧಿಕ್ನೊಂದಿಗೆ ಬ್ರೇಕಪ್ ಮಾಡಿಕೊಂಡಿಕೊಂಡು, ಗವಿಸಿದ್ದಪ್ಪನನ್ನು ಪ್ರೀತಿ ಮಾಡಲು ಆರಂಭಿಸಿದ್ದಳು ಎಂಬುವುದು ಪೊಲೀಸರ ತನಿಖೆಗೆ ವೇಳೆ ಗೊತ್ತಾಗಿದೆ.
ಗವಿಸಿದ್ದಪ್ಪ ತನ್ನ ಮಾಜಿ ಪ್ರೇಯಸಿ ಮುಸ್ಲಿಂ ಯುವತಿಗೆ ಟಾರ್ಚರ್ ಕೊಡುತ್ತಿದ್ದನಂತೆ. ಈ ಕಾರಣದಿಂದ ಕೊಲೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ಹೇಳಿದ್ದಾರೆ.
ಗವಿಸಿದ್ದಪ್ಪನ ಕೊಲೆಗೆ ಮುಸ್ಲಿಂ ಯುವತಿ ಕಾರಣ ಎಂದು ಗವಿಸಿದ್ದಪ್ಪನ ತಂದೆ ಹೇಳಿದ್ದಾರೆ. ನಾನು ಅವಳ ವಿರುದ್ಧವೂ ದೂರು ಕೊಡುತ್ತೇನೆ. ಮುಸ್ಲಿಂ ಯುವತಿಗೆ ನನ್ನ ಮಗ ಟಾರ್ಚರ್ ಕೊಟ್ಟಿಲ್ಲ. ಎಸ್ಪಿ ಸುಳ್ಳು ಹೇಳತ್ತಿದ್ದಾರೆ. ಮುಸ್ಲಿಂ ಯುವತಿ ಹಾಗೂ ಗವಿಸಿದ್ದಪ್ಪ ಪ್ರೀತಿ ಮಾಡುವ ವಿಚಾರ ಎರಡೂ ಮನೆಯವರಿಗೆ ಗೊತ್ತಿತ್ತು. ಅವಳೇ ನಮ್ಮ ಮಗನಿಗೆ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದಳು. ಕೊಲೆಗೆ ಸಾಧಿಕ್ ಹಾಗೂ ಮುಸ್ಲಿಂ ಯುವತಿ ಇಬ್ಬರು ಕಾರಣ ಎಂದಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗವಿಸಿದ್ದಪ್ಪ ಕೊಲೆ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಕೊಲೆಯಾದ ಗವಿಸಿದ್ದಪ್ಪ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕನಾಗಿದ್ದು, ಸಮುದಾಯ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿದೆ. ಅಮಾಯಕ ಯುವಕನ ಕೊಲೆ ಖಂಡಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ವಾಲ್ಮೀಕಿ ಸಮುದಾಯದವರು ಚಿಂತನೆ ಮಾಡಿದ್ದಾರೆ.
ಇಂದು ಕೊಪ್ಪಳದ ವಾಲ್ಮೀಕಿ ಭವನದಲ್ಲಿ ಸಭೆ ಮಾಡಿದ ಮುಖಂಡರು, ಶುಕ್ರವಾರ ದೊಡ್ಡ ಹೋರಾಟ ಮಾಡುವ ತೀರ್ಮಾನ ಮಾಡಿದ್ದಾರೆ. ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಮುಖಂಡ, ಮಾಜಿ ಸಚಿವ ಶ್ರೀರಾಮುಲು ಕೂಡ ಭಾಗಿಯಾಗಿದ್ದರು. ಸಭೆ ಬಳಿಕ ಶ್ರೀರಾಮುಲು ಗವಿಸಿದ್ದಪ್ಪ ಮನೆಗೆ ಭೇಟಿ ಮಾಡಿ ಸಾಂತ್ವನ ಹೇಳಿದರು.
ಇದನ್ನೂ ಓದಿ: ತೀವ್ರ ಸ್ವರೂಪ ಪಡೆದ ಗವಿಸಿದ್ದಪ್ಪ ಕೊಲೆ: ಹಿಂದೂ ಸಂಘಟನೆಗಳ ಸಭೆ, ಅತ್ತ ಮತ್ತೆ ಮೂವರು ಆರೋಪಿಗಳು ವಶಕ್ಕೆ
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಕೊಲೆ ಆರೋಪಿ ಪಿಎಫ್ಐ ಸಂಘಟನೆಯುಲ್ಲಿದ್ದನು. ಈ ಕೊಲೆ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಗವಿಸಿದ್ದಪ್ಪ ಪೊಲೀಸರ ನಿರ್ಲಕ್ಷ್ಯಕ್ಕೆ ಕೊಲೆಯಾಗಿದ್ದಾನೆ ಎಂದು ಹೇಳಿದರು.