ಭಾರೀ ಮಳೆಗೆ ಭೋರ್ಗರೆಯುತ್ತಿದೆ ಕಪೀಲತೀರ್ಥ ಜಲಪಾತ
Koppal's Kapila Theertha Falls; ಕೊಪ್ಪಳದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಪೀಲತೀರ್ಥ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಭೋರ್ಗರೆಯುವ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಕರ್ನಾಟಕದ ಏಕೈಕ ಜಲಪಾತ ಆಗಿರುವ ಕಪೀಲತೀರ್ಥ ಫಾಲ್ಸ್ನ ನಯನಮನೋಹರ ವಿಡಿಯೋ ಇಲ್ಲಿದೆ ನೋಡಿ.
ಕೊಪ್ಪಳ, ಆಗಸ್ಟ್ 6: ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಕಪೀಲತೀರ್ಥ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಕೊಪ್ಪಳದ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದಲ್ಲಿರುವ ಕಪೀಲತೀರ್ಥ ಜಲಪಾತ ಕಲ್ಯಾಣ ಕರ್ನಾಟಕದ ಏಕೈಕ ಜಲಪಾತ ಎಂದು ಪ್ರಸಿದ್ಧಿ ಪಡೆದಿದೆ. ಸದ್ಯ ಭೋರ್ಗರೆದು ಧುಮ್ಮಿಕ್ಕುವ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ.
Published on: Aug 06, 2025 11:25 AM
