ಗವಿ ಸಿದ್ದಪ್ಪ ಕೊಲೆ: ನನ್ಮಗ ಇದ್ದೂ ಸತ್ತಂತೆ, ಸಾಧಿಕ್ ಗೆ ಶಿಕ್ಷೆ ಆಗ್ಬೇಕು ಎಂದ ತಂದೆ
ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ (kill) ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ (Koppal) ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್ ಎಂಬುವನಿಂದ ಗವಿಸಿದ್ದಪ್ಪ ನಾಯಕ್ನ ಕೊಲೆ ಮಾಡಲಾಗಿದೆ. ಗವಿಸಿದ್ದಪ್ಪನನ್ನ ಕೊಲೆ ಮಾಡಿದ ಸಾದಿಕ್ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 103(1) ಬಿಎನ್ಎಸ್ 2023 ಕಲಂ 3(2)ವಿ, ಎಸ್ಸಿ-ಎಸ್ಟಿ ಕಾಯ್ದೆ 1989 ಅಡಿಯಲ್ಲಿ ದೂರು ದಾಖಲಾಗಿದೆ.
ಕೊಪ್ಪಳ, (ಆಗಸ್ಟ್ 04): ಅನ್ಯ ಧರ್ಮದ ಯುವತಿಯನ್ನ ಪ್ರೀತಿಸಿದಕ್ಕೆ ಮುಸ್ಲಿಂ ಯುವಕನಿಂದ ಹಿಂದೂ ಯುವಕನ ಕೊಲೆ (kill) ನಡೆದಿರುವಂತಹ ಘಟನೆ ಭಾನುವಾರ ರಾತ್ರಿ ಕೊಪ್ಪಳ (Koppal) ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್ ಎಂಬುವನಿಂದ ಗವಿಸಿದ್ದಪ್ಪ ನಾಯಕ್ನ ಕೊಲೆ ಮಾಡಲಾಗಿದೆ. ಗವಿಸಿದ್ದಪ್ಪನನ್ನ ಕೊಲೆ ಮಾಡಿದ ಸಾದಿಕ್ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಆತ ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 103(1) ಬಿಎನ್ಎಸ್ 2023 ಕಲಂ 3(2)ವಿ, ಎಸ್ಸಿ-ಎಸ್ಟಿ ಕಾಯ್ದೆ 1989 ಅಡಿಯಲ್ಲಿ ದೂರು ದಾಖಲಾಗಿದೆ.
ಹಂತಕ ಸಾಧಿಕ್ ತಂದೆ ಮೌಲಾಹುಸೇನ್ ಟಿವಿ9 ಜೊತೆ ಮಾತನಾಡಿ, ಸಾಧಿಕ್ ಮಾಡಿದ್ದು ತಪ್ಪು. ಗವಿಸಿದ್ದಪ್ಪನು ನನ್ನ ಮಗ ಇದ್ದ ಹಾಗೆ. ಆತನ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಮಗ ಇದ್ದು ಸತ್ತಂತೆ. ಮಗ ಮಾತೇ ಕೇಳತಿರಿಲ್ಲ,ಯಾವಗೋ ಬರ್ತಿದ್ದ ಯಾವಾಗೋ ಹೋಗತಿದ್ದ. ಸಾಧಿಕ್ ಲವ್ ಮಾಡೋ ವಿಚಾರ ನನಗೆ ಗೊತ್ತೆ ಇಲ್ಲ. ನಂಗೆ ನಿನ್ನೆ ರಾತ್ರಿ 9 ಗಂಟೆಗೆ ಕೊಲೆ ಮಾಡಿರೋದು ಗೊತ್ತಾಗಿದೆ. ಯಾರ ಮಕ್ಕಳಾದರೂ ಅಷ್ಟೆ,ಬಹಳ ಸಂಕಟ ಆಗಿದೆ. ಆತನಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ನಮ್ಮ ಮುಂದೆ ಹೇಳಿದ್ರೆ ನಾವು ಮದುವೆ ಮಾಡುತ್ತಿದ್ದವು ಎಂದರು.
