AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppal News: ಕನಕಗಿರಿ ಪಟ್ಟಣದ ಜೂನಿಯರ್​ ಕಾಲೇಜಿನ ಗೋಡೆ ಮೇಲೆ ಅಶ್ಲೀಲ ಬರಹ: ಆರೋಪಿ ಬಂಧನ

ಕಳೆದ 2 ವರ್ಷದಿಂದ ಪ್ರೀತಿಸುತ್ತಿದ್ದ ಅಪ್ರಾಪ್ತೆ ತನ್ನಿಂದ ದೂರ ಆಗುತ್ತಾಳೆ ಎನ್ನುವ ದುರುದ್ದೇಶದಿಂದ ಕನಕಗಿರಿ ಪಟ್ಟಣದ ಜೂನಿಯರ್ ಕಾಲೇಜಿನ ಗೋಡೆಗಳ ಅಶ್ಲೀಲ ಬರಹ ಬರೆಯುತ್ತಿದ್ದ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

Koppal News: ಕನಕಗಿರಿ ಪಟ್ಟಣದ ಜೂನಿಯರ್​ ಕಾಲೇಜಿನ ಗೋಡೆ ಮೇಲೆ ಅಶ್ಲೀಲ ಬರಹ: ಆರೋಪಿ ಬಂಧನ
ಬಂಧಿತ ಆರೋಪಿ ಮೆಹಬೂಬ್ ಹಸನ್​ಸಾಬ್ ಸಿಕಲಗಾರ್
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Jul 27, 2023 | 8:10 PM

Share

ಕೊಪ್ಪಳ, ಜುಲೈ 27: ಕನಕಗಿರಿ ಪಟ್ಟಣದ ಜೂನಿಯರ್ ಕಾಲೇಜಿನ ಗೋಡೆಗಳ ಅಶ್ಲೀಲ ಬರಹ ಪ್ರಕರಣ ಆರೋಪಿಯನ್ನು ಕನಕಗಿರಿ ಠಾಣೆ ಪೊಲೀಸರಿಂದ ಬಂಧಿಸಲಾಗಿದೆ (arrested). ಮೆಹಬೂಬ್ ಹಸನ್​ಸಾಬ್ ಸಿಕಲಗಾರ್(27) ಬಂಧಿತ ಆರೋಪಿ. ಪ್ರಕರಣ ಕುರಿತಾಗಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಮಾತನಾಡಿದ್ದು, ಕಳೆದ 2 ವರ್ಷದಿಂದ ಹಸನ್​ಸಾಬ್ ಸಿಕಲಗಾರ್​ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಹುಡುಗಿಗೆ ಬೇರೆಯವನ ಜೊತೆ ಮದುವೆ ನಿಶ್ಚಯವಾಗಿದ್ದಕ್ಕೆ ಆಕ್ರೋಶಗೊಂಡಿದ್ದ. ಬಳಿಕ ಆಕೆ ತನ್ನಿಂದ ದೂರ ಆಗುತ್ತಾಳೆಂಬ ದುರುದ್ದೇಶದಿಂದ ಅಶ್ಲೀಲ ಬರಹ ಬರೆಯುತ್ತಿದ್ದ ಎಂದು ಹೇಳಿದರು.

ನಕಲಿ ಇನ್​ಸ್ಟಾಗ್ರಾಂ ಐಡಿ ಬಳಕೆ

ಒಳ್ಳೆಯವನಂತೆ ನಟಿಸುತ್ತಿದ್ದ ಮೆಹಬೂಬ್ ಹಸನ್​ಸಾಬ್ ಸಿಕಲಗಾರ್​​ ಯಾರಿಗೂ ಅನುಮಾನ ಬರದಂತೆ ನಡೆದುಕೊಳ್ಳುತ್ತಿದ್ದ. ಟೆಕ್ನಿಕಲ್ ಎವಿಡೆನ್ಸ್​ನಲ್ಲಿ ಮೆಹಬೂಬ್ ಹಸನ್​ಸಾಬ್ ಸಿಕಲಗಾರ್ ಸಿಕ್ಕಿಬಿದಿದ್ದಾನೆ. ನಕಲಿ ಇನ್​ಸ್ಟಾಗ್ರಾಂ ಐಡಿ ಬಳಸಿ ಅಶ್ಲೀಲ ಫೋಟೋ, ಬರಹ ಹರಿಬಿಡುತ್ತಿದ್ದ.

ಇದನ್ನೂ ಓದಿ: Koppal News: ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಕಾಲೇಜು ಗೋಡೆಗಳ ಮೇಲೆ ಅಶ್ಲೀಲ ಬರಹ

ಹಲವು ತಿಂಗಳಿಂದ ಕನಕಗಿರಿಯ ಜೂನಿಯರ್​ ಕಾಲೇಜಿನಲ್ಲಿ ಗೋಡೆ ಮೇಲೆ ಅಶ್ಲೀಲ ಬರಹ ಬರೆಯುತ್ತಿದ್ದ. ಹಲವು ಬಾಲಕಿಯರ ವಿದ್ಯಾರ್ಥಿ ಜೀವನಕ್ಕೆ ಕುತ್ತು ತಂದಿದ್ದ. ಹಾಗಾಗಿ ವಿಕೃತಿ ಮೆರೆಯುತ್ತಿದ್ದ ಹಸನ್​ಸಾಬ್​ನನ್ನು ಕನಕಗಿರಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Bangalore Rural News: ಲಾರಿ ಡಿಕ್ಕಿ, ಬೈಕ್​ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬಾಲಕ ಆತ್ಮಹತ್ಯೆ

ಬೆಂಗಳೂರು: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಿಳ್ಳಗನಹಳ್ಳಿ ಮನೆಯಲ್ಲಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ತೌಶೀದ್(15) ಆತ್ಮಹತ್ಯೆಗೆ ಶರಣಾದ ಬಾಲಕ. ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮೃತ ತೌಶೀದ್ ಪೋಷಕರು ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಕೋಣನಕುಂಟೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:05 pm, Thu, 27 July 23