AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಗಡ್ಡೆಯಾಗುವ ಮೊದಲೇ ಹಾಳಾದ ಈರುಳ್ಳಿ, ಬೆಲೆ ಹೆಚ್ಚಾದರೂ ರೈತರಿಗಿಲ್ಲ ಪ್ರಯೋಜನ

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳದಿದ್ದರು. ಆದ್ರೆ ಉತ್ತಮ ಬೆಳೆ ಬರುತ್ತೆ ಅಂತ ಕನಸು ಕಂಡಿದ್ದ ರೈತರಿಗೆ ಇದೀಗ ಶಾಕ್ ಆಗಿದೆ. ಇದಕ್ಕೆ ಕಾರಣ ಮಳೆ ಕೊರತೆ.

ಕೊಪ್ಪಳ: ಗಡ್ಡೆಯಾಗುವ ಮೊದಲೇ ಹಾಳಾದ ಈರುಳ್ಳಿ, ಬೆಲೆ ಹೆಚ್ಚಾದರೂ ರೈತರಿಗಿಲ್ಲ ಪ್ರಯೋಜನ
ಸಾಂದರ್ಭಿಕ ಚಿತ್ರ
ಸಂಜಯ್ಯಾ ಚಿಕ್ಕಮಠ
| Edited By: |

Updated on: Nov 01, 2023 | 4:30 PM

Share

ಕೊಪ್ಪಳ, ನವೆಂಬರ್ 1: ರಾಜ್ಯದಲ್ಲಿ ಈರುಳ್ಳಿ ಬೆಲೆ ಹೆಚ್ಚಾಗಿದ್ದು (Onion Price Hike) ಗ್ರಾಹಕರ ಕಣ್ಣಲ್ಲಿ ಕಣ್ಣೀರು ಬರುವಂತೆ ಮಾಡಿದೆ. ಹಾಗೆಂದು ಈರುಳ್ಳಿ ಬೆಳೆಗಾರರು ಸಂತಸದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರೆ ಅದೂ ಇಲ್ಲ. ಹೌದು ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ಕೂಡಾ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಈರುಳ್ಳಿ ಬೆಲೆ ಏರಿಕೆ ರೈತರಿಗೆ ಖುಷಿ ತಂದಿತ್ತು. ಆದ್ರೆ ಈರುಳ್ಳಿ ಮಾರಾಟ ಮಾಡಿ ಸಾಲ ತೀರಿಸಬೇಕು ಅಂತ ಅಂದುಕೊಂಡಿದ್ದ ರೈತರಿಗೆ ಶಾಕ್ ಆಗಿದೆ. ಯಾಕಂದ್ರೆ ಗಡ್ಡೆಯಾಗುವ ಮೊದಲೇ ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಬಾಡಿ ಹೋಗುತ್ತಿದೆ.

ಈರುಳ್ಳಿ ಬೆಲೆ ಏರಿಕೆಯಿಂದ ರೈತರಿಗೆ ಲಾಭವಾಗುತ್ತಿದೆಯಾ ಅಂದ್ರೆ ಅದು ಕೂಡಾ ಇಲ್ಲಾ. ಕೆಲವೇ ಕೆಲವು ರೈತರಿಗೆ ಮಾತ್ರ ಈರುಳ್ಳಿ ಬೆಲೆಯಿಂದ ಲಾಭವಾಗ್ತಿದೆ. ಬಹುತೇಕ ಈರುಳ್ಳಿ ರೈತರಿಗೆ ಬೆಲೆ ಏರಿಕೆಯ ಲಾಭ ಸಿಗದಂತಾಗಿದೆ.

ಬೆಲೆ ಏರಿಕೆಗೂ ಮಳೆ ಕೊರತೆಯೇ ಕಾರಣ

ಈರುಳ್ಳಿ ಬೆಲೆ ಹೆಚ್ಚಾಗಲು ಅಸಲಿ ಕಾರಣ, ಈ ಬಾರಿ ಉಂಟಾಗಿರೋ ಮಳೆ ಕೊರತೆ. ಹೌದು, ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನೂರಾರು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳದಿದ್ದರು. ಆದ್ರೆ ಉತ್ತಮ ಬೆಳೆ ಬರುತ್ತೆ ಅಂತ ಕನಸು ಕಂಡಿದ್ದ ರೈತರಿಗೆ ಇದೀಗ ಶಾಕ್ ಆಗಿದೆ. ಇದಕ್ಕೆ ಕಾರಣ ಮಳೆ ಕೊರತೆ. ಹೌದು ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಮಳೆ ಕೂಡಾ ಬರ್ತಾಯಿಲ್ಲ. ಹೀಗಾಗಿ ಈರುಳ್ಳಿ ಗಡ್ಡೆಯಾಗೋ ಸಮಯದಲ್ಲಿಯೇ, ನೀರಿನ ಕೊರತೆಯಿಂದ ಹಾಳಾಗಿ ಹೋಗುತ್ತಿದೆ. ಮಳೆಯಾಗಿದ್ದರೆ ಗಡ್ಡೆಗಳು ಉತ್ತವಾಗಿ ಆಗ್ತಿದ್ದವು. ಆದ್ರೆ ಮಳೆಯಾಗದೇ ಇರೋದರಿಂದ ಸರಿಯಾಗಿ ಗಡ್ಡೆಗಳಾಗಿಲ್ಲ. ಗಡ್ಡೆಯಾಗದ ಈರುಳ್ಳಿ ಬಳಕೆಗೆ ಬಾರದೇ ಇರೋದರಿಂದ ರೈತರು, ಜಮೀನಿನಲ್ಲಿಯೇ ಹಾಗೆ ಬಿಟ್ಟಿದ್ದಾರೆ. ಇದೇ ಕಾರಣದಿಂದ ಮಾರ್ಕೇಟ್ ಗೆ ಈರುಳ್ಳಿ ಬರ್ತಾಯಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಹೆಚ್ಚಾಗುತ್ತಿದೆ.

ರೈತರಿಗಿಲ್ಲ ಈರುಳ್ಳಿ ಬೆಲೆ ಏರಿಕೆಯ ಪ್ರಯೋಜನ

ಮತ್ತೊಂದೆಡೆ ಈರುಳ್ಳಿ ಬೆಲೆ ಹೆಚ್ಚಾದ್ರು ಕೂಡಾ ರೈತರಿಗೆ ಮಾತ್ರ ಅದರ ಪ್ರಯೋಜನ ಸಿಗದಂತಾಗಿದೆ. ಹೌದು ಸದ್ಯ ಪ್ರತಿ ಕ್ವಿಂಟಲ್ ಈರುಳ್ಳಿ ಬೆಲೆ ಏಳು ಸಾವಿರ ರೂಪಾಯಿಗೂ ಹೆಚ್ಚಿದೆ. ಉತ್ತಮ ಫಸಲು ಬಂದಾಗ ಈ ಬೆಲೆ ಸಿಕ್ಕಿದ್ದರೆ ರೈತರಿಗೆ ಸಾವಿರಾರು ರೂಪಯಿ ಲಾಭವಾಗ್ತಿತ್ತು. ಆದ್ರೆ ಬೆಲೆ ಹೆಚ್ಚಾದ್ರು ಕೂಡಾ ರೈತರ ಬಳಿ ಈರುಳ್ಳಿ ಇಲ್ಲದೇ ಇರೋದರಿಂದ, ರೈತರಿಗೆ ಬೆಲೆ ಹೆಚ್ಚಾದ್ರು ಕೂಡಾ ಲಾಭ ಸಿಗದಂತಾಗಿದೆ.

ಇದನ್ನೂ ಓದಿ: ವೃದ್ದ ಹುಚ್ಚಮ್ಮಗೆ ಅರ್ಹ ರಾಜೋತ್ಸವ ಪ್ರಶಸ್ತಿ! ಕನ್ನಡ ನಾಡಿಗೆ ಇವರ ಕೊಡುಗೆ ಏನು ಗೊತ್ತಾ?

ಕಳೆದ ವರ್ಷ ಅಧಿಕ ಮಳೆಯಿಂದ ಈರುಳ್ಳಿ ಬೆಳೆ ಹಾಳಾಗಿತ್ತು. ಈ ಬಾರಿ, ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಹಾಳಾಗಿದೆ. ಒಂದು ಎಕರೆ ಈರುಳ್ಳಿ ಬೆಳೆಯಲು ಇಪ್ಪತ್ತೈದು ಸಾವಿರ ಖರ್ಚು ಮಾಡಿದ್ದೇವೆ, ಇದೀಗ ಬೆಲೆ ಹೆಚ್ಚಾದ್ರು ಕೂಡಾ ಲಾಭ ಇಲ್ಲದಂತಾಗಿದೆ ಅಂತಿದ್ದಾರೆ ರೈತರು. ಉತ್ತಮ ಈಳುವರಿ ಬಂದಿದ್ರೆ ಪ್ರತಿ ಎಕರೆಗೆ ಐವತ್ತರಿಂದ ಎಂಬತ್ತು ಕ್ವಿಂಟಲ್ ಈರುಳ್ಳಿ ಬರ್ತಿತ್ತು.ಆದ್ರೆ ಇದೀಗ ಎಕರೆಗೆ ಐದರಿಂದ ಹತ್ತು ಕ್ವಿಂಟಲ್ ಕೂಡಾ ಬೆಳದಿಲ್ಲಾ. ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡಾ ಬರೋದಿಲ್ಲಾ ಅಂತಿದ್ದಾರೆ ರೈತರು.

ಮಳೆ ಕೊರತೆಯಿಂದ ಈರುಳ್ಳಿ ಬೆಳೆ ಹಾಳಾಗಿದೆ. ಇದೇ ಕಾರಣಕ್ಕೆ ಮಾರ್ಕೇಟ್ ಗೆ ಈರುಳ್ಳಿ ಬರ್ತಾಯಿಲ್ಲಾ. ಹೀಗಾಗಿ ಬೆಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನದಲ್ಲಿ ಇನ್ನು ಬೆಲೆ ಹೆಚ್ಚಾದ್ರು ಅಚ್ಚರಿಯಿಲ್ಲಾ ಅಂತಿದ್ದಾರೆ ರೈತರು. ಇನ್ನು ಬೆಲೆ ಹೆಚ್ಚಾದ್ರು ಕೂಡಾ ರೈತರಿಗೆ ನಿರೀಕ್ಷಿತ ಲಾಭ ಸಿಗದೇ ಇರೋದು ಮಾತ್ರ ದುರ್ದೈವದ ಸಂಗತಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?