Kannada Rajotsava award: ವೃದ್ದ ಹುಚ್ಚಮ್ಮಗೆ ಅರ್ಹ ರಾಜೋತ್ಸವ ಪ್ರಶಸ್ತಿ! ಕನ್ನಡ ನಾಡಿಗೆ ಇವರ ಕೊಡುಗೆ ಏನು ಗೊತ್ತಾ?
Koppal Huchhamma Chaudhary: ವೃದ್ದ ಹುಚ್ಚಮ್ಮಗೆ ಅರ್ಹ ರಾಜೋತ್ಸವ ಪ್ರಶಸ್ತಿ: ಶಾಲೆ ನಿರ್ಮಾಣಕ್ಕೆ ಭೂಮಿ ಅವಶ್ಯಕತೆ ಬಗ್ಗೆ ತಿಳಿದ ಹುಚ್ಚಮ್ಮ, ತನ್ನ 2 ಎಕರೆ ಭೂಮಿಯನ್ನು ನೀಡಿದ್ದಾರೆ. ಅದರಂತೆ ನಯಾ ಪೈಸೆ ಪಡೆಯದೇ ಗ್ರಾಮದಲ್ಲಿರುವ, ಅದರಲ್ಲೂ ರಸ್ತೆಗೆ ಹೊಂದಿಕೊಂಡಿರೋ ಭೂಮಿಯನ್ನು ದಾನವಾಗಿ ನೀಡಿದ್ದರು. ಹುಚ್ಚಮ್ಮ ದಾನ ನೀಡಿದ ಭೂಮಿಯಲ್ಲಿಯೇ ಇದೀಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣವಾಗಿದ್ದು ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ!
ಕೊಪ್ಪಳ, ಅಕ್ಟೋಬರ್ 31: ರಾಜ್ಯ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಈ ಬಾರಿಯ ರಾಜೋತ್ಸವ ಪ್ರಶಸ್ತಿಯನ್ನು (Kannada Rajotsava award 2023) ಪ್ರಕಟಿಸಿದೆ. ವಿಶೇಷವಾಗಿ ಈ ಬಾರಿ ಕೊಪ್ಪಳ ಜಿಲ್ಲೆಯ ಮೂವರಿಗೆ ರಾಜೋತ್ಸವ ಪ್ರಶಸ್ತಿ ಸಿಕ್ಕಿದೆ. ವಿಶೇಷವಾಗಿ ಸರ್ಕಾರಿ ಶಾಲೆಗೆ ಭೂಮಿ ದಾನ ಮಾಡಿದ್ದ ಹುಚ್ಚಮ್ಮ ಚೌದ್ರಿ (Koppal Huchhamma Chaudhary) ಅವರಿಗೆ ಈ ಬಾರಿಯ ರಾಜೋತ್ಸವ ಪ್ರಶಸ್ತಿ ಒಲಿದು ಬಂದಿದೆ.
Koppal Huchhamma Chaudhary -ಸರ್ಕಾರಿ ಶಾಲೆಗೆ ಭೂಮಿ ನೀಡಿದ ವೃದ್ದೆಗೆ ರಾಜೋತ್ಸವ ಪ್ರಶಸ್ತಿ
ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ನಿವಾಸಿಯಾಗಿರೋ 75 ವರ್ಷದ ಹುಚ್ಚಮ್ಮ ಚೌದ್ರಿಗೆ ಈ ಬಾರಿಯ ರಾಜೋತ್ಸವ ಪ್ರಶಸ್ತಿ ದೊರತಿದೆ. 30 ವರ್ಷದ ಹಿಂದೆ ಸರ್ಕಾರಿ ಶಾಲೆಯ ನಿರ್ಮಾಣಕ್ಕೆ ಹುಚ್ಚಮ್ಮ ತನ್ನ 2 ಎಕರೆ ಭೂಮಿಯನ್ನು ದಾನ ಮಾಡಿದ್ದರು. ಆ ಮೂಲಕ ತನ್ನೂರಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡಿದ್ದರು. ಹುಚ್ಚಮ್ಮಳ ಈ ಸೇವೆಯನ್ನು ಗಮನಿಸಿ ಸರ್ಕಾರ ಪ್ರಶಸ್ತಿಯನ್ನು ನೀಡಿದೆ.
Koppal Huchamma Chaudhary -ಕೋಟಿ ಕೋಟಿ ಬೆಲೆಬಾಳೋ ಭೂಮಿ ದಾನ ಮಾಡಿದ್ದ ಹುಚ್ಚಮ್ಮ
ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಸುತ್ತಮುತ್ತ ಅನೇಕ ಫ್ಯಾಕ್ಟರಿಗಳಿವೆ. ಹೀಗಾಗಿ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಇನ್ನು ಭೂಮಿ ಬೆಲೆ ಹೆಚ್ಚಾಗಿದ್ದರಿಂದ ಗ್ರಾಮದಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಯಾರೊಬ್ಬರೂ ಭೂಮಿಯನ್ನು ನೀಡಲು ಮುಂದೆ ಬಂದಿರಲಿಲ್ಲ. ಆದರೆ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಭೂಮಿ ಅವಶ್ಯಕತೆ ಬಗ್ಗೆ ತಿಳಿದ ಹುಚ್ಚಮ್ಮ, ತನ್ನ ಪಾಲಿನ ಎರಡು ಎಕರೆ ಭೂಮಿಯನ್ನು ನೀಡಲು ಮುಂದೆ ಬಂದಿದ್ದಳು. ಅದರಂತೆ ನಯಾ ಪೈಸೆ ಹಣವನ್ನು ಪಡೆಯದೇ ಗ್ರಾಮದಲ್ಲಿರುವ, ಅದರಲ್ಲೂ ರಸ್ತೆಗೆ ಹೊಂದಿಕೊಂಡಿರೋ ಭೂಮಿಯನ್ನು ದಾನವಾಗಿ ನೀಡಿದ್ದಳು. ಹುಚ್ಚಮ್ಮ ದಾನ ನೀಡಿದ ಭೂಮಿಯಲ್ಲಿಯೇ ಇದೀಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣವಾಗಿದ್ದು ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Also Read: Rajyotsava Award 2023 Winners List: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಇಲ್ಲಿದೆ ವಿಜೇತರ ಪಟ್ಟಿ
ಇನ್ನು ಹುಚ್ಚಮ್ಮಗೆ ಮದುವೆಯಾಗಿದ್ದು, ಅನೇಕ ವರ್ಷಗಳ ಹಿಂದೆಯೇ ಪತಿ ಮೃತಪಟ್ಟಿದ್ದಾರೆ. ಮಕ್ಕಳು ಕೂಡಾ ಇಲ್ಲ. ಆದ್ರೆ ಮೊಮ್ಮಗಳೊಂದಿಗೆ ವಾಸವಾಗಿರೋ ಹುಚ್ಚಮ್ಮ, ತನಗೆ ಮಕ್ಕಳು ಇಲ್ಲ, ನಮ್ಮೂರಿನ ಶಾಲೆಯ ಮಕ್ಕಳೇ ನನಗೆ ಮಕ್ಕಳಿದ್ದಂತೆ ಅಂತ ತಿಳಿದು ಭೂಮಿ ದಾನ ಮಾಡಿದ್ದಳು.
ಇನ್ನು ರಾಜೋತ್ಸವ ಪ್ರಶಸ್ತಿ ಬಗ್ಗೆ ಪ್ರತಿಕ್ರಿಯಿಸಿರೋ ಹುಚ್ಚಮ್ಮ, ತಾನು ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ. ಆದರೂ ನನಗೆ ಪ್ರಶಸ್ತಿ ನೀಡಿದ್ದಾರೆ. ಪ್ರಶಸ್ತಿ ಸಿಕ್ಕಿರೋದು ಸಂತಸ ತಂದಿದೆ ಅಂದಿದ್ದಾರೆ. ಇನ್ನು ಹುಚ್ಚಮ್ಮ ಳಿಗೆ ಪ್ರಶಸ್ತಿ ಸಿಕ್ಕಿದ್ದು ನಮಗೆಲ್ಲಾ ಸಂತಸ ತಂದಿದೆ. ಹುಚ್ಚಮ್ಮನ ಕೆಲಸ ಎಲ್ಲರಿಗೂ ಮಾದರಿಯಾಗಿದೆ. ಆಕೆಯ ಸಹಾಯದಿಂದ ಇಂದು ನೂರಾರು ಮಕ್ಕಳು ಅಕ್ಷರ ಕಲಿಯುತ್ತಿವೆ ಅಂತಿದ್ದಾರೆ ಕುಣಿಕೇರಿ ಸರ್ಕಾರಿ ಶಾಲೆಯ ಶಿಕ್ಷಕ ಅರವಿಂದ್.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ