ಕೊಪ್ಪಳ: ಬಿಂದಿಗೆ ನೀರಿಗಾಗಿ ಜನರ ಪರದಾಟ; ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು

ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ಶಾಲಾ ಮಕ್ಕಳಿಗೆ ಇದೀಗ ಶಾಲೆಗೆ ಹೋಗುವುದಕ್ಕಿಂತ ಹೆಚ್ಚಾಗಿ, ಕರೆಂಟ್ ಯಾವಾಗ ಬರುತ್ತೋ, ಯಾರ ಬೋರವೆಲ್​ಗೆ ಹೋಗಿ ನೀರು ತರುವುದೋ ಎನ್ನುವುದೇ ದೊಡ್ಡ ಚಿಂತೆಯಾಗಿದೆ. ಹೆತ್ತವರು ಕೂಲಿ ಕೆಲಸಕ್ಕೆ ಹೋದರೆ, ಮಕ್ಕಳಿಗೆ ನೀರು ತರುವುದೆ ದೈನಂದಿನ ಕೆಲಸವಾಗಿದೆ. ಬೇಸಿಗೆ ಆರಂಭದಲ್ಲಿಯೇ ಕೊಪ್ಪಳ ಜಿಲ್ಲೆಯಲ್ಲಿ ನೀರಿಗೆ ತತ್ವಾರ ಆರಂಭವಾಗಿದ್ದು, ಗ್ರಾಮೀಣ ಬಾಗದ ಜನರು ಬಿಂದಿಗೆ ನೀರಿಗಾಗಿ ಅಲೆದಾಡುತ್ತಿದ್ದಾರೆ.

ಕೊಪ್ಪಳ: ಬಿಂದಿಗೆ ನೀರಿಗಾಗಿ ಜನರ ಪರದಾಟ; ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು
ನೀರಿಗಾಗಿ ಕೊಪ್ಪಳ ಜನರ ಪರದಾಟ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 15, 2024 | 6:52 PM

ಕೊಪ್ಪಳ, ಫೆ.15: ಬಿಸಿಲನಾಡು ಎಂದು ಕೆರಸಿಕೊಳ್ಳುವ ಕೊಪ್ಪಳ(Koppal)ದಲ್ಲಿ ಈಗಾಗಲೇ ಬೇಸಿಗೆಯ ಬಿಸಿಲಿನ ತಾಪ ಆರಂಭವಾಗಿದೆ. ಅದರ ಜೊತೆಗೆ ಕುಡಿಯುವ ನೀರಿಗೆ ಅನೇಕ ಕಡೆ ಹಾಹಾಕಾರ ಕೂಡ ಆರಂಭವಾಗಿದೆ. ಮುಂಗಾರು ಮಳೆ, ಹಿಂಗಾರು ಮಳೆ ಸರಿಯಾಗಿ ಆಗದೇ ಇರುವುದರಿಂದ ಕೊಳವೆ ಬಾವಿಗಳು ಬೇಸಿಗೆ ಆರಂಭದಲ್ಲಿಯೇ ಬತ್ತಿ ಹೋಗಿವೆ. ಇದು ಗ್ರಾಮೀಣ ಭಾಗದ ಜನರು ಕುಡಿಯುವ ನೀರಿಗಾಗಿ ಪರದಾಡುವಂತೆ ಮಾಡಿದೆ. ಇನ್ನು ಕೊಪ್ಪಳ ತಾಲೂಕಿನ ಇಂದಿರಾ ನಗರ ತಾಂಡಾದಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ತಾಂಡಾಕ್ಕೆ ನೀರು ಪೂರೈಕೆ ಮಾಡುತ್ತಿದ್ದ ನಾಲ್ಕು ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿವೆಯಂತೆ. ಹೀಗಾಗಿ ತಾಂಡಾದ ನಿವಾಸಿಗಳು, ಖಾಸಗಿ ವ್ಯಕ್ತಿಗಳ ಬಳಿ ಹೋಗಿ, ಗಂಟೆಗಟ್ಟಲೆ ಕಾದು ನಿಂತು, ನೀರು ತುಂಬಿಸಿಕೊಂಡು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.

ಶಾಲೆ ಬಿಟ್ಟು ನೀರು ತುಂಬಿಸೋದನ್ನೇ ಕೆಲಸ ಮಾಡಿಕೊಂಡಿರುವ ಶಾಲಾ ಮಕ್ಕಳು

ತಾಂಡಾದ ಬಹುತೇಕರು ಕೂಲಿ ಕೆಲಸ ಮಾಡುತ್ತಾರೆ. ದೊಡ್ಡವರು ಕೂಲಿ ಕೆಲಸಕ್ಕೆ ಹೋದ್ರೆ, ತಾಂಡಾದಲ್ಲಿರುವ ಶಾಲಾ ಮಕ್ಕಳು ಮತ್ತು ವೃದ್ದರು ಪ್ರತಿನಿತ್ಯ ಅಲ್ಲಲಿ ಅಡ್ಡಾಡಿ ನೀರು ತರುವ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಮಕ್ಕಳಿಗೆ ಇದೀಗ ಪ್ರತಿನಿತ್ಯ ಎಲ್ಲೆಲ್ಲಿ ನೀರು ಸಿಗುತ್ತೋ ಅಲ್ಲಿಗೆ ಹೋಗಿ ನೀರು ತುಂಬಿಕೊಂಡು ಬರುವುದೇ ಪ್ರತಿನಿತ್ಯದ ಕೆಲಸವಾಗಿದೆ. ನಮಗೆ ಓದಲು ಆಗುತ್ತಿಲ್ಲ. ನೀರು ತುಂಬಿಸಿ ಶಾಲೆಗೆ ಹೋಗಬೇಕಾಗಿರುವುದರಿಂದ ಶಾಲೆಯಲ್ಲಿ ಶಿಕ್ಷಕರು ಯಾಕೆ ಶಾಲೆಗೆ ಲೇಟಾಗಿ ಬಂದಿದ್ದೀರಿ ಎಂದು ಹೊಡೆಯುತ್ತಾರೆ. ಶಾಲೆಯಲ್ಲಿ ಪಾಠ ಕೇಳಲು ಕೂಡ ನಮಗೆ ಸರಿಯಾಗಿ ಆಗುತ್ತಿಲ್ಲ ಎಂದು ಹತ್ತಾರು ವಿದ್ಯಾರ್ಥಿಗಳು ನೋವು ತೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ

ಇನ್ನು ಇಂದಿರಾ ನಗರ ತಾಂಡದ ಜನರಿಗೆ ನೀರು ಪೂರೈಕೆ ಮಾಡಲು ಜಲಜೀವನ್​ ಮಿಷನ್ ಅಡಿ, ಮನೆ ಮನೆಗೆ ಗಂಗೆ ಯೋಜನೆ ಜಾರಿಯಾಗಿದೆ. ಪ್ರತಿ ಮನೆಗೆ ನಳದ ಸಂಪರ್ಕ ಕೂಡ ಕಲ್ಪಿಸಲಾಗಿದೆ. ಆದ್ರೆ, ನಳ ಸಂಪರ್ಕ ಕಲ್ಪಿಸಿ ವರ್ಷವಾದರೂ ಕೂಡ ಹನಿ ನೀರು ನಲ್ಲಿಯಲ್ಲಿ ಬಂದಿಲ್ಲ. ಬೇರೆ ಬೋರೆವಲ್​ಗಳು ಬತ್ತಿರೋದರಿಂದ ಖಾಸಗಿ ವ್ಯಕ್ತಿಗಳ ಬೋರೆವಲ್​ಗಳಿಗೆ ಹೋಗಿ, ಅವರಿಗೆ ಮನವಿ ಮಾಡಿ ನೀರು ತುಂಬಿಕೊಂಡು ಬರ್ತಿದ್ದಾರೆ. ಇನ್ನು ಗ್ರಾಮಕ್ಕೆ ನೀರು ಪೂರೈಸಲು ಹೊಸದಾಗಿ ಮತ್ತೊಂದು ಬೋರೆವಲ್ ನನ್ನು ಕೆಲ ತಿಂಗಳ ಹಿಂದೆ ಕೊರೆಸಲಾಗಿದೆಯಂತೆ. ಆದ್ರೆ, ವಿದ್ಯುತ್ ಸಂಪರ್ಕ ಸೇರಿದಂತೆ ಕೆಲ ಕೆಲಸಗಳು ಬಾಕಿ ಇರೋದರಿಂದ ನೀರು ಪೂರೈಕೆಯಾಗ್ತಿಲ್ಲವಂತೆ.

ಪ್ರತಿವರ್ಷ ಬೇಸಿಗೆ ಬಂದಾಗ, ತಮಗೆ ಇದೇ ಸ್ಥಿತಿ ನಿರ್ಮಾಣವಾಗುತ್ತದೆ. ಕಾಟಾಚಾರಾದ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡುತ್ತಾರೆ. ಆದ್ರೆ, ನಮಗೆ ಶಾಶ್ವತವಾಗಿ ಕುಡಿಯುವ ನೀರು ಸಿಗುವಂತಹ ವ್ಯವಸ್ಥೆಯನ್ನು ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ. ಇಂದಿರಾ ನಗರ ತಾಂಡಾಕ್ಕೆ ಎರಡ್ಮೂರು ದಿನದಲ್ಲಿ ಹೊಸ ಬೋರವೆಲ್​ನಿಂದ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳೋದಾಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ರೆ, ತಾತ್ಕಾಲಿಕ ವ್ಯವಸ್ಥೆಗಿಂತ ಶಾಶ್ವತವಾದ ನೀರಿನ ಮೂಲಗಳನ್ನು ಪತ್ತೆ ಮಾಡಿ, ತಾಂಡಾ ನಿವಾಸಿಗಳಿಗೆ ನೀರು ಪೂರೈಕೆ ಮಾಡೋ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ