ಕೋಚಿಂಗ್ ಇಲ್ಲದೆ ನೀಟ್ ರ‍್ಯಾಂಕ್ ಪಡೆದ ಕೊಪ್ಪಳದ ವಿದ್ಯಾರ್ಥಿ ಪ್ರಶಾಂತ್; ಅಡ್ಮಿಷನ್​ಗೆ ಬೇಕಾಗಿದೆ ಹಣದ ಅಗತ್ಯ

| Updated By: ಸುಷ್ಮಾ ಚಕ್ರೆ

Updated on: Nov 15, 2022 | 2:12 PM

ಪ್ರಶಾಂತ್ ಅವರದ್ದು ಕಡು ಬಡತನದ ಕುಟುಂಬವಾಗಿರುವುದರಿಂದ ಎಂಬಿಬಿಎಸ್ ಅಡ್ಮಿಶನ್ ಮಾಡಿಸಲು ದುಡ್ಡಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ, ನನಗೆ ಅಡ್ಮಿಶನ್ ಮಾಡಿಸಲು ದಾನಿಗಳು ದುಡ್ಡು ನೀಡಿ ಎಂದು ಪ್ರಶಾಂತ್ ಮನವಿ ಮಾಡಿದ್ದಾನೆ.

ಕೋಚಿಂಗ್ ಇಲ್ಲದೆ ನೀಟ್ ರ‍್ಯಾಂಕ್ ಪಡೆದ ಕೊಪ್ಪಳದ ವಿದ್ಯಾರ್ಥಿ ಪ್ರಶಾಂತ್; ಅಡ್ಮಿಷನ್​ಗೆ ಬೇಕಾಗಿದೆ ಹಣದ ಅಗತ್ಯ
ಪ್ರಶಾಂತ್
Follow us on

ಕೊಪ್ಪಳ: ವರ್ಷಾನುಗಟ್ಟಲೆ ಕೋಚಿಂಗ್ ಕ್ಲಾಸ್​ಗೆ ಹೋದರೂ ನೀಟ್ (NEET) ಪಾಸ್ ಆಗಿ ಮೆಡಿಕಲ್‌ ಸೀಟ್ ಸಿಗುವುದು ಕಷ್ಟ. ಆದರೆ, ಇಲ್ಲೊಬ್ಬ ವಿದ್ಯಾರ್ಥಿ ಯಾವುದೇ ಕೋಚಿಂಗ್ (Coaching Class) ಇಲ್ಲದೆ ನೀಟ್​ನಲ್ಲಿ ರ‍್ಯಾಂಕ್ ಪಡೆದು ಸರ್ಕಾರಿ ಕಾಲೇಜಿನಲ್ಲಿ ಮೆಡಿಕಲ್‌ ಸೀಟ್ ಸಹ ಪಡೆದಿದ್ದಾನೆ. ಆದರೂ ಆತ ಕಾಲೇಜಿಗೆ ಅಡ್ಮಿಷನ್ ಆಗಲು ದುಡ್ಡಿಲ್ಲದೆ ಪರದಾಡುತ್ತಿದ್ದು, ಹಣಕ್ಕಾಗಿ ದಾನಿಗಳ ನೆರವು ಕೇಳುತ್ತಿದ್ದಾನೆ. ಆತ ಬಾಲ್ಯದಲ್ಲಿದ್ದಾಗ ಆತನ ತಂದೆ-ತಾಯಿ ಅನಾರೋಗ್ಯದಿಂದ ವೈದ್ಯರ ಬಳಿ ಅಲೆದಾಡಿದ್ದನ್ನು ನೋಡಿದ್ದ. ಹೀಗಾಗಿ, ತಾನು ಮೆಡಿಕಲ್ ಓದಿ, ಬಡಜನರಿಗೆ, ಅಸಹಾಯಕರಿಗೆ ಸಹಾಯ ಮಾಡಬೇಕೆಂಬ ಕನಸು ಹೊತ್ತಿದ್ದ. ಆ ಕನಸು ನನಸಾಗಿಸಿಕೊಳ್ಳಲು ಆತನಿಗೆ ಹಣದ ಸಮಸ್ಯೆ ಎದುರಾಗಿದೆ.

ಬಡ ಕುಟುಂಬದ ವಿದ್ಯಾರ್ಥಿಯಾಗಿರುವ ಕೊಪ್ಪಳ ತಾಲೂಕಿನ ಜಿನ್ನಾಪೂರ ಗ್ರಾಮದ ಪ್ರಶಾಂತ್ ಚಂಡೂರ್ ನೀಟ್ ಪರೀಕ್ಷೆಯಲ್ಲಿ 68039ನೇ ರ್ಯಾಂಕ್ ಪಡೆದಿದ್ದು, ಕೊಡಗು ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ) ಸೀಟ್ ಸಿಕ್ಕಿದೆ. ಆದರೆ, ಇದೀಗ ಎಂಬಿಬಿಎಸ್ ಅಡ್ಮಿಷನ್​ಗೆ 1 ಲಕ್ಷಕ್ಕೂ ಹೆಚ್ಚು ಹಣ ಬೇಕಾಗಿದೆ. ಪ್ರಶಾಂತ್ ಅವರದ್ದು ಕಡು ಬಡತನದ ಕುಟುಂಬವಾಗಿರುವುದರಿಂದ ಎಂಬಿಬಿಎಸ್ ಅಡ್ಮಿಶನ್ ಮಾಡಿಸಲು ದುಡ್ಡಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹೀಗಾಗಿ, ನನಗೆ ದಾನಿಗಳು ಅಡ್ಮಿಶನ್ ಮಾಡಿಸಲು ದುಡ್ಡು ನೀಡಿ ಎಂದು ಪ್ರಶಾಂತ್ ಮನವಿ ಮಾಡಿದ್ದಾನೆ.

ಇದನ್ನೂ ಓದಿ: NEET UG 2022 Result: ನೀಟ್ ಫಲಿತಾಂಶ ಪ್ರಕಟ, ಟಾಪ್-10 ಟಾಪರ್ಸ್ ಲಿಸ್ಟ್​ನಲ್ಲಿ ಕರ್ನಾಟಕದ ಮೂವರು

ಪ್ರಶಾಂತ್ ಅವರ ತಂದೆ ಶರಣಪ್ಪ 4 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹೀಗಾಗಿ, ಇಡೀ‌ ಮನೆಯ ಜವಾಬ್ದಾರಿಯನ್ನು ತಾಯಿಯೇ ನಿಭಾಯಿಸುತ್ತಿದ್ದಾರೆ. ಜೊತೆಗೆ, ಪ್ರಶಾಂತ್ ಕೂಡ ಕಾರ್ಖಾನೆಯೊಂದಕ್ಕೆ ಗಾರೆ ಕೆಲಸಕ್ಕೆ ಹೋಗುತ್ತಿದ್ದಾನೆ. ಇದರಿಂದ ಬಂದ ಹಣದಲ್ಲಿ ಪುಸ್ತಕಗಳನ್ನ ಖರೀದಿ ಮಾಡಿ, ಯಾವುದೇ ಕೋಚಿಂಗ್​ಗೆ ಹೋಗದೆ ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದಾ‌ನೆ.

ಮಗನನ್ನು ನನ್ನ ಕೈಲಾದಷ್ಟು ಓದಿಸಿದ್ದೇನೆ. ಬಡತನದ ಕಾರಣದಿಂದ ಇನ್ನು ನಮ್ಮಿಂದ ಆತನನ್ನು ಎಂಬಿಬಿಎಸ್ ಓದಿಸಲು ಸಾಧ್ಯವಿಲ್ಲ. ಹೀಗಾಗಿ ಯಾರಾದರೂ ನನ್ನ ಮಗನಿಗೆ ಓದಲು ಸಹಾಯ ಮಾಡಿ ಎಂದು ಪ್ರಶಾಂತ್​​ನ ತಾಯಿ ಮನವಿ ಮಾಡಿದ್ದಾರೆ. ಪ್ರಶಾಂತ್​ನ ಶಿಕ್ಷಕರು ಸಹ ಪ್ರಶಾಂತ್​ಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka NEET UG 2022: ಇಂದು ಅಣಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟ

ವಿದ್ಯಾಭ್ಯಾಸಕ್ಕಾಗಿ ಪ್ರಶಾಂತ್ ಕಂಡ-ಕಂಡವರ ಬಳಿ ಹಣಕ್ಕಾಗಿ ಅಂಗಲಾಚಿದ್ದು, ಯಾರೂ ಅಷ್ಟೊಂದು ಮೊತ್ತದ ಹಣ ಕೊಡಲು ಮುಂದಾಗುತ್ತಿಲ್ಲ. ಈ ಸುದ್ದಿ ಓದಿದವರು ಈ ಬಡ ವಿದ್ಯಾರ್ಥಿ ಪ್ರಶಾಂತ್​ಗೆ ಸಹಾಯ ಮಾಡಲು ಇಚ್ಛಿಸುವವರು ಈ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ನೆರವು ನೀಡಲು ಬಯಸುವವರು ಪ್ರಶಾಂತ ಶರಣಪ್ಪ ಚಂಡೂರು ಈತನ ಕೊಪ್ಪಳದ ಎಸ್‌ಬಿಐ ಬ್ಯಾಂಕ್‌ ಖಾತೆಗೆ ಹಣ ಹಾಕಬಹುದು.

ಗಮನಕ್ಕೆ:
ಪ್ರಶಾಂತ ಶರಣಪ್ಪ ಚಂಡೂರು
ಖಾತೆ ಸಂಖ್ಯೆ: 34985653322
IFSC ಕೋಡ್: SBIN0004277
ಮೊಬೈಲ್‌ ನಂಬರ್: 6361808300

(ವರದಿ: ದತ್ತಾತ್ರೇಯ ಪಾಟೀಲ್‌, ಕೊಪ್ಪಳ)