NEET UG 2022 Result: ನೀಟ್ ಫಲಿತಾಂಶ ಪ್ರಕಟ, ಟಾಪ್-10 ಟಾಪರ್ಸ್ ಲಿಸ್ಟ್ನಲ್ಲಿ ಕರ್ನಾಟಕದ ಮೂವರು
ನೀಟ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ರಾಜಸ್ಥಾನದ ತನಿಷ್ಕಾ ಅಗ್ರಸ್ಥಾನವನ್ನು ಪಡೆದಿದ್ದಾರೆ. ಅಲ್ಲದೆ ಟಾಪ್-10 ಲಿಸ್ಟ್ನಲ್ಲಿ ಕರ್ನಾಟಕದ ಮೂವರು ಇದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ), ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರ್ಯಾನ್ಸ್ ಟೆಸ್ಟ್(NEET) ಯುಜಿ 2022 ಫಲಿತಾಂಶವನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಮೆಡಿಕಲ್ ಯುಜಿ ಕೋರ್ಸ್ ಪ್ರವೇಶ ಆಕಾಂಕ್ಷಿಗಳು ಎನ್‌ಟಿಎ ನೀಟ್ ಯುಜಿಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್ ntaneet.ac.in ಅಥವಾ nta.nic.in ಮೂಲಕ ಲಾಗಿನ್ ಆಗಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ಈ ವರ್ಷದ ಟಾಪ್-10 ಟಾಪರ್ಸ್
ಈ ವರ್ಷ ನಡೆದ ನೀಟ್ ಪರೀಕ್ಷೆಯಲ್ಲಿ ರಾಜಸ್ಥಾನದ ಅಭ್ಯರ್ಥಿ ತನಿಷ್ಕಾ ಭಾರತದಲ್ಲೇ ಅಗ್ರ ಸ್ಥಾನವನ್ನು ಪಡೆದಿದ್ದು, ಇವರ ನಂತರ ವತ್ಸಾ ಆಶಿಶ್ ಬಾತ್ರಾ ಮತ್ತು ಹೃಷಿಕೇಶ್ ನಾಗಭೂಷಣ ಗಂಗೂಲೆ ಅವರು ರ್ಯಾಂಕ್ ಪಡೆದಿದ್ದಾರೆ.
- ರ್ಯಾಂಕ್ 1: 99.9997733 ಪರ್ಸೆಂಟೇಜ್ನೊಂದಿಗೆ ರಾಜಸ್ಥಾನದ ತನಿಷ್ಕಾ ದೇಶಕ್ಕೆ ಪ್ರಥಮ
- ರ‍್ಯಾಂಕ್ 2: ದೆಹಲಿಯ ವತ್ಸಾ ಆಶಿಶ್ ಬಾತ್ರಾ 99.9997733 ಶೇಕಡಾವರಿನೊಂದಿಗೆ ಅಂಕಗಳೊಂದಿಗೆ
- ರ‍್ಯಾಂಕ್ 3: ಹೃಷಿಕೇಶ್ ನಾಗಭೂಷಣ ಗಂಗೂಲೆ ಕರ್ನಾಟಕದಿಂದ 99.9997733 (715 ಅಂಕ) ದೇಶದಲ್ಲಿ ಮೂರನೇ ಸ್ಥಾನ
- ರ‍್ಯಾಂಕ್ 4: ಕರ್ನಾಟಕದ ರುಚಾ ಪವಾಶೆ ಶೇ.99.997733 (715 ಅಂಕ) ಪಡೆದಿದ್ದಾರೆ.
- ರ‍್ಯಾಂಕ್ 5 : ತೆಲಂಗಾಣದ ಎರ್ರಬೆಲ್ಲಿ ಸಿದ್ಧಾರ್ಥ್ ರಾವ್ ಶೇ.99.9997166 (711 ಅಂಕ)
- ರ‍್ಯಾಂಕ್ 6: ಮಹಾರಾಷ್ಟ್ರದ ರಿಷಿ ವಿನಯ್ ಬಾಲ್ಸೆ ಶೇ.99.9992066 (710 ಅಂಕ)
- ರ‍್ಯಾಂಕ್ 7: ಪಂಜಾಬ್‌ನ ಅರ್ಪಿತಾ ನಾರಂಗ್ ಶೇ.99.992066 (710 ಅಂಕ)
- ರ‍್ಯಾಂಕ್ 8: ಶೇ.99.9920 ಪಡೆದ (710 ಅಂಕ) ಕರ್ನಾಟಕದ ಕೃಷ್ಣ ಎಸ್.ಆರ್.
- ರ‍್ಯಾಂಕ್ 9: ಗುಜರಾತ್‌ನಿಂದ 710 ಅಂಕ ಪಡೆದ ಝೀಲ್ ವಿಪುಲ್ ವ್ಯಾಸ್
- ರ‍್ಯಾಂಕ್ 10: 710 ಅಂಕ ಪಡೆದ ಜಮ್ಮು ಮತ್ತು ಕಾಶ್ಮೀರದ ಹಾಜಿಕ್ ಪರ್ವೀಜ್ ಲೋನ್
ನೀಟ್ ಯುಜಿ 2022 ರಿಸಲ್ಟ್ ಚೆಕ್ ಮಾಡುವುದು ಹೇಗೆ? – ಎನ್‌ಟಿಎ ನೀಟ್ ಅಧಿಕೃತ ವೆಬ್‌ಸೈಟ್ ntaneet.nic.in ಗೆ ಭೇಟಿ ನೀಡಿ. – ತೆರೆದ ಹೋಮ್ ಪೇಜ್‌ನಲ್ಲಿ ನೀಟ್ ಫಲಿತಾಂಶಕ್ಕೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ. – ನಂತರ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ಮಾಹಿತಿ ನೀಡಿ ‘Submit’ ಎಂಬಲ್ಲಿ ಕ್ಲಿಕ್ ಮಾಡಿರಿ. – ರಿಸಲ್ಟ್ ಪೇಜ್ ಓಪನ್ ಆಗುತ್ತದೆ. – ಫಲಿತಾಂಶ ಪೇಜ್ ಅನ್ನು ಡೌನ್‌ಲೋಡ್ ಮಾಡಿ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.
2022ನೇ ಸಾಲಿನ ನೀಟ್ ಯುಜಿ ಪರೀಕ್ಷೆಯನ್ನು ಜುಲೈ 17 ರಂದು ದೇಶದಾದ್ಯಂತ ನಡೆಸಲಾಗಿತ್ತು. ಒಟ್ಟು 546 ನಗರಗಳಲ್ಲಿ ಮತ್ತು ವಿದೇಶದ 14ನಗರಗಳಲ್ಲಿ ನೀಟ್ ಯುಜಿ ಪರೀಕ್ಷೆಯನ್ನು ಮೆಡಿಕಲ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಬರೆಯಲಾಗಿತ್ತು. ಈ ಪರೀಕ್ಷೆಗೆ ಒಟ್ಟು 18 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ರಿಜಿಸ್ಟ್ರೇಷನ್ ಪಡೆದಿದ್ದರು.
ಮತ್ತಷ್ಟು ಶೈಕ್ಷಣಿಕ ಮಾಹಿತಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 am, Thu, 8 September 22