NEET UG 2022 Result ಇಂದು ನೀಟ್ ಯುಜಿ ಪರೀಕ್ಷಾ ಫಲಿತಾಂಶ ಪ್ರಕಟ
ನೀಟ್ ಫಲಿತಾಂಶ 2022 NTA NEET 2022 ಫಲಿತಾಂಶವನ್ನು ಘೋಷಿಸಿದ ತಕ್ಷಣ, ವೈದ್ಯಕೀಯ ಆಕಾಂಕ್ಷಿಗಳು ಅದನ್ನು ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಪರಿಶೀಲಿಸಬಹುದು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಪದವಿಪೂರ್ವ ಫಲಿತಾಂಶವನ್ನು (NEET UG result 2022) ಇಂದು (ಸೆಪ್ಟೆಂಬರ್ 7) ಪ್ರಕಟಿಸಲಿದೆ. NTA NEET 2022 ಫಲಿತಾಂಶವನ್ನು ಘೋಷಿಸಿದ ತಕ್ಷಣ, ವೈದ್ಯಕೀಯ ಆಕಾಂಕ್ಷಿಗಳು ಅದನ್ನು ಅಧಿಕೃತ ವೆಬ್‌ಸೈಟ್ neet.nta.nic.in ನಲ್ಲಿ ಪರಿಶೀಲಿಸಬಹುದು. NEET ಫಲಿತಾಂಶದ ಜೊತೆಗೆ, NTA NEET ಅಂತಿಮ ಉತ್ತರ ಕೀ, ಪದವಿ ಪೂರ್ವ ಮತ್ತು ವೈಯಕ್ತಿಕ ಸ್ಕೋರ್‌ಕಾರ್ಡ್‌ಗಳು, ಕಟ್-ಆಫ್ ಮತ್ತು ಅಖಿಲ ಭಾರತ ಶ್ರೇಣಿಯನ್ನು ಸಹ ಪ್ರಕಟಿಸಲಿದೆ.
NEET ಫಲಿತಾಂಶ ಪರಿಶೀಲಿಸುವುದು ಹೇಗೆ
neet.nta.nic.in ಎಂಬ ನೀಟ್ ಅಧಿಕೃತ ವೆಬ್‌ಸೈಟ್‌ಗೆ ಹೋಗಿ NEET NTA ಫಲಿತಾಂಶದ ಮೇಲೆ ಕ್ಲಿಕ್ ಮಾಡಿ ಮುಂದಿನ ವಿಂಡೋದಲ್ಲಿ, NEET UG 2022 ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ NEET 2022 ಫಲಿತಾಂಶಕ್ಕಾಗಿ ಕ್ಲಿಕ್ ಮಾಡಿ ಫಲಿತಾಂಶ ಡೌನ್‌ಲೋಡ್ ಮಾಡಿ
2022 ರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಯುಜಿ, 2022ನ ಫಲಿತಾಂಶ ಪ್ರಕಟವಾದ ಕೂಡಲೇ ಸ್ಕೋರ್‌ಕಾರ್ಡ್‌ಗಳು ಎಲ್ಲವನ್ನೂ ಸರಿಯಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಳ್ಳಲು ತ್ವರಿತ ಪರಿಶೀಲನೆ ಇಲ್ಲಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಆನ್‌ಲೈನ್‌ನಲ್ಲಿ ಫಲಿತಾಂಶಗಳನ್ನು ಪ್ರಕಟಿಸುವುದರಿಂದ, ಆನ್‌ಲೈನ್ ನಲ್ಲಿ ಸ್ಕೋರ್‌ಕಾರ್ಡ್‌ನ ಪ್ರಿಂಟ್ ಔಟ್ ತೆಗೆದಿರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನೀಟ್ ಅಂಕಪಟ್ಟಿಗಳನ್ನು neet.nta.nic.in, ntaresults.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಫಲಿತಾಂಶ ಪ್ರಕಟವಾದ ನಂತರ, ದೋಷ-ಮುಕ್ತ ಫಲಿತಾಂಶಗಳನ್ನು ಪಡೆಯಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಸಲಹೆಗಳು ಇಲ್ಲಿವೆ
ಫಲಿತಾಂಶವನ್ನು ಪರಿಶೀಲಿಸುವಾಗ, ವಿದ್ಯಾರ್ಥಿಯು ಸಾಮಾನ್ಯ ಅಥವಾ ಮೂಲ ಮಾಹಿತಿಯನ್ನು ಪರಿಶೀಲಿಸಬೇಕು, ಉದಾಹರಣೆಗೆ – ಅಭ್ಯರ್ಥಿಯ ಹೆಸರು, ಪೋಷಕರ ಹೆಸರು ಸೇರಿದಂತೆ ವೈಯಕ್ತಿಕ ವಿವರಗಳು
– ಪರೀಕ್ಷಾ ಕೇಂದ್ರದ ಹೆಸರು
– ಪರೀಕ್ಷೆಯ ದಿನಾಂಕ ಮತ್ತು ಸ್ಥಳ – ಸ್ಪೆಲ್ಲಿಂಗ್
– ಅಂಕಗಳ ಲೆಕ್ಕಾಚಾರ
– ಕ್ರಮ ಸಂಖ್ಯೆ
– ವಿದ್ಯಾರ್ಥಿ ಹೆಸರು ಮತ್ತು ಸ್ಪೆಲ್ಲಿಂಗ್
– ಉತ್ತರಗಳು ಸರಿಯಾಗಿವೆ ಅಥವಾ ಇಲ್ಲ
– ಟೆಸ್ಟ್ ಬುಕ್ಲೆಟ್ ಕೋಡ್ ಮತ್ತು ಸಂಖ್ಯೆ
– ತಾಯಿಯ ಹೆಸರು
– ತಂದೆಯ ಹೆಸರು ಫಲಿತಾಂಶದಲ್ಲಿ ಯಾವುದೇ ಸಂದೇಹ ಅಥವಾ ದೋಷ ಕಂಡುಬಂದಲ್ಲಿ, ವಿದ್ಯಾರ್ಥಿಗಳು neet.nta.nic.in ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಅಥವಾ ಸಹಾಯವಾಣಿ ಸಂಖ್ಯೆ- 011-69227700 011-40759000 ಅನ್ನು ಸಂಪರ್ಕಿಸಬಹುದು.
ತಾಂತ್ರಿಕ ದೋಷಗಳಿಂದ ಜುಲೈ 17 ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಹಾಜರಾಗಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 4 ರಂದು ನೀಟ್ ಮರು ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವರ್ಷ 18 ಲಕ್ಷಕ್ಕೂ ಹೆಚ್ಚು (18,72,343) ಅಭ್ಯರ್ಥಿಗಳು NEET UG ಪರೀಕ್ಷೆಗೆ ಹಾಜರಾಗಿದ್ದರು.
13 ಭಾಷೆಗಳಲ್ಲಿ ನಡೆದಿದ್ದ ನೀಟ್ ಪರೀಕ್ಷೆ
MBBS/BDS/BAMS/BSMS/BUMS/BHMS ಪ್ರವೇಶಕ್ಕಾಗಿ ನಡೆದ ನೀಟ್ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗಿತ್ತು. ಅಲ್ಲದೆ ಮೊದಲ ಬಾರಿಗೆ ಅಬುಧಾಬಿ, ಬ್ಯಾಂಕಾಕ್, ಕೊಲಂಬೊ, ದೋಹಾ, ಕಠ್ಮಂಡು, ಕೌಲಾಲಂಪುರ್, ಲಾಗೋಸ್, ಮನಾಮ, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್ ಜೊತೆಗೆ ದುಬೈ ಮತ್ತು ಕುವೈತ್ ಸಿಟಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗಿದೆ. ಭಾರತ ಹೊರತು ಪಡಿಸಿ 14 ನಗರಗಳಲ್ಲಿ ಪರೀಕ್ಷೆ ನಡೆದಿದೆ.
Published On - 8:00 pm, Wed, 7 September 22