ಕೊಪ್ಪಳ, ಸೆ.16: ಸಾಲು ಕೊಡುವ ನೆಪದಲ್ಲಿ ಮಹಿಳೆ ಜೊತೆ ಅನುಚಿತವಾಗಿ ವರ್ತನೆ ಮಾಡಿದ ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಥಳಿಸಿದ ಘಟನೆ ಕೊಪ್ಪಳ (Koppal) ತಾಲೂಕಿನ ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ. ನಾಗಮ್ಮ ಎಂಬುವರು ಸಿಬ್ಬಂದಿ ಯಮನೂರಪ್ಪಗೆ ಚಪ್ಪಲಿಯಿಂದ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಗೋದಾವರಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಯಮನೂರಪ್ಪ ಅವರು ಲೋನ್ ಕೊಡುವ ನೆಪದಲ್ಲಿ ಮೈಕ್ರೋಫೈನಾನ್ಸ್ ಮಹಿಳಾಗುಂಪಿನ ಸದಸ್ಯೆಯಾಗಿರುವ ವಿವಾಹಿತ ಮಹಿಳೆ ಮೇಲೆ ಕೆಟ್ಟದೃಷ್ಟಿ ಇಟ್ಟಿದ್ದಾರೆ. ನಾಗಮ್ಮಳಿಗೆ ಗುಂಪಿನ ಅನುಸಾರವಾಗಿ ಲೋನ್ ಮಂಜೂರು ಆಗಿತ್ತಂತೆ. ಆದರೆ ಯಮನೂರಪ್ಪ ನಾಗಮ್ಮಳಿಗೆ ಲೋನ್ ಕೊಡಲು ತಕರಾರು ಎತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಉದ್ಯಮಿ ಗೋವಿಂದ ಪೂಜಾರಿ ರೀತಿಯಲ್ಲೆ ಟಿಕೆಟ್ಗಾಗಿ ಲಕ್ಷ ಲಕ್ಷ ಕಳೆದುಕೊಂಡ ಬಿಜೆಪಿ ಮುಖಂಡ
ಲೋನ್ ಕೊಡುವ ನೆಪದಲ್ಲಿ ತನ್ನ ಜೊತೆ ಒಂದು ದಿನ ಕಾಲಕಳೆಯಲು ಕರೆದಿದ್ದಾನೆಂದು ಯಮನೂರಪ್ಪ ವಿರುದ್ಧ ನಾಗಮ್ಮ ಆರೋಪ ಮಾಡಿದ್ದಾರೆ. ಅಲ್ಲದೆ, ಯಮನೂರಪ್ಪ ವರ್ತನೆಗೆ ರೊಚ್ಚಿಗೆದ್ದ ನಾಗಮ್ಮ ಹಾಗೂ ಆಕೆಯ ತಾಯಿ, ಯಮನೂರಪ್ಪಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಇದ್ದರೆ ನಮ್ಮ ಬಳಿ ಹೇಳಬೇಕಿತ್ತು ಎಂದು ಆಕ್ಷೇಪಿಸಿ ಮಹಿಳೆಯ ಮನೆ ಬಳಿ ಒಂದಷ್ಟು ಜನರು ಜಮಾಯಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ