ತುಂಗಭದ್ರಾ ಡ್ಯಾಂನಿಂದ ಕಾರ್ಖಾನೆಗೆ ಅಕ್ರಮವಾಗಿ ನೀರು ಬಿಡುವ ಆರೋಪ; 6 ಅಧಿಕಾರಿಗಳ ಅಮಾನತಿಗೆ ಸಚಿವ ಆನಂದ್ ಸಿಂಗ್ ಸೂಚನೆ
ಅಚ್ಚುಕಟ್ಟು ರೈತರಿಗೆ ನೀರು ದೊರೆಯುತ್ತಿಲ್ಲ. ಟಿಬಿ ಡ್ಯಾಂ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದ್ದರು. ರೈತರ ದೂರು ಆಧರಿಸಿ ಅಧಿಕಾರಿಗಳ ಅಮಾನತಿಗೆ ಆನಂದ್ ಸಿಂಗ್ ಮುಂದಾಗಿದ್ದಾರೆ.
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗೆ ಅಕ್ರಮವಾಗಿ ನೀರು ಬಿಡುವ ಆರೋಪ ಕೇಳಿ ಬಂದಿದ್ದು ಆರೋಪ ಹಿನ್ನೆಲೆ 6 ಅಧಿಕಾರಿಗಳನ್ನ ಅಮಾನತು ಮಾಡಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸೂಚಿಸಿದ್ದಾರೆ. ರಾಜ್ಯ ನೀರಾವರಿ ನಿಗಮದ 6 ಎಎಇಗಳ ಅಮಾನತಿಗೆ ಸಚಿವ ಆನಂದ್ ಸಿಂಗ್ ಸೂಚನೆ ನೀಡಿದ್ದಾರೆ. ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ವಿವಿಧ ಕಡೆ ಕೆಲಸ ಮಾಡುವ 6 ಅಧಿಕಾರಿಗಳು ಕರ್ತವ್ಯಲೋಪ ಆಧಾರದ ಮೇಲೆ ಅಮಾನತಿಗೆ ಈಗಲೇ ಮೇಲ್ ಕಳಸಿ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತುಂಗಭದ್ರಾ ನೀರಾವರಿ ಕಚೇರಿಗೆ ಸಚಿವ ಆನಂದ್ ಸಿಂಗ್ ಅನಿರೀಕ್ಷಿತ ಭೇಟಿ ವೇಳೆ ಸೂಚನೆ ನೀಡಿದ್ದರು. ಈಗ ಮೇಲ್ ಮೂಲಕವೂ ತಿಳಿಸಿದ್ದಾರೆ. ಟಿಬಿ ಡ್ಯಾಂ ಎಡದಂಡೆ ಕಾಲುವೆ ವ್ಯಾಪ್ತಿಯ ರೈತರ ದೂರಿನ ಹಿನ್ನೆಲೆ ಆನಂದ್ ಸಿಂಗ್ ಕಾಡಾ ಕಚೇರಿಗೆ ಭೇಟಿ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು.
ಅಚ್ಚುಕಟ್ಟು ರೈತರಿಗೆ ನೀರು ದೊರೆಯುತ್ತಿಲ್ಲ. ಟಿಬಿ ಡ್ಯಾಂ ಎಡದಂಡೆ ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ ಎಂದು ರೈತರು ಆರೋಪಿಸಿದ್ದರು. ರೈತರ ದೂರು ಆಧರಿಸಿ ಅಧಿಕಾರಿಗಳ ಅಮಾನತಿಗೆ ಆನಂದ್ ಸಿಂಗ್ ಮುಂದಾಗಿದ್ದಾರೆ. ಡ್ಯಾಂ ಹಿನ್ನೀರು ಪ್ರದೇಶಕ್ಕೆ ತೆರಳಿ ವೀಕ್ಷಿಸಿದ ಸಚಿವ ಆನಂದ್ ಸಿಂಗ್, ಜಲಾಶಯದಲ್ಲಿ ಕಾರ್ಖಾನೆಗಳು ಅಳವಡಿಸಿದ್ದ ನೀರಿನ ಮೋಟರ್ಗಳನ್ನ ಚೆಕ್ ಮಾಡಿದ್ರು. ಕಾರ್ಖಾನೆಗಳಿಗೆ ಅಧಿಕಾರಿಗಳು ಅಕ್ರಮವಾಗಿ ನೀರು ನೀಡ್ತಾರೆ ಎಂದು ಆರೋಪಿಸಿ ರೈತರು ಪ್ರತಿಭಟನೆ ಹಮ್ಮಿಕೊಂಡಿದ್ರು. ಈ ವೇಳೆ ಅಧಿಕಾರಿಗಳ ವಿರುದ್ದ ಗರಂ ಆದ ಆನಂದ್ ಸಿಂಗ್ ಅಮಾನತ್ತು ಮಾಡುವಂತೆ ಸೂಚಿಸಿದ್ದರು. ನಾನು ಹೋಗಿ ಬರೋ ಅಷ್ಟರಲ್ಲಿ ಆರು ಜನರನ್ನು ಸಸ್ಪೆಂಡ್ ಮಾಡಿ ಎಂದು ಅಧಿಕಾರಿಗಳಿಗೆ ವಾರ್ನ್ ಮಾಡಿದ್ರು.
ಇದನ್ನೂ ಓದಿ: ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ; ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
ಅತ್ಯಾಚಾರವನ್ನೂ ಆಯುಧವಾಗಿಸಿಕೊಂಡ ರಷ್ಯಾ ಸೇನೆ: ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಗಂಭೀರ ಆರೋಪ