ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ; ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಸಂದರ್ಭಕ್ಕನುಗುಣವಾಗಿ ಕ್ರಮ ಕೈಗೊಂಡಿದ್ದೇವೆ ಎಂದು ಮಾತನಾಡಿದ ಸಿಎಂ, ಶಿವಮೊಗ್ಗ ಘಟನೆಯಾದಾಗ ಕ್ರಮ ತೆಗೆದುಕೊಂಡಿದ್ದೇವೆ. ಧಾರವಾಡ ಘಟನೆ ಆದಾಗ ಕ್ರಮ ತೆಗೆದುಕೊಂಡಿದ್ದೇವೆ. ಕೋಲಾರ ಘಟನೆ ಸಂದರ್ಭ ಕ್ರಮ ತೆಗೆದುಕೊಂಡಿದ್ದೇವೆ.

ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ; ಸಿದ್ದರಾಮಯ್ಯ, ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು
Follow us
TV9 Web
| Updated By: sandhya thejappa

Updated on:Apr 12, 2022 | 10:52 AM

ಉಡುಪಿ: ಜಿಲ್ಲೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿದರು. ‘ನಾವು ಸರ್ಕಾರದಲ್ಲಿರುವವರು, ಕೆಲಸ ಮಾಡುವ ಸ್ಥಳದಲ್ಲಿದ್ದೇವೆ. ಮಾತಿಗೆ ಬೆಲೆ ಬರಬೇಕಾದರೆ ಭಾಷೆ ಬಹಳ ಮುಖ್ಯ. ಸಿದ್ದರಾಮಯ್ಯ, ಕುಮಾರಸ್ವಾಮಿಗೆ ತೊಂದರೆಯಾಗಿದೆ. ನನ್ನ ಮೌನ ಅವರಿಗೆ ತೊಂದರೆ ಆದರೆ ನಾನೇನು ಮಾಡಲಿ. ಸಿದ್ದರಾಮಯ್ಯ, ಹೆಚ್​ಡಿಕೆ ಬಾಯಿಗೆ ಬಂದಂಗೆ ಮಾತಾಡ್ತಾರೆ’ ಎಂದು ಮಣಿಪಾಲದಲ್ಲಿ ಸಿಎಂ ಹೇಳಿಕೆ ನೀಡಿದ್ದಾರೆ.

ಸಂದರ್ಭಕ್ಕನುಗುಣವಾಗಿ ಕ್ರಮ ಕೈಗೊಂಡಿದ್ದೇವೆ ಎಂದು ಮಾತನಾಡಿದ ಸಿಎಂ, ಶಿವಮೊಗ್ಗ ಘಟನೆಯಾದಾಗ ಕ್ರಮ ತೆಗೆದುಕೊಂಡಿದ್ದೇವೆ. ಧಾರವಾಡ ಘಟನೆ ಆದಾಗ ಕ್ರಮ ತೆಗೆದುಕೊಂಡಿದ್ದೇವೆ. ಕೋಲಾರ ಘಟನೆ ಸಂದರ್ಭ ಕ್ರಮ ತೆಗೆದುಕೊಂಡಿದ್ದೇವೆ. ಇವರ ಹಾಗೆ ಓಲೈಸುವ ರಾಜಕಾರಣ ಮಾಡಿಲ್ಲ, ಮಾಡದು ಇಲ್ಲ ಹೇಳಿದರು.

ಅಭಿಯಾನಕ್ಕೆ ಸಿಎಂ ಚಾಲನೆ: ಇನ್ನು ಉಡುಪಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ ಆರಂಭಿಸಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದರು. ನಿಸರ್ಗದ ರಕ್ಷಣೆಗಾಗಿ ಸದ್ಗುರುರಿಂದ ದೊಡ್ಡ ಅಭಿಯಾನ ಕೈಗೊಂಡಿದ್ದಾರೆ. ಚಾಲನೆ ನೀಡಿದ ಮಾತನಾಡಿದ ಸಿಎಂ, ತಾಯಿ ಗರ್ಭ ಮತ್ತು ಭೂಗರ್ಭ ಬಹಳ ಪವಿತ್ರವಾದದ್ದು. ಭೂಗರ್ಭವನ್ನು ಕಾಪಾಡಲು ಮಣ್ಣಿನ ರಕ್ಷಣೆ ಅವಶ್ಯಕ. ಭೂಮಿ, ಮಣ್ಣು ಕಾಪಾಡುವುದು ಮನುಷ್ಯನ ಆದ್ಯ ಕರ್ತವ್ಯ ಎಂದು ನುಡಿದರು.

ಇದೇ ವೇಳೆ ಕೊವಿಡ್ ಮಾರ್ಗಸೂಚಿ ಬಗ್ಗೆಯೂ ಮಾತನಾಡಿದರು. ಮುಂಜಾಗರೂಕತೆಯಿಂದ ಕ್ರಮವಾಗಿ ಕೈಗೊಳ್ತಿದ್ದೇವೆ. ನಿಯಮ ಪಾಲಿಸಿದರೆ ಯಾವುದೇ ಪರಿಸ್ಥಿತಿ ಎದುರಿಸಬಹುದು ಎಂದರು.

ಇದನ್ನೂ ಓದಿ

ಜೆಡಿಎಸ್​ಗೆ ಬಹುಮತ ಕೊಡಿ, 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ; ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್ ಇ-ಮೇಲ್ ಪ್ರಕರಣ; VPN ಬಳಸಿ ಮೇಲ್ ಮಾಡಿರೋ ಶಂಕೆ

Published On - 10:48 am, Tue, 12 April 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ