AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹನುಮ ಮಾಲೆ ಧರಿಸಿದ ಶಾಸಕ ಜನಾರ್ದನ ರೆಡ್ಡಿ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ರೆಡ್ಡಿ, ನಂತರ‌ ಹನುಮ ಮಾಲೆ ಧರಿಸಿದರು. ನನ್ನ ಕಳೆದ ವರ್ಷದ ಸಂಕಲ್ಪವನ್ನು ಆಂಜನೇಯ ಈಡೇರಿಸಿದ್ದಾನೆ. ಈ ಬಾರಿ ರಾಜ್ಯಾದ್ಯಂತ ಪಕ್ಷ ವಿಸ್ತರಣೆ ಮತ್ತು ಕಿಷ್ಕಿಂದೆಯ ಅಭಿವೃದ್ಧಿ ಬಗ್ಗೆ ಸಂಕಲ್ಪ ಮಾಡಿರೋದಾಗಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಪಂಪಾ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹನುಮ ಮಾಲೆ ಧರಿಸಿದ ಶಾಸಕ ಜನಾರ್ದನ ರೆಡ್ಡಿ
ಹನುಮ ಮಾಲೆ ಧರಿಸಿದ ಶಾಸಕ ಜನಾರ್ದನ ರೆಡ್ಡಿ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಆಯೇಷಾ ಬಾನು

Updated on: Dec 22, 2023 | 9:40 AM

ಕೊಪ್ಪಳ, ಡಿ.22: ಚಾತುರ್ಮಾಸದಲ್ಲಿ ಹನುಮ ಮಾಲೆಯನ್ನು (Hanuman Male) ಹಾಕಿದರೆ ಇಷ್ಟಾರ್ಥಗಳು ಸಿದ್ದಿಸುತ್ತವೆ ಅನ್ನೋ ನಂಬಿಕೆ ಅನೇಕ ಆಂಜನೇಯನ ಭಕ್ತರಲ್ಲಿದೆ. ಹೀಗಾಗಿ ಅನೇಕರು ಹನುಮ ಮಾಲೆಯನ್ನು ಧರಿಸಿ, ಡಿಸೆಂಬರ್ 24 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಹನುಮನ ಜನ್ಮಸ್ಥಳ ಆಂಜನಾದ್ರಿಯಲ್ಲಿ (Anjanadri Betta) ಹನುಮ ಮಾಲೆಯನ್ನು ವಿಸರ್ಜನೆ ಮಾಡುತ್ತಾರೆ. ಅದೇ ರೀತಿ ಕೆಆರ್​ಪಿಪಿ ಸಂಸ್ಥಾಪಕ ಮತ್ತು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ (Janardhana Reddy) ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹನುಮ ಮಾಲೆ ಧರಿಸಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿದ ರೆಡ್ಡಿ, ನಂತರ‌ ಹನುಮ ಮಾಲೆ ಧರಿಸಿದರು. ಕಳೆದ ವರ್ಷ ಹನುಮ ಮಾಲೆ ಧರಿಸಿಯೇ ಗಂಗಾವತಿ ಕ್ಷೇತ್ರದಲ್ಲಿ ಚುನಾವಣೆ ಗೆ ಸ್ಪರ್ಧಿಸೋದಾಗಿ ಜನಾರ್ದನ ರೆಡ್ಡಿ ಘೋಷಿಸಿದ್ದರು. ನಂತರ ಗಂಗಾವತಿ ಕೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.

ಈ ಬಗ್ಗೆ ಮಾತನಾಡಿದ ರೆಡ್ಡಿ, ಕಳೆದ ವರ್ಷ ಹನುಮನ ಪಾದಕ್ಕೆರಗಿ ಬೇಡಿಕೊಂಡಿದ್ದೆ. ಹೊಸ ಪಕ್ಷ ಸ್ಥಾಪನೆ ಮತ್ತು ಗಂಗಾವತಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದೆ. ನನ್ನ ಕಳೆದ ವರ್ಷದ ಸಂಕಲ್ಪವನ್ನು ಆಂಜನೇಯ ಈಡೇರಿಸಿದ್ದಾನೆ. ಈ ಬಾರಿ ರಾಜ್ಯಾದ್ಯಂತ ಪಕ್ಷ ವಿಸ್ತರಣೆ ಮತ್ತು ಕಿಷ್ಕಿಂದೆಯ ಅಭಿವೃದ್ಧಿ ಬಗ್ಗೆ ಸಂಕಲ್ಪ ಮಾಡಿರೋದಾಗಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ಕೋಮುಸೂಕ್ಷ್ಮ ಗಂಗಾವತಿ ಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ: ಸಿಸಿಟಿವಿ ಕಣ್ಗಾವಲು, ಬಿಗಿ ಪೊಲೀಸ್ ಬಂದೋಬಸ್ತ್

ಗಂಗಾವತಿ ಪಟ್ಟಣದಲ್ಲಿ ಸಂಕೀರ್ತನಾ ಯಾತ್ರೆ, ಸಿಸಿಟಿವಿ ಕಣ್ಗಾವಲು

ಡಿಸೆಂಬರ್ 24 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಹನುಮ ಮಾಲಾಧಾರಿಗಳು ಆಗಮಿಸಿ, ಹನುಮ ಮಾಲೆಯನ್ನು ವಿಸರ್ಜಿಸಲಿದ್ದಾರೆ. ಆದರೆ ಇಷ್ಟು ವರ್ಷ ಹನುಮ ಮಾಲೆ ವಿಸರ್ಜನೆ ದಿನವೇ ನಡೆಯುತ್ತಿದ್ದ ಸಂಕೀರ್ತನಾ ಯಾತ್ರೆ ಎರಡು ದಿನ ಮೊದಲೇ ಗಂಗಾವತಿ ಪಟ್ಟಣದಲ್ಲಿ ನಡೆಯುತ್ತಿದೆ. ಕೋಮು ಸೂಕ್ಷ್ಮ ನಗರವಾಗಿರೋ ಗಂಗಾವತಿ ಪಟ್ಟಣದಲ್ಲಿ ಇಂದು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು ಹನುಮ ಮಾಲೆ ಅಂಗವಾಗಿ ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿವೆ. ಇಂದು ಮುಂಜಾನೆ ಹತ್ತು ಗಂಟೆಗೆ ಗಂಗಾವತಿ ಪಟ್ಟಣದ ಎಪಿಎಂಸಿಯಿಂದ ಆರಂಭವಾಗಲಿರೋ ಸಂಕೀರ್ತನಾ ಯಾತ್ರೆಯಲ್ಲಿ ಗಂಗಾವತಿ ತಾಲೂಕಿನ ಸಾವಿರಾರು ಹನುಮ ಮಾಲಾಧಾರಿಗಳು ಭಾಗಿಯಾಗಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ