ಅಂಜನಾದ್ರಿ ಬೆಟ್ಟದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಬೇಡ; ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಪತ್ರ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 30, 2022 | 2:20 PM

ಅಂಜನಾದ್ರಿಯಲ್ಲಿ ಹಿಂದೂಗಳನ್ನು ಹೊರತುಪಡಿಸಿ ಮುಸ್ಲಿಂ, ಕ್ರಿಶ್ಚಿಯನ್ನರು ವ್ಯಾಪಾರ ನಡೆಸುವಂತಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ನಾಮಫಲಕ ಹಾಕುವ ಮೂಲಕ ಧರ್ಮ ಸಂಘರ್ಷ ಮುನ್ನೆಲೆಗೆ ಬಂದಿದೆ.

ಅಂಜನಾದ್ರಿ ಬೆಟ್ಟದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಬೇಡ; ಜಿಲ್ಲಾಧಿಕಾರಿಗೆ ಹಿಂದೂ ಜಾಗರಣ ವೇದಿಕೆ ಪತ್ರ
ಅಂಜನಾದ್ರಿ
Follow us on

ಕೊಪ್ಪಳ: ಅಂಜನಾದ್ರಿಯಲ್ಲಿ ಈ ಭಾರಿ ಹಿಂದೂಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು ನೆಡಸದಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಾಣ ವೇದಿಕೆ ಮನವಿ ಮಾಡಿದೆ. ಡಿಸೆಂಬರ್ 5 ರಂದು ಹನುಮ ಜಯಂತಿ ಇರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಬರುತ್ತಿದ್ದಾರೆ. ಹೀಗಾಗಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಸಂಜೀವ್ ಮನವಿ ಮಾಡಿದ್ದಾರೆ.

ಇನ್ನು ಜಿಲ್ಲಾಡಳಿತ ಅಂಜನಾದ್ರಿಯಲ್ಲಿ ಸಕಲ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಧರ್ಮ ಸಂಘರ್ಷದಿಂದ ಜಿಲ್ಲಾಡಳಿತಕ್ಕೆ ತಲೆನೋವು ಶುರುವಾಗಿದೆ‌. ಶಾಂತಿಯುತವಾಗಿ ಮತ್ತು ಅದ್ದೂರಿಯಾಗಿ ಹನುಮ ಮಾಲಾಧಾರಿಗಳ ಕಾರ್ಯಕ್ರಮವನ್ನು ಮಾಡಬೇಕಿಂದಿದ್ದ ಜಿಲ್ಲಾಡಳಿತಕ್ಕೆ ಹಿಂದೂ ಸಂಘಟನೆಗಳು ಹಿಡಿದಿರುವ ಹೊಸ ಸವಾಲಿಗೆ ಆಂತಕ ಎದುರಾಗಿದೆ.

ಈ ಹಿಂದೆ ಕೂಡ ಹಿಂದೂ ಕಾರ್ಯಕರ್ತ ಮಧುಗಿರಿ ಮೋದಿ ಹಾಗೂ ಶ್ರೀರಾಮ‌ಸೇನೆ ವಿಭಾಗಿಯ ಅಧ್ಯಕ್ಷ ಸಂಜೀವ್ ಮರಡಿ ಕೂಡ ಹಿಂದೂ ಹೊರತುಪಡಿಸಿ ಬೇರೆ ಯಾರು ಕೂಡ ವ್ಯಾಪಾರ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದರು,. ಇದೀಗ ಹಿಂದೂ ಜಾಗರಣವೇದಿಕೆ ಜಿಲ್ಲಾ ಸಂಚಾಲಕ ಸಂಜೀವ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಮುಸ್ಲಿಂ, ಕ್ರಿಶ್ಚಿಯನ್, ವ್ಯಾಪಾರ ನಿಷೇಧ ಮಾಡಬೇಕು. ವ್ಯಾಪಾರ ವಹಿವಾಟು ಹೆಸರಿನಲ್ಲಿ ಮುಸ್ಲಿಂ ಉಗ್ರರ ಪ್ರವೇಶವಾಗುತ್ತಿದೆ. ಹಿಂದೂ ಧಾರ್ಮಿಕ ಸ್ಥಳಗಳ‌ ಮಾಹಿತಿ ಕಲೆ ಹಾಕಲಾಗುತ್ತದೆ. ಹೀಗಾಗಿ ಅಂಜನಾದ್ರಿ ಬೆಟ್ಟದಲ್ಲಿ ಅವರಿಗೆ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದ್ದು, ನಾಮಫಲಕ‌ ಕೂಡ ಹಾಕಿದ್ದಾರೆ.

ಇದನ್ನೂ ಓದಿ:ಕೊಪ್ಪಳದಲ್ಲಿ ಭಾವೈಕ್ಯತೆ ಸಂದೇಶ: ಪುರಾತನ ಆಂಜನೇಯ ವಿಗ್ರಹಕ್ಕೆ ಮುಸ್ಲಿಂ ವ್ಯಕ್ತಿ ಭಕ್ತಿಯಿಂದ ಪೂಜೆ

ಇದರೊಂದಿಗೆ ಖಾಕಿ ಪಡೆ ಕೂಡ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಹಾಗೂ ಭದ್ರತೆಯನ್ನು ಮಾಡಿಕೊಂಡಿದ್ದಾರೆ. ಒಟ್ಟಾರೆ ದೇಶ ವಿದೇಶಗಳಲ್ಲಿ ಗಮನ ಸೆಳೆಯುತ್ತಿರುವ ಅಂಜನಾದ್ರಿ ಹನುಮನ ಸ್ಥಳದಲ್ಲಿ ಮುಸ್ಲಿಂ, ಕ್ರಿಶ್ಚಿಯನ್​ರ ವ್ಯಾಪಾರ ನಿಷೇಧಿಸುವಂತೆ ಹೇಳುವ ಮೂಲಕ ಧರ್ಮ ಸಂಘರ್ಷವನ್ನು ಹಿಂದೂ ಜಾಗರಣವೇದಿಕೆ ಆರಂಭಿಸಿದೆ.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ