ಕೊಪ್ಪಳ: ಜಿಲ್ಲೆಯ ಗಂಗಾವತಿ(Gangavathi) ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನ ಗಡ್ಡೆಯಲ್ಲಿ ಪೂಜೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ರಾಘವೇಂದ್ರ ಮಠದವರು ಜಯತೀರ್ಥರ ಆರಾಧನೆಗೆ ಹಾಗೂ ಉತ್ತರಾಧಿಮಠದವರು ರಘುವರ್ಯ ತೀರ್ಥರ ಮಹಿಮೋತ್ಸಕ್ಕೆ ಅವಕಾಶ ಕೇಳಿದ್ದು, ಇಬ್ಬರು ಏಕಕಾಲದಲ್ಲಿ ಜುಲೈ 6 ರಿಂದ 8 ರವರೆಗೆ ನವವೃಂದಾವನ ಗಡ್ಡೆಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆ ಇದಕ್ಕೆ ಅನುಮತಿ ನೀಡುವಂತೆ ಗಂಗಾವತಿ ತಹಶೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಎರಡೂ ಕಡೆಯ ಪೂಜಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ.
ಇನ್ನು ಇಬ್ಬರು ಒಂದೇ ದಿನಾಂಕದಂದು ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿ, ರಾಘವೇಂದ್ರ ಮಠದವರು ಹಾಗೂ ಉತ್ತರಾಧಿ ಮಠದಿಂದ ಆರಾಧನೆಗೆ ಆಚರಣೆಗೆ ಅನುಮತಿ ಕೋರಿ ಪ್ರತ್ಯೇಕ ಆರ್ಜಿ ನೀಡಲಾಗಿತ್ತು. ಈ ಹಿನ್ನಲೆ ತಾಲೂಕ ಆಡಳಿತ ಪರಸ್ಪರ ಒಪ್ಪಂದಕ್ಕೆ ಉಭಯ ಮಠದವರನ್ನು ಸಭೆಗೆ ಆಹ್ವಾನಿಸಿತ್ತು. ಸಭೆಯಲ್ಲಿ ಉಭಯ ಮಠದವರು ಒಮ್ಮತಕ್ಕೆ ಬಾರದ ಹಿನ್ನಲೆ ಅರ್ಜಿ ತಿರಸ್ಕಾರ ಮಾಡಲಾಗಿದೆ.
ಇದನ್ನೂ ಓದಿ:ಉತ್ತರಾದಿಮಠ VS ರಾಯರಮಠ: ನವವೃಂದಾವನ ಗಡ್ಡೆಯಲ್ಲಿ ಆರಾಧನೆಗೆ ಜಿಲ್ಲಾಡಳಿತ ನಿರ್ಬಂಧ
ಉಭಯ ಮಠಗಳಿಗೆ ಒಂದೇ ದಿನ ಪ್ರತ್ಯೇಕ ಆರಾಧನೆಗೆ ಅವಕಾಶ ನೀಡಿದರೆ ಕಾನೂನ ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಈ ಕುರಿತು ಅಹಿತಕರ ಘಟನೆಗಳು ನಡೆದಿದ್ದು, ಈ ನಿಟ್ಟಿನಲ್ಲಿ ಉಭಯ ಮಠಗಳ ಆರಾಧನೆ ಅರ್ಜಿಯನ್ನ ಗಂಗಾವತಿ ತಹಶೀಲ್ದಾರ್ ತಿರಸ್ಕಾರ ಮಾಡಿದ್ದಾರೆ. ಇನ್ನು ಈಗಾಗಲೇ ವೃಂದಾವನದ ಬಗ್ಗೆ ಎರಡು ಬಣಗಳು ಹೋರಾಟವನ್ನ ನಡೆಸುತ್ತಿದ್ದಾರೆ. ಮೊನ್ನೆಯಷ್ಟೆ ಕಲಬುರಗಿ, ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನಲೆ ಗಲಾಟೆ ಆಗುವ ಸಾಧ್ಯತೆ ಕಂಡುಬಂದಿದ್ದು, ತಾಲೂಕಾಡಳಿತ ಅನುಮತಿಗೆ ನಿರಾಕರಿಸಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:01 am, Thu, 29 June 23