ಮಳಖೇಡ ಜಯತೀರ್ಥರ ಮೂಲ ವೃಂದಾವನ ಎಲ್ಲಿದೆ ಎಂಬುದೂ ವಿವಾದದ ಕೇಂದ್ರವಾಯಿತು!
Malakheda Vrindavan Controversy: ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್ ದಲ್ಲಿ ಕಾಗಿಣಾ ನದಿ ದಡದಲ್ಲಿರುವುದೇ ಜಯತೀರ್ಥರ ಮೂಲ ವೃಂದಾವನ. ಆದ್ರೆ ಕೆಲವರು, ಆನೆಗುಂದಿಯಲ್ಲಿರುವ ರಘುವರ್ಯರ ವೃಂದಾವನವನ್ನು ಜಯತೀರ್ಥರ ವೃಂದಾವನ ಅಂತ ಸುಳ್ಳು ಹೇಳುತ್ತಿದ್ದಾರೆ- ಪ್ರತಿಭಟನಾಕಾರರ ವಾದ.
ಇತಿಹಾಸ ಪ್ರಸಿದ್ದ ಮಳಖೇಡದ ಜಯತೀರ್ಥರ ಮೂಲ ವೃಂದಾವನ ಎಲ್ಲಿದೆ ಅನ್ನೋದು ತೀರ್ವ ವಿವಾದ ಪಡೆದುಕೊಂಡಿದೆ. ಟೀಕಾಚಾರ್ಯರು ಅಂತಲೇ ಪ್ರಸಿದ್ದರಾಗಿದ್ದ ಜಯತೀರ್ಥರ ಮೂಲ ವೃಂದಾವನ (Vrindavan) ಕಲಬುರಗಿ ಜಿಲ್ಲೆಯ ಮಳಖೇಡ್ (Malakheda) ದಲ್ಲಿದೆ ಅನ್ನೋದು ಅನೇಕರ ನಂಬಿಕೆ. ಆದ್ರೆ ಇತ್ತೀಚೆಗೆ ಕೆಲವರು ಕೊಪ್ಪಳ ಜಿಲ್ಲೆಯ ಆನೆಗುಂದಿಯಲ್ಲಿದೆ (Anegundi) ಅಂತ ಹೇಳುತ್ತಿದ್ದಾರೆ. ಇದನ್ನು ಖಂಡಿಸಿ ಕಲಬುರಗಿ (Kalaburagi) ನಗರದಲ್ಲಿ ಬ್ರಾಹ್ಮಣ ಸಮಾಜದವರು ನಿನ್ನೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಹಾಡು ಹೇಳ್ತಿರೋ ಮಹಿಳೆಯರು. ಮ್ತತೊಂದಡೆ ಧಿಕ್ಕಾರದ ಘೋಷಣೆ, ಆಕ್ರೋಶದ ಮಾತುಗಳು. ಇಂತಹ ದೃಶ್ಯಗಳು ಕಂಡುಬಂದಿದ್ದು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ (Controversy).
ಹೌದು ಜಿಲ್ಲಾಧಿಕಾರಿ ಕಚೇರಿ ಮುಂದೆ ನೂರಾರು ಮಹಿಳೆಯರು, ಮಳಖೇಡಪುರ ವಾಸಿ – ಜಯತೀರ್ಥರು ಅಂತ ಹಾಡು ಹೇಳ್ತಿದ್ದರು. ಆ ಮೂಲಕ ಉತ್ತರಾಧಿಮಠ ಪರಂಪರೆಯ ಗುರುಗಳಾದ ಟಿಕಾಚಾರ್ಯರು ಅಂತಲೇ ಪ್ರಸಿದ್ದಿ ಪಡೆದಿದ್ದ ಜಯತೀರ್ಥರ ಮೂಲ ವೃಂದಾವನ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್ ದಲ್ಲಿದೆ ಅನ್ನೋದನ್ನು ಸಾರುತ್ತಿದ್ದರು.
ಹೌದು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ಜಯತೀರ್ಥರ ಭಕ್ತವೃಂದ ಪ್ರತಿಭಟನೆ ನಡೆಸಿತು. ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್ ದಲ್ಲಿ ಕಾಗಿಣಾ ನದಿ ದಡದಲ್ಲಿರುವದೇ ಜಯತೀರ್ಥರ ಮೂಲ ವೃಂದಾವನ. ಆದ್ರೆ ಕೆಲವರು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿರುವ ರಘುವರ್ಯರ ವೃಂದಾವನವನ್ನು ಜಯತೀರ್ಥರ ವೃಂದಾವನ ಅಂತ ಸುಳ್ಳು ಹೇಳುತ್ತಿದ್ದಾರೆ. ಈ ರೀತಿಯ ವದಂತಿಗಳನ್ನು ಹಬ್ಬಿಸುವದನ್ನು ಬಿಡಬೇಕು ಅಂತ ಆಗ್ರಹಿಸಿದ್ರು. ಕೂಡಲೇ ವದಂತಿ ಹಬ್ಬಿಸೋರ ವಿರುದ್ದ ಪೊಲೀಸರು ಮತ್ತು ಸರ್ಕಾರ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ರು.
ಇನ್ನು ಮಂತ್ರಾಲಯದ ರಾಘವೇಂದ್ರ ಸ್ವಾಮೀಗಳ, ಜಯತೀರ್ಥರ ಮೂಲ ವೃಂದಾವನ ಮಳಖೇಡ್ ದಲ್ಲಿರೋದು ಅಂತ ಹೇಳಿದ್ದಾರೆ. ಆದ್ರೆ ಇದೀಗ ಕೆಲವರು ಆನೆಂಗುದಿಯಲ್ಲಿರುವ ನವವೃಂದಾವನ ಗಡ್ಡೆಯಲ್ಲಿರುವ ರಘುವರ್ಯರ ವೃಂದಾವನಕ್ಕೆ ಜಯತೀರ್ಥರ ವೃಂದಾವನ ಅಂತ ಹೇಳುತ್ತಿರೋದನ್ನು ನಿಲ್ಲಿಸಬೇಕು ಅಂತ ಆಗ್ರಹಿಸಿದ್ರು.
ಇನ್ನು ಜಯತೀರ್ಥರ ಮೂಲ ವೃಂದಾವನ, ಮಳಖೇಡದಲ್ಲಿಯೇ ಇದೆ ಅನ್ನೋದಕ್ಕೆ ಐತಿಹಾಸಿಕ ಸಾಕ್ಷಿಗಳಿವೆ. ಅನೇಕ ವರ್ಷಗಳಿಂದ ಪ್ರತಿ ವರ್ಷ ಇಲ್ಲಿಯೇ ಜಯತೀರ್ಥರ ಆರಾಧನೆ ಕೂಡಾ ನಡೆಯುತ್ತದೆ. ಈ ವರ್ಷ ಕೂಡಾ ಜುಲೈ ಆರರಿಂದ ಮೂರು ದಿನಗಳ ಕಾಲ ಆರಾಧನೆ ನಡೆಯುತ್ತದೆ. ಆದ್ರೆ ಪ್ರತಿ ಬಾರಿ ಆರಾಧನೆಯ ಸಮಯದಲ್ಲಿ ಕೆಲವರು ಸುಳ್ಳು ಪ್ರಚಾರ ಆರಂಭಿಸುತ್ತಾರೆ ಅಂತ ಉತ್ತರಾಧಿ ಮಠದ ಭಕ್ತರು ಆರೋಪಿಸಿದ್ದಾರೆ.
ಸದ್ಯ ಜಯತೀರ್ಥರ ಮೂಲ ವೃಂದಾವನ ಮಳಖೇಡ್ ದಲ್ಲಿದೆ ಅಂತ ಕೆಲವರು ವಾದಿಸಿದರೆ, ಇನ್ನು ಕೆಲವರು, ನವವೃಂದಾವನ ಗಡ್ಡೆಯಲ್ಲಿದೆ ಅಂತ ಹೇಳುತ್ತಿದ್ದಾರೆ. ಆದ್ರೆ ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆದರೆ ಸತ್ಯಾಸತ್ಯತೆ ಗೊತ್ತಾಗಲಿದೆ.
ಕಲಬುರ್ಗಿ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ