AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಸರ್ಕಾರ ಬದಲಾದರೂ ಕಮೀಷನ್ ದಂಧೆ ಮಾತ್ರ ನಿಲ್ತಿಲ್ಲ, ಮುಖ್ಯಮಂತ್ರಿ ಆದೇಶಕ್ಕೂ ಕ್ಯಾರೇ ಇಲ್ಲ

ಕೊಪ್ಪಳ ನಗರಸಭೆ ನವೀಕರಣ ಹೆಸರಲ್ಲಿ ಕಿಕ್ ಬ್ಯಾಕ್ ಆರೋಪ! ಸದ್ಯ ಬಿಜೆಪಿ ಸರ್ಕಾರದಲ್ಲಿ ಮುನ್ನೆಲೆಗೆ ಬಂದಿದ್ದ ಕಮೀಷನ್ ಆರೋಪ, ಮತ್ತೊಮ್ಮೆ ಸದ್ದು ಮಾಡ್ತಿದೆ. ಕಾಮಗಾರಿ ನಿಲ್ಲಿಸಿ ಅಂತ ಯೋಜನಾ ನಿರ್ದೇಶಕರೇ ಪತ್ರ ಬರೆದರೂ, ಅದಕ್ಕೆ ಕ್ಯಾರೆ ಎನ್ನದಿರೋದು ಭ್ರಷ್ಟಾಚಾರದ ವಾಸನೆ ಹೆಚ್ಚಾಗುವಂತೆ ಮಾಡಿದೆ.

ರಾಜ್ಯದಲ್ಲಿ ಸರ್ಕಾರ ಬದಲಾದರೂ ಕಮೀಷನ್ ದಂಧೆ ಮಾತ್ರ ನಿಲ್ತಿಲ್ಲ, ಮುಖ್ಯಮಂತ್ರಿ ಆದೇಶಕ್ಕೂ ಕ್ಯಾರೇ ಇಲ್ಲ
ರಾಜ್ಯದಲ್ಲಿ ಸರ್ಕಾರ ಬದಲಾದರೂ ನಿಲ್ತಿಲ್ಲ, ಕಮೀಷನ್ ದಂಧೆ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: Jun 28, 2023 | 12:25 PM

Share

ರಾಜ್ಯದಲ್ಲಿ ಸರ್ಕಾರ ಬದಲಾದ್ರು ಕಮೀಷನ್ ದಂಧೆ ಮಾತ್ರ ನಿಲ್ತಿಲ್ಲ ಎನ್ನೋ ಆರೋಪ ಕೇಳಿ ಬಂದಿದೆ.‌ ಖುದ್ದು ಸಿಎಂ ಸಿದ್ದರಾಮಯ್ಯನವರೇ (siddaramaiah) ಹಳೇ ಕಾಮಗಾರಿಗಳನ್ನ ತಡೆಹಿಡಿಯುವಂತೆ ಸೂಚಿಸಿದ್ದರೂ ಇಲ್ಲಿ‌ಮಾತ್ರ ಮುಖ್ಯಮಂತ್ರಿಗಳ ಆದೇಶಕ್ಕೂ ಕ್ಯಾರೇ ಎನ್ತಿಲ್ಲ. ಹಾಗಿದ್ರೆ ಆ ಕಾಮಗಾರಿ ಏನು..? ಯಾಕ್ ಅಲ್ಲಿ ಕಮೀಷನ್ ಆರೋಪ ಕೇಳಿ ಬರ್ತಿದೆ ಎನ್ನೋದರ ವಿವರಣೆ ಇಲ್ಲಿದೆ ನೋಡಿ. ಹೌದು.‌ ಕೊಪ್ಪಳ ನಗರಸಭೆ ಕಚೇರಿಯ ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. ಈಗಾಗಲೇ ಅದಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನ ಪೌರಾಯುಕ್ತ ಹೆಚ್ ಎಂ ಭಜಕ್ಕನವರ್ ಖರೀದಿ ಮಾಡಿದ್ದಾರೆ. ಆದ್ರೆ ವಿಷ್ಯ ಏನಪ್ಪಾ ಅಂದ್ರೆ ನವೀಕರಣ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿದೆ ಎನ್ನೋ ಆರೋಪ ಕೇಳಿಬಂದಿದೆ. ಖುದ್ದು ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಎನ್ನೋರು ಕೊಪ್ಪಳ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ನಗರಸಭೆ ಕಚೇರಿ ನವೀಕರಣ (Koppal City Municipal Council) ಹೆಸರಲ್ಲಿ ಬರೋಬ್ಬರಿ 2 ಕೋಟಿ ವೆಚ್ಚದ ಕಾಮಗಾರಿ ಕೈಗೊಂಡಿದ್ದಾರೆ. ಅದೂ ನಗರಸಭೆ ಸದಸ್ಯರಿಗೆ ಮಾಹಿತಿ ನೀಡದೆ ಎನ್ನೋದು ವಿಪರ್ಯಾಸ. ಹೀಗಾಗೆ ಸದ್ಯ ಸೋಮಣ್ಣ ಹಳ್ಳಿ ಎನ್ನೋರು ಪೌರಾಯುಕ್ತ ವಿರುದ್ದ ಕಿಡಿಕಾರುತ್ತಿದ್ದು, ಸದಸ್ಯರಿಗೆ ಮಾಹಿತಿ ಇಲ್ಲದೇ ಕಾಮಗಾರಿ ಪರವಾನಿಗೆ ಪಡೆದ್ರು. ಮತ್ತು ನವೀಕರಣ (renovation) ಪ್ರಸ್ತಾನೆಯ ಠರಾವಿಗೆ‌ ನಾನು ಸಹಿಯೇ ಮಾಡಿಲ್ಲ ಅಂತ ಪತ್ರ ಬರೆದಿದ್ದಾರೆ.

ಸದ್ಯ ಯೋಜನಾ ನಿರ್ದೇಶಕಿ ಕಾವ್ಯರಾಣಿಯವರು ತಕ್ಷಣವೇ ಕಾಮಗಾರಿ ನಿಲ್ಲಿಸುವಂತೆ ಪೌರಾಯುಕ್ತರಿಗೆ ಪತ್ರ ಬರೆದ್ರು ಕ್ಯಾರೆ ಎನ್ನದೆ ಮತ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಅತ್ತ ರಾಜ್ಯದಲ್ಲಿ ಸಿದ್ದರಾಮರಯ್ಯ ನೈತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಳೇ ಕಾಮಗಾರಿಗಳನ್ನ ತಡೆಹಿಡಿದಿದೆ. ಆದ್ರೆ ಈ ಕಾಮಾಗಾರಿ ಮಾತ್ರ ನಿಂತಿಲ್ಲ. ಹೀಗಾಗಿ ನವೀಕರಣ ಹೆಸರಲ್ಲಿ ಕಮೀಷನ್ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಕೊಪ್ಪಳ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಆರೋಪಿಸುತ್ತಿದ್ದಾರೆ.

ಇನ್ನು ಕೊಪ್ಪಳದ ಮೂಲಭೂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಹೇಳಿದ್ರೆ, ಅನುದಾನ ಇಲ್ಲ ಎನ್ನೋ ಅಧಿಕಾರಿಗಳು ಅದ್ಹೇಗೆ ಇಷ್ಟೊಂದು ದೊಡ್ಡ ಮೊತ್ತದ ನವೀಕರಣ ಕಾಮಗಾರಿಗೆ ಅನಮೋದನೆ ಪಡೆದುಕೊಂಡರು ಅನ್ನೋ‌ ಅನುಮಾನ ಹುಟ್ಟಿಕೊಂಡಿದೆ. ಅಲ್ದೆ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಲ್ಲಿ ಇರೋವಾಗಲೇ ಇದಕ್ಕೆ ಅನುಮತಿ ಪಡೆದಿದ್ದಾರೆ ಎನ್ನೋ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಯಾಕಂದ್ರೆ ಖುದ್ದು ಪೌರಾಯುಕ್ತರೇ ಆಸಕ್ತಿ ವಹಿಸಿ, ನವಿಕರಣ ಮಾಡ್ತಿದ್ದಾರೆ.

ಅಲ್ಲದೇ ತಮಗೆ ಪರಿಚಯವಿರೋ ಹಾವೇರಿ ಮೂಲದ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದಾರಂತೆ. ಅವ್ರಿಂದ ಕೆಲ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಕಿಕ್ ಬ್ಯಾಕ್ ನೀಡಲಾಗಿದೆ ಎನ್ನೋ ಆರೋಪ ಕೇಳಿ ಬರ್ತಿದೆ. ಇನ್ನು ಇದೆಕ್ಕೆಲ್ಲಾ ಉತ್ತರಿಸಬೇಕಾದ ಪೌರಾಯುಕ್ತರು ಸದ್ಯ ರಜೆ ಮೇಲೆ ಇರೋದು ಅನುಮಾನಕ್ಕೆ ಪುಷ್ಟಿ ನೀಡುವಂತಾಗಿದೆ.

ಸದ್ಯ ಬಿಜೆಪಿ ಸರ್ಕಾರದಲ್ಲಿ ಮುನ್ನೆಲೆಗೆ ಬಂದಿದ್ದ ಕಮೀಷನ್ ಆರೋಪ, ಮತ್ತೊಮ್ಮೆ ಸದ್ದು ಮಾಡ್ತಿದೆ. ಕಾಮಗಾರಿ ನಿಲ್ಲಿಸಿ ಅಂತ ಯೋಜನಾ ನಿರ್ದೇಶಕರೇ ಪತ್ರ ಬರೆದರೂ, ಅದಕ್ಕೆ ಕ್ಯಾರೆ ಎನ್ನದಿರೋದು ಭ್ರಷ್ಟಾಚಾರದ ವಾಸನೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಅದೇನೇ ಇರಲಿ ಇನ್ನಾದ್ರು ಸರ್ಕಾರ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳಯಬೇಕಿದೆ.

ಕೊಪ್ಪಳ ಜಿಲ್ಲ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ