AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppala News: ಮತ್ತೆ ಮುನ್ನಲೆಗೆ ಬಂದ‌ ನವವೃಂದಾವನ ಗಡ್ಡೆ ಪೂಜೆ ವಿವಾದ; ಉಭಯ ಮಠಗಳ ಆರಾಧನೆ ಅರ್ಜಿ ತಿರಸ್ಕರಿಸಿದ ಗಂಗಾವತಿ ತಹಶೀಲ್ದಾರ್

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನ ಗಡ್ಡೆಯಲ್ಲಿ ಪೂಜೆ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಉಭಯ ಮಠಗಳು ಪೂಜೆಗೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನ ತಹಶೀಲ್ದಾರ್ ತಿರಸ್ಕರಿಸಿದ್ದಾರೆ.

Koppala News: ಮತ್ತೆ ಮುನ್ನಲೆಗೆ ಬಂದ‌ ನವವೃಂದಾವನ ಗಡ್ಡೆ ಪೂಜೆ ವಿವಾದ; ಉಭಯ ಮಠಗಳ ಆರಾಧನೆ ಅರ್ಜಿ ತಿರಸ್ಕರಿಸಿದ ಗಂಗಾವತಿ ತಹಶೀಲ್ದಾರ್
ಪ್ರಾತಿನಿಧಿಕ ಚಿತ್ರ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Jun 29, 2023 | 10:01 AM

Share

ಕೊಪ್ಪಳ: ಜಿಲ್ಲೆಯ ಗಂಗಾವತಿ(Gangavathi) ತಾಲೂಕಿನ ಆನೆಗೊಂದಿಯಲ್ಲಿರುವ ನವ ವೃಂದಾವನ ಗಡ್ಡೆಯಲ್ಲಿ ಪೂಜೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ರಾಘವೇಂದ್ರ ಮಠದವರು ಜಯತೀರ್ಥರ ಆರಾಧನೆಗೆ ಹಾಗೂ ಉತ್ತರಾಧಿಮಠದವರು ರಘುವರ್ಯ ತೀರ್ಥರ ಮಹಿಮೋತ್ಸಕ್ಕೆ ಅವಕಾಶ ಕೇಳಿದ್ದು, ಇಬ್ಬರು ಏಕಕಾಲದಲ್ಲಿ ಜುಲೈ 6 ರಿಂದ 8 ರವರೆಗೆ ನವವೃಂದಾವನ ಗಡ್ಡೆಯಲ್ಲಿ ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆ ಇದಕ್ಕೆ ಅನುಮತಿ ನೀಡುವಂತೆ ಗಂಗಾವತಿ ತಹಶೀಲ್ದಾರ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಎರಡೂ ಕಡೆಯ ಪೂಜಾ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ.

ಸಭೆಗೆ ಆಹ್ವಾನಿಸಿದ್ದ ತಾಲೂಕ‌ ಆಡಳಿತ

ಇನ್ನು ಇಬ್ಬರು ಒಂದೇ ದಿನಾಂಕದಂದು ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿ, ರಾಘವೇಂದ್ರ ಮಠದವರು ಹಾಗೂ ಉತ್ತರಾಧಿ ಮಠದಿಂದ ಆರಾಧನೆಗೆ ಆಚರಣೆಗೆ ಅನುಮತಿ ಕೋರಿ ಪ್ರತ್ಯೇಕ ಆರ್ಜಿ ನೀಡಲಾಗಿತ್ತು. ಈ ಹಿನ್ನಲೆ ತಾಲೂಕ‌ ಆಡಳಿತ ಪರಸ್ಪರ ಒಪ್ಪಂದಕ್ಕೆ ಉಭಯ ಮಠದವರನ್ನು ಸಭೆಗೆ ಆಹ್ವಾನಿಸಿತ್ತು. ಸಭೆಯಲ್ಲಿ‌ ಉಭಯ ಮಠದವರು ಒಮ್ಮತಕ್ಕೆ ಬಾರದ ಹಿನ್ನಲೆ ಅರ್ಜಿ ತಿರಸ್ಕಾರ ಮಾಡಲಾಗಿದೆ.

ಇದನ್ನೂ ಓದಿ:ಉತ್ತರಾದಿಮಠ VS ರಾಯರಮಠ: ನವವೃಂದಾವನ ಗಡ್ಡೆಯಲ್ಲಿ ಆರಾಧನೆಗೆ ಜಿಲ್ಲಾಡಳಿತ ನಿರ್ಬಂಧ

ಕಾನೂನ ಸುವ್ಯವಸ್ಥೆ ಹದಗೆಡುವ ಸಾಧ್ಯತೆ

ಉಭಯ ಮಠಗಳಿಗೆ ಒಂದೇ ದಿನ ಪ್ರತ್ಯೇಕ ಆರಾಧನೆಗೆ ಅವಕಾಶ ‌ನೀಡಿದರೆ ಕಾನೂನ ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದೆ. ಈ ಹಿಂದೆ ಕೂಡ ಈ ಕುರಿತು ಅಹಿತಕರ ಘಟನೆಗಳು ನಡೆದಿದ್ದು, ಈ ನಿಟ್ಟಿನಲ್ಲಿ ಉಭಯ ಮಠಗಳ ಆರಾಧನೆ ಅರ್ಜಿಯನ್ನ ಗಂಗಾವತಿ ತಹಶೀಲ್ದಾರ್ ತಿರಸ್ಕಾರ ಮಾಡಿದ್ದಾರೆ. ಇನ್ನು ಈಗಾಗಲೇ ವೃಂದಾವನದ ಬಗ್ಗೆ ಎರಡು ಬಣಗಳು ಹೋರಾಟವನ್ನ ನಡೆಸುತ್ತಿದ್ದಾರೆ. ಮೊನ್ನೆಯಷ್ಟೆ ಕಲಬುರಗಿ, ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನಲೆ‌ ಗಲಾಟೆ ಆಗುವ ಸಾಧ್ಯತೆ ಕಂಡುಬಂದಿದ್ದು, ತಾಲೂಕಾಡಳಿತ ಅನುಮತಿ‌ಗೆ ನಿರಾಕರಿಸಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:01 am, Thu, 29 June 23

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!