ಟಿವಿ9ನಲ್ಲಿ ವರದಿ ಫಲಶ್ರುತಿ: ಕೊಪ್ಪಳದ ಪಂಪಾ ಸರೋವರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ತಂತಿ​ಗಳ ತೆರವು

| Updated By: Rakesh Nayak Manchi

Updated on: Dec 15, 2023 | 7:23 AM

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಇರುವ ಐತಿಹಾಸಿಕ ಸ್ಥಳಗಳ ಪೈಕಿ ಪಂಪಾ ಸರೋವರ ಕೂಡ ಒಂದು. ಇಲ್ಲಿಗೆ ಸಾವಿರಾರು ಜನರು ಆಗಮಿಸುತ್ತಾರೆ. ಇಂತಹ ಪ್ರವಾಸಿ ತಾಣದಲ್ಲಿ ವಿದ್ಯುತ್ ತಂತಿಗಳು ಎಲ್ಲೆಂದರಲ್ಲಿ ಬಿದಿದ್ದವು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ವಿದ್ಯುತ್ ವೈರ್​ಗಳನ್ನು ತೆರವುಗೊಳಿಸಿದ್ದಾರೆ.

ಟಿವಿ9ನಲ್ಲಿ ವರದಿ ಫಲಶ್ರುತಿ: ಕೊಪ್ಪಳದ ಪಂಪಾ ಸರೋವರದಲ್ಲಿ ಎಲ್ಲೆಂದರಲ್ಲಿ ಬಿದ್ದಿದ್ದ ತಂತಿ​ಗಳ ತೆರವು
ಪಂಪಾ ಸರೋವರದಲ್ಲಿ ಬಿದ್ದಿದ್ದ ಹಾಗೂ ನೇತಾಡುತ್ತಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲಾಗಿದೆ
Follow us on

ಕೊಪ್ಪಳ, ಡಿ.15: ಜಿಲ್ಲೆಯ (Koppal) ಗಂಗಾವತಿ ತಾಲೂಕಿನಲ್ಲಿ ಇರುವ ಐತಿಹಾಸಿಕ ಪಂಪಾ ಸರೋವರದಲ್ಲಿ (Pampa Lake) ಎಲ್ಲೆಂದರಲ್ಲಿ ಬಿದ್ದಿದ್ದ ವಿದ್ಯುತ್ ತಂತಿಗಳನ್ನು ತೆರವು ಮಾಡಲಾಗಿದೆ. ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಮುಜರಾಯಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಎಲ್ಲೆಂದರಲ್ಲಿ ಬಿದ್ದಿದ್ದ ವೈಯರ್​​ಗಳನ್ನು ತೆರವುಗೊಳಿಸಿದ್ದಾರೆ. ಕೆಲವು ತಂತಿ​ಗಳನ್ನು ಗುಂಡಿ ತೆಗೆದು ಮುಚ್ಚಿ ಹಾಕಿಸಿದ್ದಾರೆ.

ಹನುಮ ಹುಟ್ಟಿದ ಸ್ಥಳ‌ ಅಂಜನಾದ್ರಿ ಮತ್ತು ರಾಮನಿಗಾಗಿ ಕಾದಿದ್ದ ಶಬರಿಯ ಗುಹೆಯ ಸಮೀಪ ಇರುವ ಪಂಪಾ ಸರೋವರ ಸುತ್ತಮುತ್ತ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಹೈಮಾಸ್ಕ್ ದೀಪ ಸೇರಿದಂತೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಬೇಕಾಬಿಟ್ಟಿಯಾಗಿ ವಿದ್ಯುತ್ ವೈಯರ್​ಗಳನ್ನು ಹಾಕಲಾಗಿತ್ತು. ಅನೇಕ ಕಡೆ ಕಲ್ಲುಗಳನ್ನು ಇಟ್ಟು ವಿದ್ಯುತ್ ಸಂಪರ್ಕ ಇರುವ ವೈಯರ್​ಗಳನ್ನು ಬಿಡಲಾಗಿತ್ತು.

ಇದನ್ನೂ ಓದಿ: ವಿದ್ಯುತ್​ ತಂತಿ ತುಳಿದು ತಾಯಿ-ಮಗು ಸಾವು: ಜನರ ಕಣ್ಣಿಗೆ ಮಂಕು ಬೂದಿ ಎರಚಿತೆ ಬೆಸ್ಕಾಂ? ಲೋಕಾಯುಕ್ತ ತನಿಖೆಯಲ್ಲಿ ಸತ್ಯಾಂಶ ಬಯಲು

ಪ್ರತಿನಿತ್ಯ ಪಂಪಾ ಸರೋವರಕ್ಕೆ ಸಾವಿರಾರು ಜನ ಬರುತ್ತಾರೆ. ಯಾರಾದರು ವಿದ್ಯುತ್ ತಂತಿಗಳನ್ನು ಗಮನಿಸದೇ ಕಾಲಿಟ್ಟರೆ ಅಪಾಯ ಗ್ಯಾರಂಟಿ ಎಂಬಂತಿತ್ತು. ಒಂದಷ್ಟು ವಿದ್ಯುತ್ ವೈಯರ್​ಗಳು ಕೈಗೆಟಕುವಂತಿತ್ತು. ಕೆಲವೆಡೆ ವೈಯರ್ ಕಟ್ ಆಗಿದ್ದವು. ಇದರ ಯಾರಾದರು ಕಾಲಿಟ್ಟರೇ ಜೀವಕ್ಕೆ ಗ್ಯಾರಂಟಿ ಇಲ್ಲ ಎಂಬಂತಿತ್ತು.

ದೇಶದಲ್ಲಿರುವ ಐದು ಪುಣ್ಯ ಸ್ಥಳಗಳ ಪೈಕಿ ಒಂದಾಗಿರುವ ಪಂಪಾ ಸರೋವರವು ಪುರಾಣ ಪ್ರಸಿದ್ಧಿ ಹೊಂದಿದೆ. ಈ ಸರೋವರದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಮುಜರಾಯಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಮತ್ತು ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಭಕ್ತರ ಜೀವಕ್ಕೆ ಅಪಾಯ ಎದುರಾಗಿತ್ತು.

ಈ ಬಗ್ಗೆ ಸಾರ್ವಜನಿಕರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ, ಜೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿರಲಿಲ್ಲ. ವೈಯರ್ ಕಟ್ ಆಗಿರುವ ಕಡೆ ಕಾಲಿಟ್ಟರೇ ಜೀವ ಹೋಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಆತಂಕ ಹೊರ ಹಾಕಿದ್ದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗಂಗಾವತಿ ತಹಶೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:22 am, Fri, 15 December 23