ಪಂಪಾ ಸರೋವರಕ್ಕೆ ಬರುವ ಪ್ರವಾಸಿಗರೇ ಎಚ್ಚರ! ಜೆಸ್ಕಾಂ ನಿರ್ಲಕ್ಷ್ಯಕ್ಕೇ ಬಾಯ್ ತೆರೆದು ಕಾಯುತ್ತಿವೆ ಅಪಾಯಕಾರಿ ವಿದ್ಯುತ್ ವೈಯರ್ಗಳು
ಪಂಪಾ ಸರೋವರ ಸುತ್ತಮುತ್ತ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಹೈಮಾಸ್ಕ್ ದೀಪ ಸೇರಿದಂತೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಬೇಕಾಬಿಟ್ಟಿಯಾಗಿ ವಿದ್ಯುತ್ ವೈಯರ್ಗಳನ್ನು ಹಾಕಲಾಗಿದೆ. ಅನೇಕ ಕಡೆ ಕಲ್ಲುಗಳನ್ನು ಇಟ್ಟು ವಿದ್ಯುತ್ ಸಂಪರ್ಕ ಇರುವ ವೈಯರ್ಗಳನ್ನು ಬಿಡಲಾಗಿದೆ. ಯಾರಾದ್ರು ವಿದ್ಯುತ್ ತಂತಿಗಳನ್ನು ಗಮನಿಸದೇ ಹೋದ್ರೆ ಅಪಾಯ ಗ್ಯಾರಂಟಿ.
ಕೊಪ್ಪಳ, ಡಿ.14: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಅಂಜನಾದ್ರಿ ಬೆಟ್ಟ (Anjanadri Betta), ಪಂಪಾ ಸರೋವರಕ್ಕೆ (Pampa Sarovar) ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಹನುಮ ಹುಟ್ಟಿದ ಸ್ಥಳ ಅಂಜನಾದ್ರಿ, ಮತ್ತು ರಾಮನಿಗಾಗಿ ಕಾದಿದ್ದ ಶಬರಿಯ ಗುಹೆಯ ಸಮೀಪ ಪಂಪಾ ಸರೋವರವಿದೆ. ಹೀಗಾಗಿ ದೇಶದ ವಿವಿಧ ಭಾಗಗಳಿಂದ ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಆದರೆ ಪಂಪಾ ಸರೋವರಕ್ಕೆ ಬರುವ ಭಕ್ತರ ಜೀವಕ್ಕೆ ಗ್ಯಾರಂಟಿ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಅಪಾಯಕಾರಿ ವಿದ್ಯುತ್ ವೈಯರ್ಗಳು ಎಲ್ಲೆಂದರಲ್ಲಿ ಬಿದ್ದಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಪಂಪಾ ಸರೋವರ ಸುತ್ತಮುತ್ತ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಹೈಮಾಸ್ಕ್ ದೀಪ ಸೇರಿದಂತೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಬೇಕಾಬಿಟ್ಟಿಯಾಗಿ ವಿದ್ಯುತ್ ವೈಯರ್ಗಳನ್ನು ಹಾಕಲಾಗಿದೆ. ಅನೇಕ ಕಡೆ ಕಲ್ಲುಗಳನ್ನು ಇಟ್ಟು ವಿದ್ಯುತ್ ಸಂಪರ್ಕ ಇರುವ ವೈಯರ್ಗಳನ್ನು ಬಿಡಲಾಗಿದೆ. ಪ್ರತಿನಿತ್ಯ ಇಲ್ಲಿ ಸಾವಿರಾರು ಜನ ಬರ್ತಾರೆ. ಯಾರಾದ್ರು ವಿದ್ಯುತ್ ತಂತಿಗಳನ್ನು ಗಮನಿಸದೇ ಹೋದ್ರೆ ಅಪಾಯ ಗ್ಯಾರಂಟಿ ಎಂಬ ಸ್ಥಿತಿಯಿದೆ. ಇನ್ನು ವಿದ್ಯುತ್ ವೈಯರ್ ಗಳು ಕೈ ಸಿಗುವಂತಿವೆ. ನಡೆದುಕೊಂಡು ಹೋಗುವಾಗ ಕಾಲಿಗೆ ತಾಕುತ್ತಿವೆ. ಕೆಲವೆಡೆ ವೈಯರ್ ಕಟ್ ಆಗಿದ್ದರಿಂದ ಅಲ್ಲಿ ಯಾರಾದ್ರು ಗಮನಿಸದೇ ಕಾಲಿಟ್ಟರೇ, ಮಕ್ಕಳು ಮುಟ್ಟಿದ್ರೆ ಜೀವ ಹೋಗೋದು ಗ್ಯಾರಂಟಿ.
ಇದನ್ನೂ ಓದಿ: ಡಿಸೆಂಬರ್ 22ರಿಂದ 27ರವರೆಗೆ ಚಿಕ್ಕಮಗಳೂರಿನ ಈ ಪ್ರವಾಸಿ ತಾಣಗಳಿಗೆ ನಿರ್ಬಂಧ
ಪಂಪಾ ಸರೋವರ ಪುರಾಣ ಪ್ರಸಿದ್ದಿಯನ್ನು ಹೊಂದಿದೆ. ದೇಶದಲ್ಲಿ ಐದು ಪುಣ್ಯ ಸರೋವರಗಳಿದ್ದು ಅದರಲ್ಲಿ ಪಂಪಾ ಸರೋವರ ಕೂಡಾ ಒಂದು. ಪಂಪಾ ಸರೋವರದಲ್ಲಿ ಸ್ನಾನ ಮಾಡಿದರೆ ಪುಣ್ಯ ಬರುತ್ತದೆ ಅನ್ನೋ ನಂಬಿಕೆ ಇದೆ. ಇದೇ ಕಾರಣಕ್ಕೆ ಹೆಚ್ಚಿನ ಭಕ್ತರು, ಪ್ರವಾಸಿಗರು ಬರುತ್ತಾರೆ. ಆದ್ರೆ ಮುಜರಾಯಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ಮತ್ತು ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಾಗಿ ಭಕ್ತರ ಜೀವಕ್ಕೆ ಅಪಾಯ ಎದುರಾಗಿದೆ.
ಈ ಬಗ್ಗೆ ಸಾರ್ವಜನಿಕರು ಮುಜರಾಯಿ ಇಲಾಖೆ ಅಧಿಕಾರಿಗಳಿಗೆ, ಜೆಸ್ಕಾಂ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಅನೇಕರು ಬಂದು ಇದೇ ವಿದ್ಯುತ್ ವೈಯರ್ ಗಳನ್ನು ತುಳಿದುಕೊಂಡೇ ಅಡ್ಡಾಡುತ್ತಿದ್ದಾರೆ. ವೈಯರ್ ಕಟ್ ಆಗಿರುವ ಕಡೆ ಕಾಲಿಟ್ಟರೇ ಜೀವ ಹೋಗುತ್ತೆ ಎಂದು ಸ್ಥಳೀಯ ನಿವಾಸಿ ಮಾರುತಿ ಆತಂಕ ಹೊರ ಹಾಕಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಗಂಗಾವತಿ ತಹಶೀಲ್ದಾರ್ ವಿಶ್ವನಾಥ ಮುರುಡಿ ತಿಳಿಸಿದ್ದಾರೆ.
ಕೊಪ್ಪಳಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ