ಪಿಎಸ್​ಐ ನೇಮಕಾತಿ ಪ್ರಕರಣ: ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದ ಶಾಸಕ ಬಸವರಾಜ ದಡೇಸಗೂರು

ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ನಗರದಲ್ಲಿ ಹೇಳಿಕೆ ನೀಡಿದರು. ಪ್ರಕರಣದ ಕುರಿತು ಮಧ್ಯಸ್ತಿಕೆ ವಹಿಸಲು ನನ್ನೊಂದಿಗೆ ಮಾತನಾಡಿದರು.

ಪಿಎಸ್​ಐ ನೇಮಕಾತಿ ಪ್ರಕರಣ: ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದ ಶಾಸಕ ಬಸವರಾಜ ದಡೇಸಗೂರು
ಕನಕಗಿರಿ ಶಾಸಕ ಬಸವರಾಜ ದಡೇಸಗೂರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Sep 05, 2022 | 1:17 PM

ಕೊಪ್ಪಳ: ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಕನಕಗಿರಿ ಶಾಸಕ ಬಸವರಾಜ ದಡೇಸಗೂರು ನಗರದಲ್ಲಿ ಹೇಳಿಕೆ ನೀಡಿದರು. ಪ್ರಕರಣದ ಕುರಿತು ಮಧ್ಯಸ್ತಿಕೆ ವಹಿಸಲು ನನ್ನೊಂದಿಗೆ ಮಾತನಾಡಿದರು. ನಾನು ಈ ಕುರಿತು ಬಗೆಹರಿಸುತ್ತೇನೆ ಎಂದು ಹೇಳಿದ್ದೆ. ನಾನು ಹಿರಿಯನಾಗಿ ಮಾತನಾಡಿದ್ದೇನೆ. ಇದರಲ್ಲಿ ನಾನು ದುಡ್ಡು ತೆಗೆದುಕೊಂಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಯಾರೋ ರೆಕಾರ್ಡ್ ಮಾಡಿ ಬಿಟ್ಟಿದ್ದಾರೆ. ನಾನು ಸರಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದು ಹೇಳಿಲ್ಲ ಎಂದು ಸಂಪೂರ್ಣವಾದ ಮಾಹಿತಿ ನೀಡದೆ ಶಾಸಕ ಬಸವರಾಜ ದಡೇಸಗೂರು ಹೋದರು.

ಶಾಸಕ ಬಸವರಾಜ ದಡೇಸಗೂರು ಬಂಧಿಸಬೇಕು: ಶಿವರಾಜ ತಂಗಡಗಿ

ಈ ಕುರಿತಾಗಿ ಮಾಜಿ ಸಚಿವ ಶಿವರಾಜ ತಂಗಡಗಿ ನಗರದಲ್ಲಿ ಹೇಳಿಕೆ ನೀಡಿದ್ದು, ಪ್ರಕರಣದ ಹಿನ್ನಲೆಯಲ್ಲಿ ಶಾಸಕ ಬಸವರಾಜ ದಡೇಸಗೂರು ಬಂಧಿಸಬೇಕು. ನೇರವಾಗಿ ಸರಕಾರಕ್ಕೆ ಹಣ ನೀಡಿದ್ದಾಗಿ ಹೇಳಿದ್ದಾರೆ. ಈ ಪ್ರಕರಣದಲ್ಲಿ ಅವರನ್ನು ಬಂಧಿಸದಿದ್ದರೆ ಕಾಂಗ್ರೆಸ್ ಪಕ್ಷದಿಂದ ಹೋರಾಟ ಮಾಡುತ್ತೇವೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಲಾಗುವುದು. ಶಾಸಕರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಕಿಂಗ್ ಪಿನ್ ಸಂಬಂಧಿ ಅರೆಸ್ಟ್

ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧ ಕಲ್ಯಾಣ ಕರ್ನಾಟಕ ಕೋಟಾದಡಿ 22ನೇ ರ್ಯಾಂಕ್ ಪಡೆದಿದ್ದ ಸಿದ್ದು ಎಂಬಾತನನ್ನು ಕಲಬುರ್ಗಿಯ ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಅರೆಸ್ಟ್ ಆಗಿರುವ ಅಭ್ಯರ್ಥಿ ಸಿದ್ದಗೌಡ ಯಾದಗಿರಿ ತಾಲೂಕಿನ ಮುದ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಫ್​ಡಿಎ ಆಗಿ ಕೆಲಸ ಮಾಡ್ತಾಯಿದ್ದ‌.

22ನೇ Rank ಪಡೆದಿದ್ದ ಸಿದ್ದಗೌಡ ಇದಕ್ಕೂ ಮೊದಲು ಎರಡು ಬಾರಿ ಸಿಐಡಿ ವಿಚಾರಣೆಗೆ ಹಾಜರಾಗಿದ್ದ. ವಿಚಾಣೆಗೆಂದು ಕರೆದುಕೊಂಡು ಬಂದು ಅರೆಸ್ಟ್ ಮಾಡಲಾಗಿದೆ. ಸಿದ್ದುಗೌಡ ಅಭ್ಯರ್ಥಿ ಹಾಗೂ ಮದ್ಯವರ್ತಿಯೂ ಆಗಿದ್ದ. ಬಂಧಿತ ಸಿದ್ದು, ಹಗರಣದ ಕಿಂಗ್ ಪಿನ್ ಆರ್.ಡಿ. ಪಾಟೀಲ್ ಸಂಬಂಧಿ ಎಂಬುದು ಗಮನಾರ್ಹ. ಹಗರಣ ಬಯಲಾಗುತ್ತಿದ್ದ ಹಾಗೆಯೇ ಜೂನ್ 4 ರಿಂದ 19 ರ ವರೆಗೆ ಅನಾರೋಗ್ಯದ ನೆಪವೊಡ್ಡಿ ಸಿದ್ದು ರಜೆಯಲ್ಲಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:58 pm, Mon, 5 September 22