ಕೊಪ್ಪಳ: ಒಂದು ವಾರದಿಂದ ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಾಹಿಗಳನ್ನು ಎನ್ಡಿಆರ್ಎಫ್ (NDRF) ತಂಡ ರಕ್ಷಣೆ ಮಾಡಿರುವಂತಹ ಘಟನೆ ಜಿಲ್ಲೆಯ ಗಂಗಾವತಿಯ ದೇವಘಾಟ ಗ್ರಾಮದಲ್ಲಿ ನಡೆದಿದೆ. ಇಬ್ಬರು ಕುರಿಗಾಹಿಗಳು, 120 ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ. ತುಂಗಭದ್ರಾ ನದಿ ಪ್ರವಾಹಕ್ಕೆ ದೇವಘಾಟ ಬಳಿ ನಡುಗಡ್ಡೆ ಉಂಟಾಗಿದ್ದು, ನಿನ್ನೆ ಅಗ್ನಿಶಾಮಕದಳ ದವರಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತವಾಗಿತ್ತು. ಇಂದು ವಿಜಯವಾಡದಿಂದ ಎನ್ಡಿಆರ್ಎಫ್ ತಂಡ ಆಗಮಿಸಿದ್ದು, ಇಬ್ಬರು ಕುರಿಗಾಹಿಗಳು,120 ಕುರಿಗಳ ರಕ್ಷಣೆಗೆ ತಂಡ ಮುಂದಾಗಿದೆ. ಇನ್ನೂ ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ್ದು, ಗ್ರಾಮಗಳಲ್ಲಿ ಜಮೀನುಗಳು ಜಲಾವೃತವಾಗಿವೆ.
ಜಮಾಪುರ, ಮುಸ್ಟೂರು, ನಂದಿಹಳ್ಳಿ, ಬೆನ್ನೂರು, ಕಕ್ಕರಗೋಳ, ಉಳೇನೂರು ಗ್ರಾಮದಲ್ಲಿ ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ನದಿ ನೀರು ನುಗ್ಗಿ ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಬೆನ್ನೂರಿನ ಐತಿಹಾಸಿಕ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಸಿದರು.
ನಡುಗಡ್ಡೆಯಲ್ಲಿ ಸಿಲುಕಿದ ರೈತರು:
ಭತ್ತ ನಾಟಿ ಮಾಡಲು ಹೋದ ರೈತರು ನಡುಗಡ್ಡೆಯೊಂದರಲ್ಲಿ ಸಿಲುಕಿಕೊಂಡ ಘಟನೆ ಕೊಪ್ಪಳ ಶಿವಪುರ (Shivapur) ಗ್ರಾಮ ಬಳಿ ನಡೆದಿದೆ. ಅವರನ್ನು ರಕ್ಷಿಸಿ ಸುರಕ್ಷಿತವಾಗಿ ವಾಪಸ್ಸು ಕರೆತರಲು ಕೊಪ್ಪಳ ತಾಲ್ಲೂಕಿನ ತಹಸಿಲ್ದಾರ್ (Tahsildar) ವಿಟ್ಠಲ್ ಚೌಗುಲೆ (Vithal Chougle) ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಹೋಗಿದ್ದು ವಿಶೇಷ. ಸೋಜಿಗದ ಸಂಗತಿಯೆಂದರೆ ಬೋಟ್ ನಲ್ಲಿ ಊರಿನ ಕಡೆ ಬರಲು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ರೈತರು ನಿರಾಕರಿಸಿದ್ದು. ತಹಸೀಲ್ದಾರರೇ ಅವರ ಮನವೊಲಿಸಿ ಕರೆತಂದರೆಂದು ಹೇಳಲಾಗಿದೆ.
ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:53 am, Fri, 12 August 22