ನಡುಗಡ್ಡೆಯಲ್ಲಿ ಸಿಲುಕಿದ ರೈತರನ್ನು ಕರೆತರಲು ಕೊಪ್ಪಳದ ತಹಸೀಲ್ದಾರರೇ ಅಗ್ನಿಶಾಮಕ ದಳ ಸಿಬ್ಬಂದಿ ಜೊತೆ ಬೋಟಲ್ಲಿ ಹೋದರು!
ಸೋಜಿಗದ ಸಂಗತಿಯೆಂದರೆ ಬೋಟ್ ನಲ್ಲಿ ಊರಿನ ಕಡೆ ಬರಲು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ರೈತರು ನಿರಾಕರಿಸಿದ್ದು. ತಹಸೀಲ್ದಾರರೇ ಅವರ ಮನವೊಲಿಸಿ ಕರೆತಂದರೆಂದು ಹೇಳಲಾಗಿದೆ.
ಕೊಪ್ಪಳ: ಭತ್ತ ನಾಟಿ ಮಾಡಲು ಹೋದ ರೈತರು ನಡುಗಡ್ಡೆಯೊಂದರಲ್ಲಿ ಸಿಲುಕಿಕೊಂಡ ಘಟನೆ ಕೊಪ್ಪಳ ಶಿವಪುರ (Shivapur) ಗ್ರಾಮ ಬಳಿ ನಡೆದಿದೆ. ಅವರನ್ನು ರಕ್ಷಿಸಿ ಸುರಕ್ಷಿತವಾಗಿ ವಾಪಸ್ಸು ಕರೆತರಲು ಕೊಪ್ಪಳ ತಾಲ್ಲೂಕಿನ ತಹಸಿಲ್ದಾರ್ (Tahsildar) ವಿಟ್ಠಲ್ ಚೌಗುಲೆ (Vithal Chougle) ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಹೋಗಿದ್ದು ವಿಶೇಷ. ಸೋಜಿಗದ ಸಂಗತಿಯೆಂದರೆ ಬೋಟ್ ನಲ್ಲಿ ಊರಿನ ಕಡೆ ಬರಲು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ರೈತರು ನಿರಾಕರಿಸಿದ್ದು. ತಹಸೀಲ್ದಾರರೇ ಅವರ ಮನವೊಲಿಸಿ ಕರೆತಂದರೆಂದು ಹೇಳಲಾಗಿದೆ.
Latest Videos