AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vehicle insurance: ಕಾರು ಇನ್ಸೂರೆನ್ಸ್ ಹಣಕ್ಕಾಗಿ ಹೀಗೂ ಕಳ್ಳಾಟ ಆಡ್ತಾರಾ!?

ಕಾರು ಕಳ್ಳತನದ ದೂರು ದಾಖಲಿಸಿಕೊಂಡು ಮರಿಯಮ್ಮನಹಳ್ಳಿ ಪೊಲೀಸರು ತನಿಖೆಗೆ ಇಳಿದಿದ್ದರು. ಇನ್ನೋವಾ ಕಾರು ಕೊಪ್ಪಳದ ಹಿರೇಖೇಡ್ ಗ್ರಾಮದಲ್ಲಿ ಪತ್ತೆಯಾಗಿತ್ತು. ಸುಳ್ಳು ದೂರು‌ ನೀಡಿ ಇನ್ಸೂರೆನ್ಸ್ ಹಣ ಕ್ಲೇಮ್ ಮಾಡಲು ಒಟ್ಟು‌ 3 ಆರೋಪಿಗಳು ಮುಂದಾಗಿದ್ದರು.

Vehicle insurance: ಕಾರು ಇನ್ಸೂರೆನ್ಸ್ ಹಣಕ್ಕಾಗಿ ಹೀಗೂ ಕಳ್ಳಾಟ ಆಡ್ತಾರಾ!?
ಕಾರು ಕಳ್ಳತನ‌‌ದ ನಾಟಕ.. ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಇನ್ಸೂರೆನ್ಸ್ ನಾಟಕ.!
TV9 Web
| Updated By: ಸಾಧು ಶ್ರೀನಾಥ್​|

Updated on: Feb 22, 2022 | 7:07 AM

Share

ವಿಜಯನಗರ (ಹೊಸಪೇಟೆ): ಕಾರು ಅಪಘಾತವಾದಾಗ ಇನ್ಸೂರೆನ್ಸ್ ಸಹಾಯಕ್ಕೆ ಬರುತ್ತೆ. ಕಾರು ಅಪಘಾತವಾದ್ರೆ ಮೃತರಿಗೆ ಪರಿಹಾರ ದೊರೆಯುತ್ತೆ. ಆದ್ರೆ ಕಾರು ಕಳ್ಳತನವಾಗಿದೆ ಎಂದು ಸುಳ್ಖು ದೂರು ನೀಡಿ ಇನ್ಸೂರೆನ್ಸ್ ಹಣ (vehicle insurance) ಪಡೆಯಲು ಮುಂದಾದ ವ್ಯಕ್ತಿಯ ವಂಚನೆಯನ್ನ ವಿಜಯನಗರ ಜಿಲ್ಲೆಯ ಪೊಲೀಸರು ಬಯಲು ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ಎಚ್ ಆರ್ ಎನ್ ಕಾಲೋನಿಯ ನಿವಾಸಿಯಾಗಿರುವ ಕಾರು ಚಾಲಕ‌ (car driver) ಮೂವರೊಂದಿಗೆ ಸೇರಿಕೊಂಡು ತನ್ನ ಇನ್ನೋವಾ ಕಾರು ಕಳ್ಳತನವಾಗಿದೆ ಎಂದು ಸುಳ್ಳು ದೂರು ನೀಡಿ ಇನ್ಸೂರೆನ್ಸ್ ಹಣಕ್ಕಾಗಿ ವಂಚನೆ ಮಾಡಲು ಮುಂದಾಗಿದ್ದ.

ಆದ್ರೆ ಕಾರು ಕಳ್ಳತನ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿದ್ದ ವಿಜಯನಗರ ನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಪೊಲೀಸರು ಕಾರು ಕಳ್ಳತನ ಪ್ರಕರಣ ಭೇದಿಸಿ ಇನ್ಸೂರೆನ್ಸ್ ಹಣಕ್ಕಾಗಿ ವಂಚನೆ ಮಾಡಲು ಯತ್ನಿಸಿರುವುದನ್ನ ಬಯಲಿಗೆ ಎಳೆಯುವಲ್ಲಿ ಯಶ್ವಸಿಯಾಗಿದ್ದಾರೆ.

ಘಟನೆಯ ವಿವರ: ಇದು ಇನ್ಸೂರೆನ್ಸ್ ಹಣಕ್ಕಾಗಿ ಕಾರು ಕಳ್ಳತನ ನಾಟಕದ ಅಂಕ. ತನ್ನದೇ ಕಾರು ಕಳುವಾಗಿದೆ ಎಂದು ಸುಳ್ಳು ದೂರು ನೀಡಿ ಇನ್ಸೂರೆನ್ಸ್ ಹಣ ಕ್ಲೇಮ್ ಮಾಡಲು (vehicle insurance) ಮುಂದಾಗಿದ್ದ ಆರೋಪಿ ಅಂದರ್ ಆಗಿದ್ದಾನೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಮೂಲದವರಾದ ಮುಸಾಕ್ತ ಅಹ್ಮದ್, ಸೈಯದ್ ಜಾಫರ್. ಮತ್ತೊಬ್ಬರ ಜೊತೆ ಸೇರಿಕೊಂಡು ಇನ್ನೋವಾ ಕಾರು KA 01 MP 7333 ಎಂಬ ಕಾರನ್ನು ಫೆಬ್ರುವರಿ 17 ರಂದು ಹೊಸಪೇಟೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಗುಂಡಾ ಪಾರೆಸ್ಟ್ ಬಳಿ ಯಾರೋ ಇಬ್ಬರು ಕಳ್ಳರು ಚಾಲಕನಿಗೆ ಹೊಡೆದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಕಾರು ಕಳ್ಳತನದ ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಇನ್ನೋವಾ ಕಾರನ್ನ ಕೊಪ್ಪಳದ ಹಿರೇಖೇಡ್ ಗ್ರಾಮದ ಸೈಯದ್ ಅಲಿ ಎನ್ನುವವರ ಜಮೀನಿನಲ್ಲಿ ಪತ್ತೆ ಮಾಡಿದ್ದಾರೆ. ಘಟನೆಗೆ ಸಂಭದಿಸಿದಂತೆ ಆರೋಪಿ ಸೈಯದ್ ಜಾಫರ್ ನನ್ನ‌ ವಿಚಾರಣೆ ನಡೆಸಿದ ವೇಳೆ ಕಾರನ್ನ ಬಿಚ್ಚಿಟ್ಟು ಇನ್ಸೂರೆನ್ಸ್ ಕಂಪನಿಗೆ ಮೋಸ ಮಾಡಿ ಸುಳ್ಳು ಕ್ಲೇಮ್ ಮಾಡಲು ಪ್ರಯತ್ನಿದ ವಿಚಾರ ಬೆಳಕಿಗೆ ಬಂದಿದೆ.

ಹಣಕ್ಕಾಗಿ ಇನ್ಸೂರೆನ್ಸ್ ಕಂಪನಿಗೆ ವಂಚಿಸಲು ಯತ್ನಿಸಿದ ಸೈಯದ್ ಜಾಫರ್ ನನ್ನ ಪೊಲೀಸರು ಬಂಧಿಸಿ ಇನ್ನಿಬ್ಬರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಇನ್ಸೂರೆನ್ಸ್ ಕಂಪನಿಗೆ ವಂಚಿಸಿಲು ಯತ್ನಿಸಿದ ಮೂವರು ಆರೋಪಿಗಳ ವಿರುದ್ದ ಮರಿಯಮ್ಮನಹಳ್ಳಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Also Read:

Guru: ಸಾವಿರಾರು ಸೂರ್ಯ-ಚಂದ್ರರು ಹುಟ್ಟಿ ಬಂದರೂ ಹೃದಯದೊಳಗಿನ ಅಜ್ಞಾನದ ಕತ್ತಲೆ ಹೋಗಲಾಡಿಸಲು ಸಾಧ್ಯವಿಲ್ಲ! Also Read: Sugarcane festival: ಆಲೆಮನೆ ಹಬ್ಬದ ಸವಿಯಲ್ಲಿ ಮಿಂದೆದ್ದ ಸ್ಥಳೀಯರು, ವಿಶೇಷ ಖಾದ್ಯಗಳ ರುಚಿ ಸವಿದು ಫುಲ್ ಕುಶ್!

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!