Trending News: ವ್ಯಕ್ತಿಯೋರ್ವನಿಗೆ ಕಾಡುತ್ತಿರುವ ದೇವರಿಗೆ ಬಿಟ್ಟ ಕೋಣ! ಕೊಪ್ಪಳದಲ್ಲೊಂದು ವಿಚಿತ್ರ ಘಟನೆ
ಈ ಕೋಣಕ್ಕೆ ಬೈಯುವಂತಿಲ್ಲ, ಹೊಡೆಯುವಂತಿಲ್ಲ, ಹಾಗೇನಾದರೂ ಜನರು ತೊಂದರೆ ಕೊಟ್ಟರೆ ಮಾತ್ರ ಈ ಕೋಣ ಸುಮ್ಮನೆ ಬಿಡುವುದಿಲ್ಲ, ಕಂಡಕಂಡಲ್ಲಿ ಅಟ್ಟಾಡಿಸಿಕೊಂಡು ಹೋಗುತ್ತದೆ. ಕೋಣ ಅಟ್ಟಾಡಿಸುವ ವಿಡಿಯೋ ಇಲ್ಲಿದೆ ನೋಡಿ.
ಕೊಪ್ಪಳ: ಪೆಟ್ಟುಕೊಟ್ಟ ಮೂವರು ವ್ಯಕ್ತಿಗಳ ವಿರುದ್ಧ ತಿರುಗಿಬಿದ್ದ ದೇವರಿಗೆ ಬಿಟ್ಟ ಕೋಣ, ವ್ಯಕ್ತಿಗಳನ್ನು ಕಂಡಕಂಡಲ್ಲಿ ಅಟ್ಟಾಟಿಸುತ್ತಿರುವ ವಿಚಿತ್ರ ಘಟನೆ ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆಯುತ್ತಿದೆ. ಗ್ರಾಮಸ್ಥರ ಪ್ರಕಾರ, ಈ ಕೋಣಕ್ಕೆ ಯಾರಾದರ ಹೊಡೆದರೆ, ಬೈದರೆ ಅಂಥ ವ್ಯಕ್ತಿಗಳ ಮನೆ ಬಾಗಿಲಿಗೆ ಹೋಗುತ್ತದೆ ಮತ್ತು ಅಟ್ಟಾಡಿಸಿಕೊಂಡು ಹಾಯಲು ಹೋಗುತ್ತದೆ.
ಇದನ್ನೂ ಓದಿ: Viral Video: ಮಳೆಗಾಳದಲ್ಲಿ ಹೇಗೆ ನಡೆದುಕೊಂಡು ಹೋಗಬೇಕು ಗೊತ್ತಾ? ಈ ವಿಡಿಯೋ ನೋಡಿ
ಬಂಡಿಹರ್ಲಾಪುರ ಗ್ರಾಮದ ದೇವರಾಜ್, ಅನಿಲ್, ರೋಷನ್ ಅಲಿ ಎಂಬವರ ಬೆನ್ನು ಬಿದ್ದಿರುವ ಕೋಣ, ಸಾಮಾನ್ಯವಾದ ಕೋಣವಲ್ಲ. ಶ್ರೀ ಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣವಾಗಿದೆ. ಈ ಕೋಣಕ್ಕೆ ಯಾರಾದರು ಬೈದರೆ ಅದು ಸುಮ್ಮನೆ ನಿಲ್ಲಲು ಬಿಡುವುದಿಲ್ಲ, ಹಾಯಲು ಹೋಗುತ್ತದೆ, ಅಟ್ಟಾಡಿಸುತ್ತದೆ. ಅಷ್ಟೇ ಅಲ್ಲ ಜಮೀನುಗಳಲ್ಲಿ ಮೇಯುತ್ತಿದ್ದಾಗ ಬೈದರೂ ಬೆನ್ನು ಬೀಳುತ್ತದೆ.
ತನಗೆ ಬಡಿದಿದ್ದಾರೆ ಎಂಬ ಕಾರಣಕ್ಕೆ ಹರಕೆಯ ಕೋಣ ದೇವರಾಜ್, ಅನಿಲ್, ರೋಷನ್ ಅಲಿ ಎಂಬವರನ್ನು ಕಂಡಕಂಡಲ್ಲಿ ಅಟ್ಟಾಡಿಸಿಕೊಂಡು ತಿವಿಯಲು ಹೋಗುತ್ತದೆ. ತನಗೆ ಹೊಡೆದ ವ್ಯಕ್ತಿ ಅಂಗಡಿಯಿಂದ ಹೊರಗೆ ಬರಲು ಕಾಯುತ್ತಿರುವ ಕೋಣ, ನಂತರ ತನಗಾಗದ ಮತ್ತೊಬ್ಬ ವ್ಯಕ್ತಿಯೊನ್ನು ನೋಡಿ ಓಡಿಸಿಕೊಂಡು ಹೋಗಿದೆ. ಆ ವ್ಯಕ್ತಿ ಮನೆಯೊಳಗೆ ಹೋದರೂ ಆ ಕೋಣ ನಿನ್ನನ್ನು ಬಿಡಲಾರೆ ಎಂಬಂತೆ ಮನೆಯ ಮುಂದೆಯೇ ಕಾದು ನಿಂತಿದೆ.
ಇದನ್ನೂ ಓದಿ: Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು
ಕೋಣದ ಬಗ್ಗೆ ಗ್ರಾಮಸ್ಥರು ಹೇಳುವುದೇನು?
ಕಳೆದ ಹಲವು ದಿನಗಳಿಂದ ರೋಷನ್ ಅಲಿಗೆ ಬೆಂಬಿಡದೆ ಕಾಡುತ್ತಿರುವ ಕೋಣದ ಬಗ್ಗೆ ಗ್ರಾಮಸ್ಥರು ಪ್ರತಿಕ್ರಿಯಿಸಿ, ಒಂದೆಡರಡು ಏಟು ಆ ಕೋಣಕ್ಕೆ ಕೊಟ್ಟಿರುವ ಪರಿಣಾಮ ಅದು ಬೆನ್ನುಬಿದ್ದಿದೆ. ಇದು ಕಂಟೆಮ್ಮ ದೇವಿಯ ಪಾವಡವಾಗಿದೆ. ಅದಕ್ಕೆ ಮಹಿಳೆಯರಾಗಲಿ, ಪುರುಷರಾಗಲಿ, ಮಕ್ಕಲೇ ಇರಲಿ ಯಾರು ಬೈಯ್ಯುತ್ತಾರೋ, ಹೊಡಿತಾರೋ ಅವರನ್ನು ಅಟ್ಟಾಡಿಸುತ್ತದೆ ಎಂದು ಹೇಳುತ್ತಾರೆ.
ಅದಾಗ್ಯೂ ಶಾಸ್ತ್ರೋಕ್ತವಾಗಿ ಕ್ಷಮೆಯಾಚಿಸುವಂತೆ ಗ್ರಾಮಸ್ಥರು ಅಲಿಗೆ ಹೇಳುತ್ತಿದ್ದಾರೆ. ಆದರೆ ಅಲಿ ಮಾತ್ರ ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಾರಂತೆ. ಇನ್ನು ಕೊನೆಯದಾಗಿ ಅಲಿಯ ಮನವೋಲಿಸಿ ಕ್ಷಮೆಯಾಚಿಸುವಂತೆ ಮಾಡಲು ಗ್ರಾಮದ ಹಿರಿಯರು ಮುಂದೆ ಬಂದಿದ್ದಾರೆ.
Published On - 1:06 pm, Sun, 26 June 22