ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಬಾಲಕನಿಗೆ ದಂಡ ಹಾಕಿದ ಗ್ರಾಮಸ್ಥರು, ಸಭೆ ಮಾಡಿ ದೇಗುಲ ಪ್ರವೇಶಿಸಿದ ದಲಿತ ಸಮುದಾಯದ ಜನ
ಮಿಯಾಪುರದ ಆಂಜನೇಯ ದೇಗುಲ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು 4 ವರ್ಷದ ಪುಟ್ಟ ಬಾಲಕನಿಗೆ 25 ಸಾವಿರ ರೂ. ದಂಡ ಹಾಕಿದ್ದಾರೆ. ವಿಷಯ ತಿಳಿದು ಗ್ರಾಮದಲ್ಲಿ ದಲಿತ ಸಮುದಾಯದವರು, ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.
ಕೊಪ್ಪಳ: 4 ವರ್ಷದ ದಲಿತ ಬಾಲಕ ದೇವಸ್ಥಾನ ಪ್ರವೇಶಿಸಿದ್ದಕ್ಕೆ ದೇವಸ್ಥಾನ ಶುದ್ಧೀಕರಣ ಮಾಡಲು 25 ಸಾವಿರ ರೂ. ದಂಡ ಹಾಕಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಿಯಾಪುರದಲ್ಲಿ ನಡೆದಿದೆ. ನಾವು ಈಗ 21ನೇ ಶತಮಾನದಲ್ಲಿದ್ದೇವೆ. ಈಗಲೂ ಕೂಡ ಅದೇ ನಂಬಿಕೆ, ಆಚಾರಗಳು ಕೆಲ ಕಡೆ ಚಾಲ್ತಿಯಲ್ಲಿವೆ. ಮೇಲು-ಕೀಳೆಂಬ ಭೇದ ಭಾವ ಜನರಲ್ಲಿ ಹಾಗೇ ಉಳಿದಿದೆ. ಕಾಲ ಬದಲಾಗುತ್ತಿದ್ದರು ಜನ ಮಾತ್ರ ಬದಲಾಗುತ್ತಿಲ್ಲ.
ಮಿಯಾಪುರದ ಆಂಜನೇಯ ದೇಗುಲ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು 4 ವರ್ಷದ ಪುಟ್ಟ ಬಾಲಕನಿಗೆ 25 ಸಾವಿರ ರೂ. ದಂಡ ಹಾಕಿದ್ದಾರೆ. ವಿಷಯ ತಿಳಿದು ಗ್ರಾಮದಲ್ಲಿ ದಲಿತ ಸಮುದಾಯದವರು, ಪೊಲೀಸ್ ಅಧಿಕಾರಿಗಳು, ತಹಶೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಬಾಲಕನ ಕುಟುಂಬಕ್ಕೆ ದಂಡ ಹಾಕಿದ್ದನ್ನು ವಿರೋಧಿಸಿ ಸಭೆ ನಡೆಸಿದ್ದು ಸಭೆ ಬಳಿಕ ದಲಿತ ಸಮುದಾಯದ ಜನರು ದೇಗುಲ ಪ್ರವೇಶಿಸಿದ್ರು. ಒಂದು ವಾರದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದಾಸರ ಸಮುದಾಯಕ್ಕೆ ಸೇರಿದ ಬಾಲಕ ಅಚಾನಕ್ಕಾಗಿ ದೇವಸ್ಥಾನ ಪ್ರವೇಶ ಮಾಡಿದ್ದ. ಈ ಹಿನ್ನಲೆ ಅಖಿಲ ಕರ್ನಾಟಕ ಚೆನ್ಮದಾಸರ ಮಾಹಾಸಭಾ ಗೌರವ ಅಧ್ಯಕ್ಷ ಕೆ.ಹೆಚ್ ಬೇಲೂರ ಗ್ರಾಮದಲ್ಲಿ ಸಭೆ ಮಾಡಿದ್ರು. ಸಭೆ ಮಾಡಿ ಬಳಿಕ ದಲಿತ ಸಮುದಾಯದ ಜನ ದೇವಸ್ಥಾನ ಪ್ರವೇಶ ಮಾಡಿದ್ರು.
ಇದನ್ನೂ ಓದಿ: ಕೊಪ್ಪಳ: ಶವಸಂಸ್ಕಾರಕ್ಕೆ ರುದ್ರಭೂಮಿ ಇಲ್ಲದೆ ದಲಿತರ ಪರದಾಟ