Covid Curfew: ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಿಸಲಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹ
Covid Curfew : ಇಡೀ ದೇಶದಲ್ಲೇ ರಾಜ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಗ್ರಸ್ಥಾನಕ್ಕೆ ಹೋಗುತ್ತಿದೆ. ಆದರೆ, ಆ ಅಂಕಿಅಂಶಗಳು ಸಹ ಸರಿ ಇಲ್ಲ. ಸಾಕಷ್ಟು ಜನ ಸಾಯುತ್ತಿದ್ದಾರೆ. ಅದನ್ನು ಸರ್ಕಾರ ಮುಚ್ಚಿಡುತ್ತಿದೆ. ಆರೋಗ್ಯದ ದೃಷ್ಟಿಯಿಂದ ಏನಾದರೂ ಮಾಡಲಿ, ತೊಂದರೆಗೆ ಒಳಗಾಗ್ತಾ ಇರುವವರಿಗೆ ಪರಿಹಾರ ನೀಡಲಿ; ಡಿ.ಕೆ.ಶಿವಕುಮಾರ್
ಬೆಂಗಳೂರು: ಸಿಎಂ ಯಡಿಯೂರಪ್ಪ ಲಾಕ್‌ಡೌನ್ ಎಂಬ ಪದವನ್ನು ಮಾತ್ರ ಬಳಸಿಲ್ಲ. ಆದರೆ, ಪರಿಸ್ಥಿತಿ ಕೈಮೀರಿದೆ ಎಂದು ಒಪ್ಪಿಕೊಂಡಿದ್ದಾರೆ. ಕೊವಿಡ್ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. ಸರ್ಕಾರ ಕೊವಿಡ್ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ. ಸರ್ಕಾರ ಆರೋಗ್ಯ ದೃಷ್ಟಿಯಿಂದ ಏನಾದರೂ ಮಾಡಲಿ. ಆದರೆ ತೊಂದರೆಗೊಳಗಾದವರಿಗೆ ಪರಿಹಾರ ನೀಡಲಿ. ಕನಿಷ್ಠ ಬ್ಯಾಂಕ್‌ಗಳ ಬಡ್ಡಿಯನ್ನಾದರೂ ಮನ್ನಾ ಮಾಡಲಿ. ಆದಷ್ಟು ಬೇಗ ಆರ್ಥಿಕ ಪ್ಯಾಕೇಜ್ ಘೋಷಿಸಲಿ ಎಂದು ಬೆಂಗಳೂರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದರು.
ಇಡೀ ದೇಶದಲ್ಲೇ ರಾಜ್ಯ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಅಗ್ರಸ್ಥಾನಕ್ಕೆ ಹೋಗುತ್ತಿದೆ. ಆದರೆ, ಆ ಅಂಕಿಅಂಶಗಳು ಸಹ ಸರಿ ಇಲ್ಲ. ಸಾಕಷ್ಟು ಜನ ಸಾಯುತ್ತಿದ್ದಾರೆ. ಅದನ್ನು ಸರ್ಕಾರ ಮುಚ್ಚಿಡುತ್ತಿದೆ. ಆರೋಗ್ಯದ ದೃಷ್ಟಿಯಿಂದ ಏನಾದರೂ ಮಾಡಲಿ, ತೊಂದರೆಗೆ ಒಳಗಾಗ್ತಾ ಇರುವವರಿಗೆ ಪರಿಹಾರ ನೀಡಲಿ. ಕೊನೆ ಪಕ್ಷ ಬ್ಯಾಂಕ್ ಬಡ್ಡಿಯನ್ನಾದರೂ ನೀಡಲಿ. ಆದಷ್ಟು ಬೇಗ ಆರ್ಥಿಕ ಪ್ಯಾಕೇಜ್ ಘೋಷಿಸಲಿ ಎಂದು ಅವರು ಆಗ್ರಹಿಸಿದರು.
ನಾಳೆಯಿಂದಲೇ 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಕರ್ನಾಟಕದಲ್ಲಿ ಕೊರೊನಾ ಸೊಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹೀಗಾಗಿ 14 ದಿನಗಳ ಕಾಲ ಕರ್ನಾಟಕವನ್ನು ಲಾಕ್‌ಡೌನ್ ಮಾಡಲು ನಿರ್ಧರಿಸಿದ್ದು, ನಾಳೆ ಸಂಜೆಯಿಂದ ಲಾಕ್‌ಡೌನ್ ಜಾರಿಯಾಗಲಿದೆ. 15 ದಿನಗಳ ಕಾಲ ಈ ಕಠಿಣ ನಿಯಮ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.
ಬೆಳಗ್ಗೆ 6-10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಉತ್ಪಾದನಾ ವಲಯ ಎಂದಿನಂತೆ ಮುಂದುವರಿಯುತ್ತದೆ. ಕೃಷಿ ಚಟುವಟಿಕೆಗಳಿಗೂ ಯಾವುದೇ ತೊಂದರೆ ಇಲ್ಲ. ರಾಜ್ಯದಲ್ಲಿ ಎಂದಿನಂತೆ ಕರ್ಫ್ಯೂ ಮುಂದುವರಿಯುತ್ತದೆ. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನುಮುಂದೆ ಆಕ್ಸಿಜನ್ ಕೊರತೆಯಾಗುವುದಿಲ್ಲ. ರಾಜ್ಯಕ್ಕೆ 800 ಮೆಟ್ರಿಕ್ ಟನ್ ಆಕ್ಸಿಜನ್ ಕೊಡಲು ಕೇಂದ್ರ ಸರ್ಕಾರ ಕೊಡಲು ಒಪ್ಪಿಕೊಂಡಿದೆ. ಎಂದು ತಿಳಿಸಿದ್ದಾರೆ. ಅಲ್ಲದೇ ರೆಮ್ಡೆಸಿವಿರ್ ಇಂಜೆಕ್ಷನ್ ಕೊರತೆಯೂ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎರಡು ವಾರದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದಿದ್ದರೆ ಮತ್ತೆ ಕಠಿಣ ಕ್ರಮ ಮುಂದುವರೆಸಬೇಕಾದ ಅನಿವಾರ್ಯತೆ ಬರಬಹುದು. ಹಾಗಾಗಿ ಜನರು ಸಹಕಾರ ನೀಡಿ ಕೊರೊನಾ ನಿಯಂತ್ರಿಸಬೇಕು ಎಂದಿದ್ದಾರೆ. ಜನರ ಓಡಾಟಕ್ಕೆ ಸಾರಿಗೆ ಸಂಚಾರ ಇರುವುದಿಲ್ಲ. ಆದರೆ, ಸರಕು ಸಾಗಣೆ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ತಾಲ್ಲೂಕು ತಹಶೀಲ್ದಾರ್ ನೋಡೆಲ್ ಆಫೀಸರ್ ಆಗಿ ಕೆಲಸ ಮಾಡುತ್ತಾರೆ. ಇದನ್ನು ನಾವು ಕೋವಿಡ್ ಕರ್ಫ್ಯೂ ಅಂತೀವಿ. ಬೆಳಿಗ್ಗೆ 6ರಿಂದ 10ರವರೆಗೆ ದಿನಬಳಕೆಯ ವಸ್ತು ಖರೀದಿಗೆ ಅವಕಾಶ ಇರಲಿದೆ. ಬೇರೆ ಯಾವುದಕ್ಕೂ ಅವಕಾಶ ಇರಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಕುಸಿಯುತ್ತಿದೆ. ಮೇ ಮೊದಲ ವಾರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಲಿದ್ದು, ಸೋಂಕಿತರ ಸಂಖ್ಯೆ ಡಬಲ್, ತ್ರಿಬಲ್ ಆಗಲಿದೆ. ಹೀಗಾಗಿ ತಜ್ಞರ ಸಲಹೆಯಂತೆ ಲಾಕ್‌ಡೌನ್ ಮಾಡಿ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪಟ್ಟು ಹಿಡಿದ ಪರಿಣಾಮ ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸ್ತು ಎಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Karnataka Lockdown: ನಾಳೆ ಸಂಜೆಯಿಂದ ಕರ್ನಾಟಕದಲ್ಲಿ ಕೊವಿಡ್ ಕರ್ಫ್ಯೂ! ಕೊರೊನಾ ನಿಯಂತ್ರಣಕ್ಕಾಗಿ 14 ದಿನ ರಾಜ್ಯಕ್ಕೆ ಬೀಗ
ನಾಳೆಯಿಂದ ರಾಜ್ಯದಲ್ಲಿ ಕೊವಿಡ್ ಕರ್ಫ್ಯೂ: ಏನಿರುತ್ತೆ? ಏನಿರಲ್ಲ?
Covid Curfew: ಕರ್ನಾಟಕ ಕೊವಿಡ್ ಕರ್ಫ್ಯೂನಲ್ಲಿ ಮದ್ಯಪ್ರಿಯರಿಗೆ ಸಿಹಿಸುದ್ದಿ; ಬಾರ್ಗಳಲ್ಲಿ ಪಾರ್ಸೆಲ್ಗೆ ಅವಕಾಶ
(KPCC President D K Shivakumar urges Karnataka govt to announce economic package due to covid curfew)