ಹಗರಣ ಬೆನ್ನಲ್ಲೇ ಕೆಪಿಎಸ್​​​​​​​​​​​​​​​ಸಿ ವೆಬ್‌ಸೈಟ್ ಬದಲಾವಣೆ :ಇಲ್ಲಿದೆ ಹೊಸ ಪೋರ್ಟಲ್ ಲಿಂಕ್

ಕೆಪಿಎಸ್ಸಿ (ಕರ್ನಾಟಕ ಲೋಕಸೇವಾ ಆಯೋಗ) ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಹೊಸ ಹೊಸ ಸಂಗತಿಗಳು ಬಯಲಾಗುತ್ತಿವೆ. ಮಾಜಿ ಅಧ್ಯಕ್ಷರಿಂದ ಹಿಡಿದು ಸದಸ್ಯರು ಸಹ ಈ ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಇನ್ನೊಂದೆಡೆ ಇಡೀ ಕೆಪಿಎಸ್ಸಿಯನ್ನೇ ರದ್ದು ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಇದೀಗ ಕೆಪಿಎಸ್​ಸಿ ಅಧಿಕೃತ ವೆಬ್​ಸೈಟ್ ವಿಳಾಸ ಬದಲಾವಣೆ ಮಾಡಲಾಗಿದೆ.

ಹಗರಣ ಬೆನ್ನಲ್ಲೇ ಕೆಪಿಎಸ್​​​​​​​​​​​​​​​ಸಿ ವೆಬ್‌ಸೈಟ್ ಬದಲಾವಣೆ :ಇಲ್ಲಿದೆ ಹೊಸ ಪೋರ್ಟಲ್ ಲಿಂಕ್
KPSC
Edited By:

Updated on: Oct 19, 2026 | 8:23 PM

ಮುಖ್ಯಾಂಶಗಳು

  • ಪಶುವೈದ್ಯರ ನೇಮಕಾತಿ ಹಗರಣ ಬೆನ್ನಲ್ಲೇ ಕೆಪಿಎಸ್​ಸಿ ಅಧಿಕೃತ ವೆಬ್​ಸೈಟ್ ವಿಳಾಸ ಬದಲಾವಣೆ
  • ಅಭ್ಯರ್ಥಿಗಳು, ಸಾರ್ವಜನಿಕರ ಮಾಹಿತಿಗಾಗಿ, ಆಡಳಿತಾತ್ಮಕ ಕಾರಣಗಳಿಂದಾಗಿ ಬದಲಾವಣೆ
  • https://kpsc.kar.nic.in ಬದಲಿಗೆ https://kpsc.karnataka.gov.in ವೆಬ್​​ಸೈಟ್ ಲಿಂಕ್ ಜಾರಿಗೆ

ಬೆಂಗಳೂರು, (ಅಕ್ಟೋಬರ್ 19): ಕರ್ನಾಟಕ ಲೋಕಸೇವಾ ಆಯೋಗವು (KPSC) ತನ್ನ ಅಧಿಕೃತ ವೆಬ್‌ಸೈಟ್ ವಿಳಾಸವನ್ನು ಬದಲಾಯಿಸಿದ್ದು, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ನೂತನ ವೆಬ್‌ಸೈಟ್ ಪೋರ್ಟಲ್ ಅನ್ನು ಚಾಲ್ತಿಗೆ ತಂದಿದೆ. ​ಆಡಳಿತಾತ್ಮಕ ಕಾರಣಗಳಿಂದಾಗಿ ಈ ಬದಲಾವಣೆಯನ್ನು ಮಾಡಲಾಗಿದ್ದು, ಈ ಹಿಂದೆ ಬಳಕೆಯಲ್ಲಿದ್ದ ವೆಬ್‌ಸೈಟ್ ವಿಳಾಸ https://kpsc.kar.nic.in ಅನ್ನು ಬದಲಾಯಿಸಿ, ಈಗ ಹೊಸದಾಗಿ https://kpsc.karnataka.gov.in ವೆಬ್‌ಸೈಟ್ ವಿಳಾಸವನ್ನು ಅಧಿಕೃತವಾಗಿ ಜಾರಿಗೆ ತರಲಾಗಿದೆ.

ಇನ್ಮುಂದೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ, ಅಧಿಸೂಚನೆಗಳು ಹಾಗೂ ಅಭ್ಯರ್ಥಿಗಳಿಗೆ ಅಗತ್ಯವಿರುವ ಮಾಹಿತಿಗಳನ್ನು ಪಡೆಯಲು ನೂತನ ವೆಬ್‌ಸೈಟ್ https://kpsc.karnataka.gov.in ಅನ್ನು ಮಾತ್ರ ವೀಕ್ಷಿಸಬೇಕೆಂದು ಆಯೋಗದ ಕಾರ್ಯದರ್ಶಿಯವರಾದ ಜ್ಯೋತಿ ಕೆ. ಅವರು ತಿಳಿಸಿದ್ದಾರೆ. ಇನ್ನು ನೇಮಕಾತಿಯಲ್ಲಿ ಸಾಕಷ್ಟು ಹಗರಣಗಳು ಆಗುತ್ತಿರುವುದರಿಂದ  ಕೆಪಿಎಸ್​​ಸಿಯನ್ನೇ ರದ್ದುಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಇದರ ಮಧ್ಯೆ ಇದೀಗ ವೆಬ್​​ಸೈಟ್ ಬದಲಾವಣೆ ಮಾಡಿದೆ.

Loading...

ಇದನ್ನೂ ನೋಡಿ: ಕೆಪಿಎಸ್ಸಿ ನೇಮಕಾತಿ ಹಗರಣ: ಬಗೆದಷ್ಟೂ ಬಯಲಾಗ್ತಿದೆ ಪ್ರಮುಖ ಆರೋಪಿ ಬಸವರಾಜ್​ ಕನ್ನಾಳೆ ಕಳ್ಳಾಟ

ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಯುತತೆ ಮುಖ್ಯ. ಈ ಹಗರಣವು ಯುವ ಉದ್ಯೋಗಾಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದೆ. ಅಕ್ರಮ ಮಾರ್ಗದಿಂದ ನೇಮಕಾತಿ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ನಿಜವಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರೆಯುವಂತೆ ಮಾಡುವುದು ಅಗತ್ಯವಾಗಿದೆ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳು ಅಗತ್ಯವಾಗಿವೆ. ಹೀಗಾಗಿ ಕೆಪಿಎಸ್​​ಸಿಯಿಂದ ನೇಮಕಾತಿ ಅಧಿಸೂಚನೆಗಳು ಹಾಗೂ ನೇಮಕಾತಿ ಮಾಹಿತಿಯನ್ನು ಸಾರ್ವಜನಿಕರು ನೀಡಲು ಸರ್ಕಾರ ಕೆಪಿಎಸ್​​ಸಿಯ ವೆಬ್​​ಸೈಟ್ ವಿಳಾಸವನ್ನೇ ಬದಲಿಸಿದೆ. ಇದರಿಂದ ಕೆಪಿಎಸ್​​ಸಿಗೆ ಸಂಬಂಧಿಸಿದ ಯಾವುದೇ ಅಧಿಸೂಚನೆ, ಇತರೆ ಮಾಹಿತಿಗಾಗಿ https://kpsc.karnataka.gov.in ಲಿಂಕ್​ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕೆಪಿಎಸ್​ಸಿ ಅಕ್ರಮ ನೇಮಕಾತಿ ಹಗರಣ ಸಂಬಂಧ ಇಡಿ ತನಿಖೆ ನಡೆಯುತ್ತಿದೆ. ಈ ತನಿಖೆಯಲ್ಲಿ ಇದೀಗ ಅಕ್ರಮದಲ್ಲಿ ಶಾಮೀಲಾದ ಅಭ್ಯರ್ಥಿಗಳ ಎಕ್ಸಾಂ ಸೀಕ್ರೆಟ್​ ಬಯಲಾಗಿದೆ. ಖುದ್ದು ಕೆಲ ಸದಸ್ಯರ ಸಮ್ಮುಖದಲ್ಲಿ ಫೈವ್‌ ಸ್ಟಾರ್ ಹೋಟೆಲ್ ನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿರುವುದು ಬೆಳಕಿಗೆ ಬಂದಿದೆ. ಇನ್ನು ಈ ಪ್ರಕರಣದಲ್ಲಿ ಈಗಾಗಲೇ ಇಡಿ ಅಧಿಕಾರಿಗಳು ಕಿಂಗ್​​ಪಿನ್​​ಗಳನ್ನು ಬಂಧಿಸಿದ್ದಾರೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿವಿ ಗೀತಾ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಕಿಂಗ್​​ಪಿನ್ ಬಸವರಾಜ್ ಕಿನ್ನಾಳೆಯನ್ನು ಬಂಧಿಸಲಾಗಿದ್ದು, ಇವರಿಂದ ಕೆಲ ಮಾಹಿತಿ ಸಹ ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Mon, 19 October 26

ಕಿರಣ್​ ಹನಿಯಡ್ಕ

TV9 ಕನ್ನಡದಲ್ಲಿ ಹಿರಿಯ ರಾಜಕೀಯ ವರದಿಗಾರ. ಮಂಗಳೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. 17 ವರ್ಷಗಳಿಂದ ಮಾಧ್ಯಮ ವೃತ್ತಿ. ಮುದ್ರಣ ಮಾಧ್ಯಮದಲ್ಲಿ ಸಬ್ ಎಡಿಟರ್, ವಿದ್ಯುನ್ಮಾನ ಮಾಧ್ಯಮದಲ್ಲಿ ನ್ಯೂಸ್ ಡೆಸ್ಕ್ ಮತ್ತು ರಾಜಕೀಯ ವರದಿಗಾರಿಕೆಯಲ್ಲಿ ಅನುಭವ.

Read More
Loading...
Unable to load recommendations.
Follow Us