ಬೆಂಗಳೂರು: ವಿಧಾನಸೌಧದ ಮುಂದೆ ಗೋಪೂಜೆ ನಡೆಸುವ ಮೂಲಕ ಗೋಹತ್ಯಾ ನಿಷೇಧ ಕಾಯ್ದೆ ವಿಧೇಯಕ ಮಂಡನೆಗೆ ಮುನ್ನುಡಿ ಹಾಡಲಾಯಿತು. ವಿಧಾನಸೌಧದ ಅಂಗಳಕ್ಕೆ ಎಳೆಯ ಕರು ಮತ್ತು ಗೋವುಗಳನ್ನು ಕರೆತಂದು ಸಚಿವರಾದ ಪ್ರಭು ಚೌಹಾಣ್ ಮತ್ತು ಕೆ.ಎಸ್.ಈಶ್ವರಪ್ಪ ಗೋಪೂಜೆ ಮಾಡಿದರು.
ಬಹುನಿರೀಕ್ಷಿತ ಗೋ ಹತ್ಯೆ ನಿಷೇಧ ಕಾಯ್ದೆಯ ವಿಧೇಯಕ ಇಂದು ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ಗೋಹತ್ಯಾ ನಿಷೇಧ ಕಾಯ್ದೆಯ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು.
ಯಾರೇ ವಿರೋಧಿಸಿದರೂ ಗೋಹತ್ಯೆ ನಿಷೇಧ ಮಾಡಿಯೇ ಮಾಡುತ್ತೇವೆ ಎಂದಿದ್ದ ಆಡಳಿತ ಪಕ್ಷ ಇಂದು ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ಇಟ್ಟಿದೆ. ವಿಧೇಯಕ ಅಂಗೀಕಾರಕ್ಕೆ ಮುನ್ನ ವಿಧಾನಸೌಧದ ಪೂರ್ವ ದ್ವಾರದ ಮುಂದೆ ಗೋವುಗಳನ್ನು ಕರೆತಂದು ಪೂಜೆ ಮಾಡಿದ್ದು ವಿಶೇಷವಾಗಿತ್ತು.
ಹಿಂದೂ ಸಂಪ್ರದಾಯದಲ್ಲಿ ಗೋವುಗಳಿಗೆ ಪೂಜನೀಯ ಸ್ಥಾನವಿದೆ. ಆದ್ದರಿಂದ ಅದಕ್ಕೆ ಬೆಲೆ ನೀಡಲೇಬೇಕು. ಎಷ್ಟೇ ವಿರೋಧವಿದ್ದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆಡಳಿತ ಪಕ್ಷದ ನಾಯಕರು ಪದೇ ಪದೇ ಹೇಳಿಕೆ ನೀಡುತ್ತಿದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಗೋ ಹತ್ಯೆ ನಿಷೇಧ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ; ಪ್ರತಿಭಟನೆ ಬಿಡದ ಕಾಂಗ್ರೆಸ್
Published On - 8:03 pm, Wed, 9 December 20