ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕಾರಣವಾಗಿದ್ದು ಓರ್ವ ಸಾಕ್ಷಿ ಹೇಳಿಕೆ, ಯಾರದು ಗೊತ್ತಾ?

|

Updated on: Mar 28, 2023 | 10:16 AM

ಚನ್ನಗಿರಿ ಕ್ಷೇತ್ರದ BJP ಮಾಡಾಳ್ ವಿರೂಪಾಕ್ಷರನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನಕ್ಕೆ ಕಾರಣವಾಗಿದ್ದು ಓರ್ವ ಸಾಕ್ಷಿಯ ಹೇಳಿಕೆ.

ಮಾಡಾಳ್ ವಿರೂಪಾಕ್ಷಪ್ಪ ಬಂಧನಕ್ಕೆ ಕಾರಣವಾಗಿದ್ದು ಓರ್ವ ಸಾಕ್ಷಿ ಹೇಳಿಕೆ, ಯಾರದು ಗೊತ್ತಾ?
ಶಾಸಕ ಮಾಡಾಳ್​ ವಿರೂಪಾಕ್ಷಪ್ಪ
Follow us on

ಬೆಂಗಳೂರು: ಲಂಚ ಸ್ವೀಕಾರ ಕೇಸ್​​ನಲ್ಲಿ ಸಿಲುಕಿರುವ ಚನ್ನಗಿರಿ ಕ್ಷೇತ್ರದ BJP ಶಾಸಕ ಮಾಡಾಳ್ ವಿರೂಪಾಕ್ಷಪ್ಪರನ್ನು ಪೊಲೀಸ್ರು ಬಂಧಿಸಿದ್ದಾರೆ. ತುಮಕೂರಿನ ಹೊರವಲಯದಲ್ಲಿರುವ ಕ್ಯಾತ್ಸಂದ್ರ ಟೋಲ್‌ ಬಳಿ ನಿನ್ನೆ (ಮಾರ್ಚ್ 27) ಮಾಡಾಳ್ ವಿರೂಪಕಾಕ್ಷಪ್ಪನನ್ನು ಖಾಕಿ ಪಡೆ ಲಾಕ್ ಮಾಡಿದೆ. ಮಾಡಾಳ್ ವಿರೂಪಾಕ್ಷಪ್ಪ ಚನ್ನಗಿರಿಯಿಂದ ಇನ್ನೋವಾ ಕಾರಿನಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕ್ಯಾತ್ಸಂದ್ರ ಟೋಲ್‌ ಬಳಿ ಅರೆಸ್ಟ್ ಮಾಡಿದ್ದಾರೆ. ಮಾಡಾಳ್ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಹೈಕೋರ್ಟ್ ಏಕಸದಸ್ಯ ಪೀಠ ವಜಾ ಮಾಡಿತ್ತು. ಹೀಗಾಗಿ ಮಾಡಾಳ್ ವಿರೂಪಾಕ್ಷರನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನು ಮಾಡಾಳ್ ವಿರೂಪಾಕ್ಷಪ್ಪಗೆ ಬಂಧನಕ್ಕೆ ಕಾರಣವಾಗಿದ್ದು ಓರ್ವ ಸಾಕ್ಷಿಯ ಹೇಳಿಕೆ. ಏನದು ಹೇಳಿಕೆ? ಯಾರು ಆ ಸಾಕ್ಷಿ? ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಲೆಗೆ ಬಿದ್ದಿದ್ದು ಹೇಗೆ? ಹೀಗಿತ್ತು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ

ಮಾಡಾಳ್​ ವಿರೂಪಾಪಕ್ಷ ಪ್ರಕರಣದಲ್ಲಿ ಕೆಎಸ್‌ಡಿಎಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮಹೇಶ್ ಅವರು ಸಾಕ್ಷಿಯಾಗಿದ್ದು, ಸಿಆರ್‌ಪಿಸಿ ಸೆಕ್ಷನ್ 164 ಅಡಿಯಲ್ಲಿ ಅವರು ಸ್ವಇಚ್ಚಾ ಹೇಳಿಕೆ ನೀಡಿದ್ದಾರೆ. ಟೆಂಡರ್ ಗಳನ್ನು ಅಂತಿಮಗೊಳಿಸುವಾಗ ಪುತ್ರನ ಮೂಲಕವೇ ಮಾಡಾಳ್ ವಿರೂಪಾಕ್ಷಪ್ಪ ಸೂಚನೆ ನೀಡುತ್ತಿದ್ದರು. ಕೆಎಸ್‌ಡಿಎಲ್ ಎಂಡಿ ಮಹೇಶ್ ಗೆ ದೂರವಾಣಿ ಮೂಲಕ ಹಾಗೂ ವಾಟ್ಸ್ಆಪ್ ಸಂದೇಶಗಳ ಮೂಲಕವೂ ಮಾಡಾಳ್ ವಿರೂಪಾಕ್ಷಪ್ಪ ಸೂಚನೆಗಳನ್ನು ಕಳುಹಿಸಿದ್ದರು. ಈ ಪ್ರಕರಣದಲ್ಲೂ ಪುತ್ರನ ಮೂಲಕವೇ ಮಾಡಾಳ್ ವಿರೂಪಾಕ್ಷಪ್ಪ ಸೂಚನೆಗಳನ್ನು ನೀಡುತ್ತಿದ್ದರು ಎಂದು ಕೆಎಸ್‌ಡಿಎಲ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮಹೇಶ್ ಮಹತ್ವದ ಸಾಕ್ಷ್ಯ ನೀಡಿದ್ದಾರೆ.

ಅಲ್ಲದೇ ಟೆಂಡರ್ ಅಂತಿಮಗೊಳಿಸುವುದು, ಕಾರ್ಯಾದೇಶ ನೀಡುವುದು, ಬಿಲ್ ಹಣ ಬಿಡುಗಡೆ ಮಾಡುವುದರಲ್ಲಿ ತಂದೆ ಮಗನ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದರು. ಇದು ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಪುತ್ರ ಪಾತ್ರ ಬಹಿರಂಗಪಡಿಸಿದೆ. ಆ ಸಾಕ್ಷಿಯ ಹೇಳಿಕೆಯಿಂದಾಗಿ ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಪಾತ್ರಕ್ಕೆ ಆಧಾರ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆಯೇ ಲೋಕಾಯುಕ್ತ ಪೊಲೀಸರು ಮಾಡಾಳ್​ ವಿರೂಪಾಕ್ಷನನ್ನು ಬಂಧಿಸಿದ್ದಾರೆ.

ಮಾಡಾಳ್ ವಿರೂಪಾಕ್ಷರನ್ನು ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಹಾಜರು ಪಡಿಸುವ ಸಾಧ್ಯತೆ ಇದ್ದು, ಕಸ್ಟಡಿಗೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡಲಿದ್ದಾರೆ. ಕಸ್ಟಡಿಗೆ ನೀಡಿದ್ರೆ ಲೋಕಾಯುಕ್ತ ಕಚೇರಿಗೆ ಕರೆತಂದು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ. ಇನ್ನು ಚನ್ನಗಿರಿ ಕ್ಷೇತ್ರದ BJP ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ರಾಜ್ಯ ರಾಜಕೀಯದಲ್ಲಿ ದೊಡ್ಡ ಕಂಪನವನ್ನೇ ಎಬ್ಬಿಸಿದೆ. ಮುನ್ನೆಚ್ಚರಿಕೆಯಿಂದ ಲೋಕಾಯುಕ್ತ ಕಚೇರಿ ಮುಂಭಾಗ ಭದ್ರತೆ ನಿಯೀಜಿಸಲಾಗಿದೆ. ಕಚೇರಿ ಮುಂಭಾಗ 20ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.