ನಾಳೆಯಿಂದ ಖಾಸಗಿ ಬಸ್​ ಟಿಕೆಟ್ ದರದಲ್ಲಿ ಏರಿಕೆ ಸಾಧ್ಯತೆ.. ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

| Updated By: shruti hegde

Updated on: Apr 06, 2021 | 11:00 AM

ಸಾಮಾನ್ಯ ದಿನದಲ್ಲಿ ₹600ರಿಂದ ₹700ರಷ್ಟಿರುವ ಖಾಸಗಿ ಬಸ್​ಗಳ ಟಿಕೆಟ್ ದರ ಇದೀಗ ₹1,200ರಿಂದ ₹1,300ಕ್ಕೆ ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಸರ್ಕಾರಿ ಬಸ್​ಗಳನ್ನು ನೆಚ್ಚಿಕೊಂಡ ಪ್ರಯಾಣಿಕರಿಗೆ ಇದು ತಾಳಲಾರದ ಹೊರೆಯಾಗಲಿದೆ.

ನಾಳೆಯಿಂದ ಖಾಸಗಿ ಬಸ್​ ಟಿಕೆಟ್ ದರದಲ್ಲಿ ಏರಿಕೆ ಸಾಧ್ಯತೆ.. ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ
ಕೆಎಸ್​ಆರ್​ಟಿಸಿ ಮತ್ತು ಖಾಸಗಿ ಬಸ್​
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಧೋರಣೆಯ ವಿರುದ್ಧ ಮುನಿಸಿಕೊಂಡಿರುವ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸಾರಿಗೆ ನೌಕರರು ನಾಳೆಯಿಂದ ರಾಜ್ಯವ್ಯಾಪಿ ಮುಷ್ಕರ ನಡೆಸಲು ಸನ್ನದ್ಧರಾಗಿದ್ದಾರೆ. ಸರ್ಕಾರಿ ಬಸ್​ಗಳು ಸೇವೆಯನ್ನು ಸ್ಥಗಿತಗೊಳಿಸುತ್ತಿರುವುದರಿಂದ ಅದರ ಲಾಭ ಪಡೆಯಲು ಮುಂದಾದ ಖಾಸಗಿ ಬಸ್​ಗಳು ನಾಳೆಯಿಂದಲೇ ಟಿಕೆಟ್ ದರ ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೊರಜಿಲ್ಲೆ ಮತ್ತು ಹೊರರಾಜ್ಯಗಳಿಗೆ ತೆರಳುವ ಖಾಸಗಿ ಬಸ್​ ದರದಲ್ಲಿ ಏರಿಕೆ ಆಗಲಿದ್ದು, ಜನಸಾಮಾನ್ಯರಿಗೆ ಹೊರೆಯಾಗಲಿದೆ.

ಸಾಧಾರಣವಾಗಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮನಸೋ ಇಚ್ಛೆ ದರ ಏರಿಸಿ ಪ್ರಯಾಣಿಕರಿಂದ ಹಣ ಪಡೆಯುವ ಖಾಸಗಿ ಬಸ್​ಗಳು ಇದೀಗ ರಾಜ್ಯ ಸಾರಿಗೆ ನೌಕರರ ಮುಷ್ಕರದ ವೇಳೆಯಲ್ಲಿ ಟಿಕೆಟ್ ದರ ಏರಿಕೆಗೆ ಮುಂದಾಗಿರುವುದು ಪ್ರಯಾಣಿಕರ ಜೇಬಿಗೆ ಕತ್ತರಿ ಪ್ರಯೋಗ ಆಗಲಿದೆ. ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ ಸೇರಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಿಗೆ ಹೋಗುವ ಖಾಸಗಿ ಬಸ್​ಗಳ ಪ್ರಯಾಣ ದರದಲ್ಲಿ ಈಗಾಗಲೇ ಏರಿಕೆಯಾಗಿದ್ದು, ನಾಳೆ ಇನ್ನಷ್ಟು ದರ ಏರುವ ಸಂಭವವಿದೆ.

ಸಾಮಾನ್ಯ ದಿನದಲ್ಲಿ ₹600ರಿಂದ ₹700ರಷ್ಟಿರುವ ಖಾಸಗಿ ಬಸ್​ಗಳ ಟಿಕೆಟ್ ದರ ಇದೀಗ ₹1,200ರಿಂದ ₹1,300ಕ್ಕೆ ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಸರ್ಕಾರಿ ಬಸ್​ಗಳನ್ನು ನೆಚ್ಚಿಕೊಂಡ ಪ್ರಯಾಣಿಕರಿಗೆ ಇದು ತಾಳಲಾರದ ಹೊರೆಯಾಗಲಿದೆ. ಖಾಸಗಿ ಬಸ್​ಗಳು ಹೀಗೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳುವುದನ್ನು ನಿಯಂತ್ರಿಸಲಾಗದೆ ಅಸಹಾಯಕರಂತೆ ವರ್ತಿಸುವ ಸರ್ಕಾರ ಕಡೇ ಪಕ್ಷ ತನ್ನದೇ ನೌಕರರ ಸಮಸ್ಯೆಗಳನ್ನು ಬಗೆಹರಿಸಿ ಮುಷ್ಕರ ಆಗದಂತೆ ನೋಡಿಕೊಂಡರೆ ಜನಸಾಮಾನ್ಯರ ಮೇಲಿನ ಹೊರೆಯಾದರೂ ತಗ್ಗುತ್ತದೆ ಎನ್ನುವುದು ಬಹುತೇಕರ ಅಭಿಪ್ರಾಯ.

ಇದನ್ನೂ ಓದಿ:
Bus Strike: ಇಂದು ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ಸಂಚಾರ ಅನುಮಾನ; ನಾಳೆಯಿಂದ ಕರ್ನಾಟಕ ರಾಜ್ಯಾದ್ಯಂತ ಬಸ್​ ಬಂದ್? 

ನಾಳೆ ಸಾರಿಗೆ ಮುಷ್ಕರ ನಡೆದೇ ನಡೆಯುತ್ತೆ, ಖಾಸಗಿ ನೌಕರರಿಗೂ ಬಸ್ ಓಡಿಸದಂತೆ ಮನವಿ: ಕೋಡಿಹಳ್ಳಿ ಚಂದ್ರಶೇಖರ್


(KSRTC BMTC Bus Strike leads to hike in Private bus ticket price)