ನಾಳೆ ಸಾರಿಗೆ ಮುಷ್ಕರ ನಡೆದೇ ನಡೆಯುತ್ತೆ, ಖಾಸಗಿ ನೌಕರರಿಗೂ ಬಸ್ ಓಡಿಸದಂತೆ ಮನವಿ: ಕೋಡಿಹಳ್ಳಿ ಚಂದ್ರಶೇಖರ್

ಸರ್ಕಾರ ನೌಕರರಿಗೆ ಸಂಬಂಧಿಸಿದ 8 ಬೇಡಿಕೆಗಳನ್ನು ಈಡೆರಿಸಿದ್ದೇವೆ ಎನ್ನುತ್ತಿದೆ. ಆದರೆ, ಆ ಯಾವ ಬೇಡಿಕೆಗಳೂ ನೌಕರರ ಪರವಾಗಿಲ್ಲ. ಸರ್ಕಾರ ಮೇ 4ರ ನಂತರ ಭರವಸೆ ಈಡೇರಿಸಲಾಗುವುದು ಎನ್ನುತ್ತಿದೆ. ಆದರೆ, ಆ ಮಾತಿನ ಮೇಲೆ ನಮಗೆ ನಂಬಿಕೆ ಇಲ್ಲ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ.

ನಾಳೆ ಸಾರಿಗೆ ಮುಷ್ಕರ ನಡೆದೇ ನಡೆಯುತ್ತೆ, ಖಾಸಗಿ ನೌಕರರಿಗೂ ಬಸ್ ಓಡಿಸದಂತೆ ಮನವಿ: ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್
Follow us
Skanda
|

Updated on:Apr 06, 2021 | 7:36 AM

ಬೆಂಗಳೂರು: ಸರ್ಕಾರದ ವಿರುದ್ಧ ಈಗಾಗಲೇ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಕೆಗೆ ಕಾಯುತ್ತಿದ್ದ ಸಾರಿಗೆ ನೌಕರರು ಮತ್ತೆ ಬೀದಿಗಿಳಿಯುವ ಸಾಧ್ಯತೆ ಇದೆ. ಈ ಬಗ್ಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದ್ದು, ನಾಳೆ ಸಾರಿಗೆ ಮುಷ್ಕರ ನಡೆದೇ ನಡೆಯುತ್ತೆ. ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಬೇಡಿಕೆ ಈಡೇರಿಸುವಂತೆ ನಾವು ಸರ್ಕಾರಕ್ಕೆ 3 ತಿಂಗಳ ಗಡುವು ನೀಡಿದ್ದೆವು. ಸರ್ಕಾರವೂ ಡಿಸೆಂಬರ್ 14ರಂದು ಲಿಖಿತ ರೂಪದಲ್ಲಿ ಭರವಸೆ ನೀಡಿತ್ತು. ಅದು ಸುಳ್ಳು ಭರವಸೆ ಎಂದು ಈಗ ಗೊತ್ತಾಗಿದೆ. ನಮಗೆ ನೀಡಿದ ಭರವಸೆ, ಆಶ್ವಾಸನೆಗಳು ಈಡೇರುವ ತನಕ ಬಸ್ ಮುಟ್ಟೋದಿಲ್ಲ ಎಂದು ಹೇಳಿದ್ದು, ಮುಷ್ಕರ ಘೋಷಿಸಿದ್ದಾರೆ.

ಸರ್ಕಾರ ನೌಕರರಿಗೆ ಸಂಬಂಧಿಸಿದ 8 ಬೇಡಿಕೆಗಳನ್ನು ಈಡೆರಿಸಿದ್ದೇವೆ ಎನ್ನುತ್ತಿದೆ. ಆದರೆ, ಆ ಯಾವ ಬೇಡಿಕೆಗಳೂ ನೌಕರರ ಪರವಾಗಿಲ್ಲ. ಸರ್ಕಾರ ಮೇ 4ರ ನಂತರ ಭರವಸೆ ಈಡೇರಿಸಲಾಗುವುದು ಎನ್ನುತ್ತಿದೆ. ಆದರೆ, ಆ ಮಾತಿನ ಮೇಲೆ ನಮಗೆ ನಂಬಿಕೆ ಇಲ್ಲ. ಇದು ನೀತಿಸಂಹಿತೆಯ ನೆಪ ಹೇಳಿ ಪಲಾಯನ ಮಾಡಲು ದಾರಿ ಹುಡುಕಿದೆ. ಇದು ಯಾವುದೇ ಹೊಸ ಜನಪ್ರಿಯ ಯೋಜನೆ ಅಲ್ಲ. ನಮಗೆ ಕೊಟ್ಟಿರುವ ಆಶ್ವಾಸನೆ ಈಡೇರಿಸುತ್ತಿದ್ದಾರೆ ಅಷ್ಟೇ. ಇದಕ್ಕೆಲ್ಲಾ ನೀತಿಸಂಹಿತೆ ಅಡ್ಡಿಯಾಗದು ಎಂದು ಹೇಳಿದ್ದಾರೆ.

ಅಲ್ಲದೇ, ನೀತಿಸಂಹಿತೆ ಇದ್ದಾಗಲೇ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಅದಕ್ಕೆಲ್ಲಾ ನೀತಿಸಂಹಿತೆ ಅಡ್ಡ ಬರಲಿಲ್ಲವಾ? ಈಗ ಮಾತ್ರ ಸಮಸ್ಯೆಯಾಗುತ್ತಾ? ನಾವು ಮೊದಲೇ ಮನವಿ ಕೊಟ್ಟಿರುವ ಕಾರಣ ಯಾವ ನೀತಿ ಸಂಹಿತೆಯೂ ನಮಗೆ ಅನ್ವಯಿಸುವುದಿಲ್ಲ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಖಾಸಗಿ ನೌಕರರಿಗೆ ಕೂಡಾ ಬಸ್ ಓಡಿಸದಂತೆ ಮನವಿ ಮಾಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಟ್ಟಿರೋ ಮಾತಿನಿಂದ ಹಿಂದೆ ಸರಿಯುವುದಿಲ್ಲ, ಯಾವುದೇ ಆತುರದ ನಿರ್ಣಯ ತೆಗೆದುಕೊಂಡು ಮುಷ್ಕರ ಮಾಡಬೇಡಿ: ಸಚಿವ ಲಕ್ಷ್ಮಣ ಸವದಿ

ಕೊರೊನಾ ನಿಯಂತ್ರಣಕ್ಕೆ ಹೊಸ ನಿಯಮ​; ಬಿಎಂಟಿಸಿ ಬಸ್‌ಗಳನ್ನು ತಡೆದು ಪ್ರಯಾಣಿಕರ ವಾಗ್ವಾದ 

Published On - 7:33 am, Tue, 6 April 21

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?