ಮಡಿಕೇರಿಯಲ್ಲಿ ಕಾಡಾನೆ ದಾಳಿ; ವೃದ್ಧೆ ಸಾವು

ಕಾಡಾನೆ ದಾಳಿಯಿಂದ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಬಿಬಿಟಿಸಿ ಎಸ್ಟೇಟ್ ಬಳಿ ನಡೆದಿದೆ.

ಮಡಿಕೇರಿಯಲ್ಲಿ ಕಾಡಾನೆ ದಾಳಿ; ವೃದ್ಧೆ ಸಾವು
ಹಳೆಕೆರೆ ಗ್ರಾಮಕ್ಕೆ ಕಾಲಿಟ್ಟ ಕಾಡಾನೆ
Follow us
sandhya thejappa
| Updated By: shruti hegde

Updated on: Apr 06, 2021 | 10:23 AM

ಮಡಿಕೇರಿ: ಕಾಡಾನೆ ದಾಳಿಯಿಂದ ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಬಿಬಿಟಿಸಿ ಎಸ್ಟೇಟ್ ಬಳಿ ನಡೆದಿದೆ. ರಾತ್ರಿ ಬಹಿರ್ದೆಸೆಗೆ ತೆರಳಿದ್ದಾಗ ಕಾರ್ಮಿಕ ಮಹಿಳೆ ಮೇಲೆ ಆನೆ ದಾಳಿ ನಡೆಸಿತ್ತು. ತೀವ್ರ ಗಾಯಗೊಂಡಿದ್ದ 80 ವರ್ಷದ ಲಕ್ಷ್ಮೀ ಎಂಬ ವೃದ್ಧೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಹುಚ್ಚು ಕುದುರೆಯ ರಂಪಾಟ; ಶಿಕ್ಷಕ, ಮಹಿಳೆಗೆ ಗಾಯ ಮೈಸೂರು: ಕಳೆದ 3 ದಿನಗಳಿಂದ ಹುಚ್ಚು ಕುದುರೆ, ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ರಂಪಾಟ ನಡೆಸುತ್ತಿತ್ತು. ಇದರ ರಂಪಾಟದಿಂದ ನಂಜನಗೂಡು ಪಟ್ಟಣದ ಪ್ರೌಢಶಾಲಾ ಶಿಕ್ಷಕ ರಾಘವೇಂದ್ರ ಮತ್ತು ಮಹಿಳೆಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಚ್ಚು ಕುದುರೆಯನ್ನು ನಿಯಂತ್ರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದರು. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲವೆಂದು ನಗರಸಭೆ ಮತ್ತು ಪಶುಪಾಲನೆ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕ ಮತ್ತು ಮಹಿಳೆ ಮೇಲೆ ದಾಳಿ ಮಾಡಿದ ಹುಚ್ಚು ಕುದುರೆ

ಕಾಡಾನೆ ಓಡಾಟ; ಜನರಲ್ಲಿ ಭಯ ಹಾಸನ: ಕಾಡಾನೆ ಓಡಾಟದಿಂದ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಳೆಕೆರೆ ಗ್ರಾಮದ ಜನರಿಗೆ ಆತಂಕ ಎದುರಾಗಿದೆ. ಏಪ್ರಿಲ್ 3 ರಂದು ಶಿವಣ್ಣ ಎಂಬುವವರನ್ನು ತುಳಿದು ಸಾಯಿಸಿದ್ದ ಕಾಡಾನೆ ಇದೀಗ ಮತ್ತೆ ಗ್ರಾಮಕ್ಕೆ ನುಗ್ಗಿದೆ. ನರಹಂತಕ ಕಾಡಾನೆ ಕಂಡು ಭಯಗೊಂಡಿರುವ ಗ್ರಾಮಸ್ಥರು ಆನೆಯನ್ನು ಕಾಡಿಗಟ್ಟುವಂತೆ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ

ಏಪ್ರಿಲ್​ 10ರ ತನಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಪೊಲೀಸ್ ಶ್ವಾನಗಳಿಗೆ ಕೂಲರ್; ಬಳ್ಳಾರಿ ಶ್ವಾನ ದಳಕ್ಕೆ ವಿಶೇಷ ಉಪಚಾರ!

(Woman death in Elephant Attack at Madikeri)