ಕೂಡಲೇ ಸಾರಿಗೆ ನೌಕರರ ‌ಸಮಸ್ಯೆಯನ್ನು ಬಗೆಹರಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ

| Updated By: ganapathi bhat

Updated on: Apr 07, 2021 | 5:24 PM

ಸಾರಿಕೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಕಷ್ಟವಾಗಿದೆ. ಕೂಡಲೆ ಸಾರಿಗೆ ನೌಕರರ ‌ಸಮಸ್ಯೆಯನ್ನ ಬಗೆ ಹರಿಸುವ ಕೆಲಸ ಸರಕಾರ‌ ಮಾಡಬೇಕಾಗಿದೆ

ಕೂಡಲೇ ಸಾರಿಗೆ ನೌಕರರ ‌ಸಮಸ್ಯೆಯನ್ನು ಬಗೆಹರಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಬೀದರ್: ಕರ್ನಾಟಕ ಸರ್ಕಾರದ ವಿರುದ್ಧ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ಇತರ ನಾಲ್ಕು ಸಾರಿಗೆ ನಿಗಮದ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಅದೆಷ್ಟೋ ಕಡೆಗಳಲ್ಲಿ ಪ್ರಯಾಣಿಕರು ಕಾಲ್ನಡಿಗೆಯಲ್ಲಿಯೇ ಪ್ರಯಾಣ ಕೈಗೊಳ್ಳುವಂತಾಗಿದೆ. ಇನ್ನು ಕೆಲವೆಡೆ ಪುಟ್ಟ ಕಂದಮ್ಮನನ್ನು ಹೊತ್ತ ಮಹಿಳೆಯರು, ಆಸ್ಪತ್ರೆಗೆಂದು ಹೊರಟಿದ್ದ ವೃದ್ಧರು, ಬೆಳಿಗ್ಗೆಯೇ ಕೆಲಸಕ್ಕೆ ಹಾಜರಾಗಬೇಕಿದ್ದ ಉದ್ಯೋಗಿಗಳು ಬಸ್​ಗಳಿಲ್ಲದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು. ಕೆಲವು ಜಿಲ್ಲೆಗಳಲ್ಲಿ ಮುಷ್ಕರದ ಬಿಸಿ ಅತಿಯಾಗಿಯೇ ತಟ್ಟಿತ್ತು. 

ಈ ಕುರಿತಾಗಿ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ  ಕಷ್ಟವಾಗಿದೆ. ಕೂಡಲೇ ಸಾರಿಗೆ ನೌಕರರ ‌ಸಮಸ್ಯೆಯನ್ನ ಬಗೆ ಹರಿಸುವ ಕೆಲಸ ಸರಕಾರ‌ ಮಾಡಬೇಕಾಗಿದೆ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಹೇಳಿಕೆ ನೀಡಿದ್ದಾರೆ.

ಯಾವುದೇ ಸರಕಾರವಾದರು ಕೂಡಾ ಅವರ ಸಮಸ್ಯೆ ‌ಸರಿಪರಿಸುವ ಕೆಲಸ ಮಾಡಬೇಕು. ಖಾಸಗಿ ಬಸ್ ಓಡಿಸುತ್ತೇವೆ ಎನ್ನುವುದಾಗಲೀ ಅಥವಾ ಎಸ್ಮಾ ಜಾರಿಮಾಡುತ್ತೇವೆ ಎನ್ನುವುದು ಬೆದರಿಕೆಯ ತಂತ್ರ ಸರಕಾರ ಹಾಗೆ ಮಾಡಬಾರದು. ಸಾರಿಗೆ ನೌಕರರ ನ್ಯಾಯುತ ಬೇಡಿಕೆ ಈಡೇರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಕೊಪ್ಪಳದ ಎಂದಿನಂತೆ ಬಸ್​ ಸಂಚಾರ
ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಯಲ್ಲಿ ಇಲ್ಲಿನ ಜನರಿಗೆ ಯಾವುದೇ ಬಿಸಿ ತಟ್ಟಿಲ್ಲ. ಎಂದಿನಂತೆಯೇ ಪ್ರಯಾಣಿಕರು ಬಸ್​ನಲ್ಲಿ ಸಂಚರಿಸುತ್ತಿದ್ದಾರೆ. ಬೆಳಿಗ್ಗೆ ಐದು ಗಂಟೆಯಿಂದಲೇ ಬಸ್ ಸಂಚಾರ ಆರಂಭಗೊಂಡಿದೆ. ಪ್ರತಿನಿತ್ಯದಂತೆ ಸಾರಿಗೆ ನೌಕರರು ಕೆಲಸಕ್ಕೆ ಹಾಜಾರಾಗಿದ್ದಾರೆ. ಮುಷ್ಕರದ ಬಿಸಿ ತಟ್ಟಬಹುದು ಎಂಬ ಕಾರಣಕ್ಕೆ ಬಸ್​ಸ್ಟಾಂಡಿನಲ್ಲಿ ಪೊಲೀಸರು ಕಾವಲು ನಿಂತಿದ್ದಾರೆ. ಬಸ್ ಸಂಚಾರ ಆರಂಭಿಸುವಂತೆ ಸಿಬ್ಬಂದಿಗೆ, ವಿಭಾಗೀಯ ನಿಯಂತ್ರಣಾಧಿಕಾರಿ ಎ.ಹೆಚ್​ ಮುಲ್ಲಾ ಒತ್ತಾಯ ಮಾಡಿದ್ದಾರೆ. ಹೀಗಾಗಿ ಒತ್ತಡಕ್ಕೆ ಮಣಿದು ನಿಲ್ದಾಣದಲ್ಲಿ ಬಸ್ ನಿಲ್ಲಿಸಲಾಗಿದೆ. ಆದರೆ, ರೂಟ್‌ಗೆ ತೆರಳುವುದಕ್ಕೆ ಚಾಲಕರ ಹಿಂದೇಟು ಹಾಕುತ್ತಿದ್ದಾರೆ.

ಯಾದಗಿರಿಯಲ್ಲಿ ಬಸ್​ಗಳಿಲ್ಲದೇ ತಾಯಿ ಜೊತೆ 5 ತಿಂಗಳ ಮಗು ಪರದಾಟ
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಸ್ ಇಲ್ಲದೆ ತಾಯಿ ಮಗು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗೆ ಹೋಗಲು ತನ್ನ 5 ತಿಂಗಳ ಮಗುವಿನ ಜೊತೆ ತಾಯಿ ಬಂದಿದ್ದರು. ಬಸ್​ಗಳಿಲ್ಲದೇ ತಾಯಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೊನಗೇರ ಗ್ರಾಮದ ಕಮಲಮ್ಮ ತನ್ನ ಪುಟ್ಟ ಕಂದಮ್ಮನೊಂದಿಗೆ ಆಸ್ಪತ್ರೆಗೆ ತೆರಳಬೇಕಿತ್ತು.
ಇದನ್ನೂ ಓದಿ: Bus Strike: ಸಾರಿಗೆ ಸಿಬ್ಬಂದಿ ನೌಕರರು ಹಠಮಾರಿತನದಿಂದ ಹೊರಬರಬೇಕು: ಸಚಿವ ಲಕ್ಷ್ಮಣ ಸವದಿ

Bus Strike: ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗಿಂತ ಸಂಬಳಕ್ಕೆ ಸಾಕಷ್ಟು ಹಣ ಖರ್ಚಾಗುತ್ತಿದೆ: ಕಂದಾಯ ಸಚಿವ ಆರ್.ಅಶೋಕ್