ಬೆಂಗಳೂರು: ಕಾತುರದಿಂದ ಕಾಯುತ್ತಿದ್ದ ಬಸ್ ಪ್ರಯಾಣಿಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೊರೊನಾ ವಿರುದ್ಧದ ಹೋರಾಟದಿಂದಾಗಿ ರಸ್ತೆಗಿಳಿಯದೇ ಸ್ತಗಿತಗೊಂಡಿದ್ದ ಕೆಂಪು ಬಸ್ಗಳು ನಾಳೆಯಿಂದ ರಸ್ತೆಗಿಳಿಯಲಿವೆ. ನಾಳೆಯಿಂದ ಸರ್ಕಾರಿ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಒಂದು ಬಸ್‌ನಲ್ಲಿ 30 ಜನರಿಗೆ ಮಾತ್ರ ಅವಕಾಶವಿರುತ್ತದೆ. ರಾಜ್ಯದೊಳಗೆ ಮಾತ್ರ KSRTC ಬಸ್‌ಗಳ ಸಂಚಾರ ನಡೆಸಲಿವೆ.
ಬಿಎಂಟಿಸಿ ಬಸ್ ಸಂಚಾರ ಬೇಡ:ಸವದಿ
ಮೇ ಅಂತ್ಯದವರೆಗೆ ಬಿಎಂಟಿಸಿ ಬಸ್ ಸಂಚಾರ ಬೇಡ ಎಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಸಲಹೆ ನೀಡಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಪಾಲಿಸಬೇಕಿರುವ ನಿಯಮಗಳು:
-ಪ್ರತಿ KSRTC ಬಸ್‌ನಲ್ಲಿ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ
-ಎಸಿ ಬಸ್‌ಗಳ ಸಂಚಾರಕ್ಕೆ ಅನುಮತಿ ಇಲ್ಲ
-ಪ್ರಯಾಣಿಕರು ಸಾಮಾಜಿಕ ಅಂತರ ಪಾಲಿಸೋದು ಕಡ್ಡಾಯ
-ಡಬಲ್ ಸೀಟ್ನಲ್ಲಿ ಒಬ್ಬರಿಗೆ, ಮೂರು ಆಸನದ ಸೀಟ್ನಲ್ಲಿ ಇಬ್ಬರಿಗೆ ಮಾತ್ರ ಕೂರಲು ಅವಕಾಶ
-ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು
-ಬಸ್ ಹತ್ತುವ ಮುನ್ನ ಥರ್ಮಲ್ ಸ್ಕ್ಯಾನ್, ಕೈಗೆ ಸ್ಯಾನಿಟೈಸರ್ ಹಾಕುವುದು ಕಡ್ಡಾಯ
-ಬಸ್‌ನಲ್ಲಿ ನಿಂತು ಕೊಂಡು ಪ್ರಯಾಣಿಸಲು ಅವಕಾಶ ಇಲ್ಲ
-ಕಂಟೇನ್ಮೆಂಟ್ ಝೋನ್‌ಗಳಲ್ಲಿ ಬಸ್ ನಿಲ್ಲಿಸಲ್ಲ
-ಮಾರ್ಗ ಮಧ್ಯದಲ್ಲಿ ತಿಂಡಿ ಊಟಕ್ಕೆ ನಿಲ್ಲಿಸದಿರಲು ಪ್ಲಾನ್
-ಪ್ರಯಾಣಿಕರು ತಮ್ಮ ವಿಳಾಸ, ಮೊಬೈಲ್, ಹೆಸರು ಕಡ್ಡಾಯವಾಗಿ ನೀಡಬೇಕು
-ಪ್ರತಿ ಬಸ್ ನಿಲ್ದಾಣದಲ್ಲಿ ಹೆಲ್ತ್ ಚೆಕ್ ಮಾಡುವುದು ಕಡ್ಡಾಯ
-ಬಸ್ ಒಳಗೆ ಒಬ್ಬ ಪ್ರಯಾಣಿಕನಿಂದ ಮತ್ತೊಮ್ಮೆ ಪ್ರಯಾಣಿಕ ನೀರು ಕೇಳಿ ಕುಡಿಯುವಂತಿಲ್ಲ.
-ಬಳಕೆ ಮಾಡಿದ ಬಾಟಲ್ ಬೇರೆಯವರು ಬಳಸುವಂತಿಲ್ಲ
-ಲಗೇಜ್ಗಳನ್ನ ತಂದರೆ ಸ್ಯಾನಿಟೈಸರ್ ಸ್ಪ್ರೇ ಕಡ್ಡಾಯ
ಹಾಗೂ 70 ವರ್ಷ ಮೇಲ್ಪಟ್ಟವರು, ಗರ್ಭಿಣಿ, ಮಕ್ಕಳಿಗೆ ಬಸ್ ಪ್ರಯಾಣಕ್ಕೆ ಅವಕಾಶ ನೀಡಬೇಕ ಎಂಬುವುದರ ಬಗ್ಗೆ ಚರ್ಚೆ ನಡೆಯುತ್ತಿದೆ.
Published On - 12:49 pm, Mon, 18 May 20