ಕೆಎಸ್ಆರ್ಟಿಸಿ ಕಂಡಕ್ಟರ್ ಈರಯ್ಯನ ಸಮಯ ಪ್ರಜ್ಞೆ, ಪ್ರಾಮಾಣಿಕತೆ: ಪ್ರಯಾಣಿಕರ ಕೈಸೇರಿದ ಎಲ್ಲ ಒಡವೆ!
ನಂಜನಗೂಡು ಘಟಕದ ವ್ಯವಸ್ಥಾಪಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಅಷ್ಟೂ ಒಡವೆಗಳನ್ನು ಹಿಂದಿರುಗಿಸಲಾಗಿದೆ. ಇದೇ ವೇಳೆ ಕಂಡಕ್ಟರ್ ಈರಯ್ಯನಿಗೆ ಚಾಮರಾಜನಗರ ಪೊಲೀಸ್ ಡಿವೈಎಸ್ಪಿ ಸನ್ಮಾನ ಮಾಡಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನಂಜನಗೂಡು: ಸಾರ್ವತ್ರಿಕ ಸಾರಿಗೆ ಸಂಸ್ಥೆಯ ಸಿಬ್ಬಂದಿ ಕರ್ತವ್ಯ ನಿಷ್ಠೆಯ ಜೊತೆಗೆ ಸಾಕಷ್ಟು ಸಮಯ ಪ್ರಜ್ಞೆ ಮತ್ತು ಪ್ರಾಮಾಣಿಕತೆ ಮೆರೆದರೆ ಪ್ರಯಾಣಿಕರ ಪ್ರಯಾಣ ಸುರಕ್ಷಿತವಾಗಿರುವುದರ ಜೊತೆಗೆ ಬೆಲೆಬಾಳುವ ಅವರ ಸಾಮಾನು ಸರಂಜಾಮು ಸಹ ಸುರಕ್ಷಿತವಾಗಿರುತ್ತದೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ನಂಜನಗೂಡು ಘಟಕಕ್ಕೆ ಸೇರಿದ ವಾಹನ ಸಂಖ್ಯೆಕೆಎ 10 ಎಫ್- 0157 ವಾಹನದಲ್ಲಿ ನಿನ್ನೆ ಮೈಸೂರಿನಿಂದ ನಂಜನಗೂಡಿಗೆ ಸಂಚಾರ ಮಾಡುವಾಗ ದಾವಣಗೆರೆಯ 7ಜನ ಪ್ರಯಾಣಿಕರು ಬಸ್ ನಲ್ಲಿ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಕಳೆದುಕೊಂಡಿದ್ದರು. ಆದರೆ ಕೆಎಸ್ಆರ್ಟಿಸಿ ನಿರ್ವಾಹಕ ಈರಯ್ಯ ಅವರ ಸಮಯ ಪ್ರಜ್ಞೆಯಿಂದ ಎಲ್ಲ ಒಡವೆಗಳೂ ಸುರಕ್ಷಿತವಾಗಿ ವಾರಸುದಾರರನ್ನು ತಲುಪಿದೆ.
ನಂಜನಗೂಡು ಘಟಕದ ವ್ಯವಸ್ಥಾಪಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ಅಷ್ಟೂ ಒಡವೆಗಳನ್ನು ಹಿಂದಿರುಗಿಸಲಾಗಿದೆ. ಇದೇ ವೇಳೆ ಕಂಡಕ್ಟರ್ ಈರಯ್ಯನಿಗೆ ಚಾಮರಾಜನಗರ ಪೊಲೀಸ್ ಡಿವೈಎಸ್ಪಿ ಸನ್ಮಾನ ಮಾಡಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಎಸ್ಆರ್ಟಿಸಿ ಎಂಡಿ ಶಿವಯೋಗಿ ಸಿ. ಕಳಸದ ಅವರೂ ಸಹ ನಿರ್ವಾಹಕ ಈರಯ್ಯನ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿದ್ದಾರೆ.