ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿ ಮೆಕ್ಯಾನಿಕ್ ಅರೆಸ್ಟ್​

| Updated By: ಸಾಧು ಶ್ರೀನಾಥ್​

Updated on: Aug 26, 2021 | 1:12 PM

ಬೆಳಗಾವಿ: ರಾಜ್ಯದಲ್ಲಿ ನಿನ್ನೆ ಇಂದು ಬರೀ ಅಪರಾಧ ಪ್ರಕರಣಗಳದ್ದೇ ಸುದ್ದಿ. ಇಲ್ಲಿ ಮತ್ತೊಂದು ಕ್ರೈಂ ನ್ಯೂಸ್​. ಕುಂದಾ ನಗರಿಯಲ್ಲಿ ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಇದಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ದುರಂತವೆಂದರೆ ಆರೋಪಿಯೂ KSRTC ಸಿಬ್ಬಂದಿ. ಬೆಳಗಾವಿ ನಗರದಲ್ಲಿ KSRTC ಮಹಿಳಾ ಸಿಬ್ಬಂದಿ ಮನೆಯಲ್ಲಿ ಅತ್ಯಾಚಾರಕ್ಕೆ ಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದರಿ ಮಹಿಳೆ ಜೋರಾಗಿ ಕೂಗಿಕೊಂಡಾಗ ಆರೋಪಿ ಸಿಬ್ಬಂದಿ ಓಡಿಹೋಗಿದ್ದಾನೆ. ಮಹಿಳಾ ಸಿಬ್ಬಂದಿ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಆ […]

ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿ ಮೆಕ್ಯಾನಿಕ್ ಅರೆಸ್ಟ್​
ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನ, ಆರೋಪಿ ಮೆಕಾನಿಕ್ ಅರೆಸ್ಟ್​
Follow us on

ಬೆಳಗಾವಿ: ರಾಜ್ಯದಲ್ಲಿ ನಿನ್ನೆ ಇಂದು ಬರೀ ಅಪರಾಧ ಪ್ರಕರಣಗಳದ್ದೇ ಸುದ್ದಿ. ಇಲ್ಲಿ ಮತ್ತೊಂದು ಕ್ರೈಂ ನ್ಯೂಸ್​. ಕುಂದಾ ನಗರಿಯಲ್ಲಿ ಕೆಎಸ್ಆರ್‌ಟಿಸಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಇದಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ದುರಂತವೆಂದರೆ ಆರೋಪಿಯೂ KSRTC ಸಿಬ್ಬಂದಿ.

ಬೆಳಗಾವಿ ನಗರದಲ್ಲಿ KSRTC ಮಹಿಳಾ ಸಿಬ್ಬಂದಿ ಮನೆಯಲ್ಲಿ ಅತ್ಯಾಚಾರಕ್ಕೆ ಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದರಿ ಮಹಿಳೆ ಜೋರಾಗಿ ಕೂಗಿಕೊಂಡಾಗ ಆರೋಪಿ ಸಿಬ್ಬಂದಿ ಓಡಿಹೋಗಿದ್ದಾನೆ. ಮಹಿಳಾ ಸಿಬ್ಬಂದಿ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದರು. ಆ ವೇಳೆ ಆಕೆಯನ್ನು KSRTC ಸಿಬ್ಬಂದಿಯೊಬ್ಬ ಹಿಂಬಾಲಿಸಿದ್ದ.

ತಮ್ಮದೇ ಕಚೇರಿಯ ಸಿಬ್ಬಂದಿ ಎಂದು ಮಹಿಳಾ ಸಿಬ್ಬಂದಿ ಆತನನ್ನು ಮನೆಗೆ ಕರೆದಿದ್ದಾರೆ. ಸಹೋದ್ಯೋಗಿಗೆ ಟೀ ಮಾಡಿಕೊಡೋಣಾ ಎಂದು ಮಹಿಳಾ ಸಿಬ್ಬಂದಿ ಮನೆಯ ಒಳಗಡೆ ಹೋದಾಗ ಆರೋಪಿ ಅತ್ಯಾಚಾರ ಮಾಡುವುದಕ್ಕೆ ಯತ್ನಿಸಿದ್ದಾನೆ. ಮಹಿಳೆ ಕಿರುಚಿಕೊಂಡಾಗ ಅಕ್ಕಪಕ್ಕದ ಜನರು ಸ್ಥಳಕ್ಕೆ ಬರುತ್ತಿದ್ದಂತೆ ಬಸವರಾಜ ಎಸ್ಕೇಪ್ ಆಗಿದ್ದಾನೆ.

ಕೆಎಸ್ಆರ್‌ಟಿಸಿ ಸಿಬ್ಬಂದಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ಬಸವರಾಜ ವಿ. ನರಸನ್ನವರ್​ ಎಂಬಾತನನ್ನು ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬುಧ ವಾರ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಬಸವರಾಜ, ಬೆಳಗಾವಿ ಮೂರನೇ ಬಸ್ ಘಟಕದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ಕೆಎಸ್ಆರ್‌ಟಿಸಿ ಡಿಸಿ ಪಿ‌.ವೈ. ನಾಯಕ್ ಬಸವರಾಜ ಅಮಾನತ್ತು ಮಾಡಿದ್ದಾರೆ.

ರೇಪ್ ಮಾಡಿ ವಿಡಿಯೋ ಮಾಡಿದ್ದ ಕಾಮುಕರು ದೂರು ಕೊಡದಂತೆ ಬೆದರಿಸಿದ್ದರು; ಸ್ನೇಹಿತನಿಗೆ ಕಲ್ಲಿನಿಂದ ಹೊಡೆದಿದ್ದರು

(ksrtc mechanic in belagavi tries to rape woman colleague arrested dismissed)

Published On - 1:11 pm, Thu, 26 August 21