ಚಿಕ್ಕಮಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಇಬ್ಬರು ನೀರುಪಾಲು

ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ ಭದ್ರಾವತಿ ತಾಲೂಕಿನ ಹಳೇ ಜೆ.ಡಿ.ಕಟ್ಟೆಯವರು. ಸದ್ಯ ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಇಬ್ಬರು ನೀರುಪಾಲು
ನೀರು ಪಾಲಾದ ಮಂಜು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ಚಿಕ್ಕಮಗಳೂರು: ಕಾರಿನ ಜೊತೆಗೆ ನೀರಿಗೆ ಹಾರಿ ಕುಟುಂಬವೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಸಂಭವಿಸಿದೆ. ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಅದರಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ಇನ್ನಿಬ್ಬರು ಪಾರಾಗಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ ಭದ್ರಾವತಿ ತಾಲೂಕಿನ ಹಳೇ ಜೆ.ಡಿ.ಕಟ್ಟೆಯವರು. ಸದ್ಯ ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಸ್ವಿಫ್ಟ್ ಕಾರಿನ ಸಮೇತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಪತಿ ಮಂಜು, ಅತ್ತೆ ಸುನಂದಮ್ಮ ನೀರು ಪಾಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ನೀರು ಕುಡಿಯಲು ಹೋದವರು ನೀರುಪಾಲು
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಮಗ ಸಾವನ್ನಪ್ಪಿದ್ದಾರೆ. ನೀರು ಕುಡಿಯಲು ಹೋಗಿ 40 ವರ್ಷದ ತೇಜೋವತಿ ಎಂಬ ಮಹಿಳೆ ಮುಳುಗಿದ್ದಾರೆ. ತಾಯಿಯನ್ನು ರಕ್ಷಿಸಲು ಹೋಗಿದ್ದ ಮಗ ಚಂದ್ರೇಗೌಡ ಕೂಡಾ ನೀರು ಪಾಲಾಗಿದ್ದಾನೆ. ಈ ಘಟನೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಲು ಜಾರಿ ಕಾಲುವೆಗೆ ಬಿದ್ದ ಯುವಕ
ಕಾಲು ಜಾರಿ ಕಾಲುವೆಗೆ ಬಿದ್ದ ಯುವಕ ಮೃತಪಟ್ಟಿದ್ದು, ಕುಂಬಳೂರು ಬಳಿ ಆತನ ಶವ ಪತ್ತೆಯಾಗಿದೆ. ನಿನ್ನೆ (ಆಗಸ್ಟ್ 26) ಮುಬಾರಕ್ (21) ಎಂಬ ಯುವಕ ಕಾಲು ಜಾರಿ ಕಾಲುವೆಗೆ ಬಿದ್ದಿದ್ದ. ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ಇರುವ ಬಸವರಾಜಪುರದ ಭದ್ರಾ ಕಾಲುವೆಯಲ್ಲಿ ಘಟನೆ ನಡೆದಿತ್ತು. ಹತ್ತು ಕಿಲೋಮೀಟರ್ ದೂರದ ಕುಂಬಳೂರು ಬಳಿ ಇದೀಗ ಶವ ಪತ್ತೆಯಾಗಿದೆ. ಗಾರೆ ಕೆಲಸಕ್ಕೆ ಹೋಗಿದ್ದ ಮುಬಾರಕ್ ಕೆಲಸ ಮುಗಿಸಿ ಕೈ ಕಾಲು ತೊಳೆದುಕೊಳ್ಳಲು ಹೋದಾಗ ದುರ್ಘಟನೆ ನಡೆದಿದೆ.

ಇದನ್ನೂ ಓದಿ

Sidlaghatta: ಗಂಡನ ಮೇಲೆ ಶೂಟೌಟ್​, ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ಸೇರಿ 6 ಆರೋಪಿಗಳು ಅಂದರ್

ಅತ್ಯಾಚಾರಿ ಶಾಸಕ, ಮಾಜಿ ಸಚಿವರನ್ನು ಹೊಂದಿರುವ ಬಿಜೆಪಿಗೆ ಅತ್ಯಾಚಾರಿಗಳೆಂದರೆ ಹೆಚ್ಚು ಪ್ರೀತಿ -ಬಿಜೆಪಿ ವಿರುದ್ಧ ಕಿಡಿಕಾರಿದ ಕಾಂಗ್ರೆಸ್

(Four members of one family Attempt Suicide with car at Chikkamagaluru)

Read Full Article

Click on your DTH Provider to Add TV9 Kannada