Sidlaghatta: ಗಂಡನ ಮೇಲೆ ಶೂಟೌಟ್, ಹತ್ಯೆಗೆ ಸುಪಾರಿ ನೀಡಿದ್ದ ಪತ್ನಿ ಸೇರಿ 6 ಆರೋಪಿಗಳು ಅಂದರ್
ಗೋವಿಂದಪ್ಪನ ಪತ್ನಿ ಸುಮಿತ್ರಾಗೆ ಅಕ್ರಮ ಸಂಬಂಧವಿತ್ತು. ಅದನ್ನು ಪೊರೆಯಲು ಪತ್ನಿ ಸುಮಿತ್ರಾ ಗಂಡನನ್ನು ಸಾಯಿಸುವಂತೆ ಲೋಡೆಡ್ ಗನ್ ಅನ್ನು ತನ್ನ ಪ್ರಿಯಕರನಿಗೆ ನೀಡಿ, ಸುಪಾರಿ ನೀಡಿದ್ದಳು. ಅದರಂತೆ ಪ್ರಿಯಕರ ಮುನಿಕೃಷ್ಣ ಇನ್ನೂ ನಾಲ್ಕು ಮಂದಿಯ ಜೊತೆಗೂಡಿ ಗೋವಿಂದಪ್ಪನ ಮೇಲೆ ಗುಂಡು ಹಾರಿಸಿ, ಹತ್ಯೆಗೆ ಯತ್ನಿಸಿದ್ದರು.
ಚಿಕ್ಕಬಳ್ಳಾಪುರ: ಗಂಡನನ್ನು ಶೂಟೌಟ್ ಮಾಡಿ ಸಾಯಿಸುವಂತೆ ಸುಪಾರಿ ನೀಡಿದ್ದ ಪತ್ನಿ ಸೇರಿದಂತೆ 6 ಮಂದಿ ಆರೋಪಿಗಳನ್ನು ಶಿಡ್ಲಘಟ್ಟ ನಗರ ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪ್ಪನ ಪತ್ನಿ ಸುಮಿತ್ರಾಗೆ ಅಕ್ರಮ ಸಂಬಂಧವಿತ್ತು. ಅದನ್ನು ಪೊರೆಯಲು ಪತ್ನಿ ಸುಮಿತ್ರಾ ಗಂಡನನ್ನು ಸಾಯಿಸುವಂತೆ ಲೋಡೆಡ್ ಗನ್ ಅನ್ನು ತನ್ನ ಪ್ರಿಯಕರನಿಗೆ ನೀಡಿ, ಸುಪಾರಿ ನೀಡಿದ್ದಳು. ಅದರಂತೆ ಪ್ರಿಯಕರ ಮುನಿಕೃಷ್ಣ ಇನ್ನೂ ನಾಲ್ಕು ಮಂದಿಯ ಜೊತೆಗೂಡಿ ಗೋವಿಂದಪ್ಪನ ಮೇಲೆ ಗುಂಡು ಹಾರಿಸಿ, ಹತ್ಯೆಗೆ ಯತ್ನಿಸಿದ್ದರು. ಇದೆ ತಿಂಗಳ 18ರಂದು ಶಿಡ್ಲಘಟ್ಟ ನಗರದಲ್ಲಿ ಹತ್ಯೆ ಯತ್ನ ನಡೆದಿತ್ತು. ಆದರೆ ಗುಂಡೇಟು ತಿಂದ ಗೋವಿಂದಪ್ಪ ಪ್ರಾಣಾಪಾಯದಿಂದ ಪಾರಾಗಿದ್ದ. ಪ್ರಿಯಕರ ಮುನಿಕೃಷ್ಣನಿಗೆ ಆತನ ಆತನ ಸಹೋದರ ಕಿಟ್ಟಿ ಅಲಿಯಾಸ್ ರಾಮಕೃಷ್ಣ, ಹರೀಶ, ಪ್ರವೀಣ್ ಮತ್ತು ಮುರಳಿ ಸಾಥ್ ನೀಡಿದ್ದರು.
ಗೋವಿಂದಪ್ಪನ ಪತ್ನಿ ಸುಮಿತ್ರಾ 2 ಲಕ್ಷ ರೂಪಾಯಿಗೆ ಪ್ರಿಯಕರನ ಸಹೋದರನಿಗೆ ಸುಪಾರಿ ನೀಡಿದ್ದಳು. ಮಸಲ್ ಲೊಡೇಡ್ ಗನ್ ಬಳಸಿ ಗೋವಿಂದಪ್ಪ ಹತ್ಯೆಗೆ ಯತ್ನಿಸಲಾಗಿತ್ತು. ಗೋವಿಂದಪ್ಪಗೆ ಐದಾರು ಗುಂಡು ತಗುಲಿದ್ದರೂ ಪ್ರಾಣಾಪಯದಿಂದ ಬಚಾವಾಗಿದ್ದ. ಗೋವಿಂದಪ್ಪನ ದೂರಿನ ಮೇರೆಗೆ ಶಿಡ್ಲಘಟ್ಟ ನಗರ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಸುಮಿತ್ರಾ, ಸುಮಿತ್ರಾ ಪ್ರಿಯಕರ ಮುನಿಕೃಷ್ಣ, ಆತನ ಸಹೋದರ ಕಿಟ್ಟಿ ಅಲಿಯಾಸ್ ರಾಮಕೃಷ್ಣ, ಹರೀಶ, ಪ್ರವೀಣ್ ಮತ್ತು ಮುರಳಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸರು ಬಂಧಿಸಿದ್ದಾರೆ.
Also Read: ದುಡ್ಡಿಲ್ಲ ಎಂದು ಗಂಡನನ್ನೇ ಬಿಟ್ಟು ಹೋದ ಪತ್ನಿ? ಗೋಳು ತೋಡಿಕೊಳ್ಳುತ್ತಿರುವ ಕನ್ನಡದ ಹಾಸ್ಯ ಕಲಾವಿದ ರವಿ ದೊಡ್ಡಬಳ್ಳಾಪುರದ ಮಾಜಿ ಶಾಸಕ ಮತ್ತು ಪತ್ನಿ ವಿರುದ್ಧ ಕೇಸ್ ದಾಖಲು; 3 ಕೋಟಿ ರೂ. ಪಡೆದು ವಂಚನೆ ಆರೋಪ
(illicit relationship wife gives supari to kill husband but lands in jail)